The Public Spot
ರಾಜಕೀಯರಾಜ್ಯ

ಕುಮಾರಸ್ವಾಮಿ ಹೋರಾಟಕ್ಕೆ ಕೇಸರಿ ಪಾಳಯ ಕಂಗಾಲು.. ಸೈಲೆಂಟ್​..

ಸಿದ್ದರಾಮಯ್ಯ ಸ್ಟಿಂಗ್​ ವಿಚಾರದಲ್ಲಿ ರಾಜ್ಯ ಸರ್ಕಾರದ ಜನ್ಮ ಜಾಲಾಡಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ. ಆದರೆ ಕೇಸರಿ ಪಡೆ ಮಾತ್ರ ಈ ವಿಚಾರದಿಂದ ಆದಷ್ಟು ಅಂತರ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ಕುಮಾರಸ್ವಾಮಿ ಹೋರಾಟಕ್ಕೆ ಬೆಂಬಲ ಸೂಚಿಸುವ ಕೆಲಸ ಮಾಡಿದ್ದಾರೆ. ಯತ್ನಾಳ್ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದು, ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆಯಲ್ಲೂ ಭಾಗಿ ಆಗಲು ತೆರಳಿದ್ರು.

ಕಮಿಷನರ್​ ಕಚೇರಿ ಬಳಿ ಮಾತನಾಡಿದ ಯತ್ನಾಳ್​, ಕುಮಾರಸ್ವಾಮಿಯವರು ಕಮಿಷನರ್ ಭೇಟಿ ಮಾಡಿದ್ದಾರೆ. ಕರ್ನಾಟಕದಲ್ಲಿ ಸ್ಟಿಂಗ್, ಸಿಡಿ ತಯಾರಿಸುವ ಕಂಪನಿಗಳು ಇದ್ದಾವೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕುಮಾರಸ್ವಾಮಿ ಧರಣಿ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡೋದು ದುಡ್ಡು ಮಾಡ್ಕೊಳ್ಳೋದು, ಕೆಲವೊಂದು ಭ್ರಷ್ಟ ರಾಜಕರಣಿಗಳು ಇದನ್ನು ಮಾಡ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಬೇಜವಾಬ್ದಾರಿಯಾಗಿ ಇದ್ದಾರೆ. KPSC ಹರಗಣಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ರಾಜ್ಯದಲ್ಲಿ ಕೆಟ್ಟ ರಾಜಕಾರಣ ನಡೀತಿದೆ ಎಂದಿದ್ದಾರೆ.

ಸಿದ್ದರಾಮಯ್ಯ ದೂರು ಆಧರಿಸಿ ಸಿಡಿ ಫ್ಯಾಕ್ಟರಿ ಕಳ್ಳರನ್ನು ಹಿಡಿಯೋದು ಬಿಟ್ಟು, ಅದರ ಬಗ್ಗೆ ಮಾತಾಡಿದವರ ಬೆಂಬಲಿಗರನ್ನು ಹಿಡಿತೀದ್ದಾರೆ ಎಂದು ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ನಾನು ಕುಮಾರಸ್ವಾಮಿ ಭೇಟಿಗೆ ಬಂದಿದ್ದೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ‌ ಕೊಡೋಕೆ ಬಂದಿದ್ದೆ. ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ಭೇಟಿ ಮಾಡಲ್ಲ. ನಾವು ಹಲ್ಕಾ ಕೆಲಸ ಮಾಡಿಲ್ಲ. ಹಾಗಾಗಿ ನಾವು ಭಯ ಬೀಳೋ ಅಗತ್ಯ ಇಲ್ಲ. ಒಬ್ಬ ಗೃಹ ಮಂತ್ರಿಯಾಗಿ ಹೇಗಿರಬೇಕು ಅನ್ನೋ ಮಿನಿಮಮ್ ಕಾಮನ್ಸೆನ್ಸ್ ಇಲ್ಲ ಪ್ರಿಯಾಂಕ್ ಖರ್ಗೆಗೆ ಎಂದು ವಾಗ್ದಾಳಿ ಮಾಡಿರುವ ಯತ್ನಾಳ್,

ಪ್ರಿಯಾಂಕ್ ಖರ್ಗೆಯವರು ಎಲ್ಲರನ್ನು ಜೈಲಿಗೆ ಹಾಕ್ತಾರಾ..? ಎಷ್ಡು ಜನರನ್ನು‌ ಜೈಲಿಗೆ ಹಾಕ್ತಾರೆ ಅಂತಾನೂ ಪ್ರಶ್ನೆ ಮಾಡಿರುವ ಯತ್ನಾಳ್​, ಸಿಡಿ ಮಾಡುವ ಒಂದು ಟೀಮ್ ಇದೆ, ಐಟಿ ಟೀಮ್ ಇದೆ. ಅಧಿಕಾರಿಗಳು, ಸ್ವಾಮೀಜಿಗಳು, ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡ್ತಾರೆ. ಇದು ಬೇರೆ ಎಲ್ಲೋ ಇಲ್ಲ. ಇಲ್ಲೇ ಬೆಂಗಳೂರಲ್ಲೇ ಇದೆ. ಆರೋಪಿ ನಂಬರ್ 1 ಇದ್ದಾನಲ್ಲ, ಅವನನ್ನು ಹಿಡಿದ್ರೆ ನಮ್ಮ ರಾಜಕಾರಣ ಸ್ವಚ್ಛ ಆಗುತ್ತದೆ. ಎಲ್ಲರ ಸಿಡಿ ಇದೆ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಒಬ್ಬ ಸ್ವಾಮೀಜಿ ಹೇಳ್ತಾನೆ ಹತ್ತು ವರ್ಷ ಇವನೇ ಸಿಎಂ ಅಂತ. ಹಂಗಾದ್ರೆ ಬೆಂಗಳೂರು ಐಟಿ ಬಿಟಿ ಸಿಟಿ ಹೋಗಿ ಸಿಡಿ-ಸಿಡಿ ಸಿಟಿ ಆಗುತ್ತದೆ ಅನ್ನೋ ಮೂಲಕ ನೇರವಾಗಿಯೇ ಬೊಟ್ಟು ಮಾಡಿದ್ದಾರೆ.

ಒಟ್ಟಾರೆ, ಯತ್ನಾಳ್​ ಮಾತ್ರ ಕುಮಾರಸ್ವಾಮಿ ಆರೋಪಕ್ಕೆ ಸಾಥ್​ ಕೊಡುವ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಆಶೋಕ್​ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ನಮಗ್ಯಾಕೆ..? ಎನ್ನುವಂತೆ ಇದ್ದಾರೆ. ಸಿಡಿ ಭಯವೋ ಸೋಲುವ ಭಯವೋ ಅನ್ನೋ ಚರ್ಚೆಗಳು ಶುರು ಆಗಿವೆ. ಆದರೂ ಸಿದ್ದರಾಮಯ್ಯ ರಾಜ್ಯದಲ್ಲಿ ಸಾಕಷ್ಟು ಹೆಸರು ಗಳಿಸಿದ ವ್ಯಕ್ತಿ. ಸಿದ್ದರಾಮಯ್ಯನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ಮಾಡಿದವರಿಗೆ ಕಾನೂನು ಶಿಕ್ಷೆ ಕೊಡುವಂತಾಗಲಿ ಅನ್ನೋದು ಪಬ್ಲಿಕ್​ ಸ್ಪಾಟ್​ ಆಶಯ.

Related posts

ವಾಲ್ಮೀಕಿ ಪ್ರತಿಮೆ ನೆಪದಲ್ಲಿ ಬಳ್ಳಾರಿಯಲ್ಲಿ ರಕ್ತ ರಾಜಕೀಯ.. ತಪ್ಪು ಯಾರದ್ದು..?

Publicspot

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಆಗ ನಮ್ಮನ್ನು ಯಾರು

admin

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ.. ಹೌದು ನಮ್ಮ ತಪ್ಪು ಎಂದು ಒಪ್ಪಿಕೊಂಡ ಸಚಿವರು..

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

RSS Ban War; ಕರ್ನಾಟಕದ ನೆಲದಲ್ಲೇ ನಿಂತು ಸರ್ಕಾರಕ್ಕೆ ಮೋಹನ್‌ ಭಾಗವತ್‌ ತಿರುಗೇಟು..

Publicspot

CM ಕೆಲಸ ವರ್ಗಾವಣೆ ಮಾಡೋದಲ್ಲ.. ಹೈಕೋರ್ಟ್​ ಗರಂ ಆಗಿದ್ಯಾಕೆ..?

Publicspot