The Public Spot
ರಾಜಕೀಯ

ಹಾಸನ ಜಿಲ್ಲಾಧಿಕಾರಿ ಕೌಂಟರ್‌ಗೆ ಶಾಸಕ ಸಮೃದ್ಧಿ ಮಂಜುನಾಥ್‌ ವಾಗ್ದಾಳಿ

ಹಾಸನ ಜಿಲ್ಲಾಧಿಕಾರಿ ಆಪ್ತ ಸಹಾಯಕನ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಆರೋಪ ಮಾಡಿದ ಬಳಿಕ ಸ್ವತಃ ಹಾಸ ಡಿಸಿ ಲತಾ ಕುಮಾರಿ ಕೌಂಟರ್‌ ಅಟ್ಯಾಕ್‌ ಮಾಡ್ತಿದ್ದಾರೆ. ಮಲಗಿರುವ ಸಿಂಹದ ಸುತ್ತಲೂ ಬೊಗಳುತ್ತಿರುವ ನಾಯಿಗಳ ಫೋಟೋ ಹಾಕಿದ್ದರು. ಆ ಬಳಿಕ ಮಾತಿನ ಮೂಲಕ ಕೌಂಟರ್‌ ಕೊಟ್ಟಿರುವ ಲತಾಕುಮಾರಿ, ನಿಮ್ಮ ಬಗ್ಗೆ ಏನಾದರೂ ಕ್ರಿಯೇಟ್‌ ಮಾಡಿ ಹಾಕಿದ್ರೆ ಒಪ್ಪಿಕೊಳ್ತೀರಾ..? ಬೇರೊಬ್ಬರ ಬಗ್ಗೆ ಆರೋಪ ಮಾಡುವ ಮುಂಚೆ ಯೋಚನೆ ಮಾಡಬೇಕು ಅಲ್ವಾ ಅಂತಾ ಮಾತಿನ ಚಾಟಿ ಬೀಸಿದ್ರು. ಪೋಸ್ಟರ್ ಮೂಲಕ ಚಾಟಿ ಬೀಸಿದ್ದ ಲತಾಕುಮಾರಿ ವಿರುದ್ಧ ಜೆಡಿಎಸ್‌ ಶಾಸಕರು ಕೆಂಡ ಕಾರಿದ್ದಾರೆ.

ಕೇಂದ್ರ ಸಚಿವ H.D ಕುಮಾರಸ್ವಾಮಿಗೆ ಹಾಸನ ಡಿ.ಸಿ ಲತಾಕುಮಾರಿ ತಿರುಗೇಟು ಕೊಟ್ಟ ಬಳಿಕ ಹಾಸನ ಡಿಸಿ ಲತಾಕುಮಾರಿ ವಿರುದ್ಧ ಶಾಸಕ ಸಮೃದ್ದಿ ಮಂಜುನಾಥ್ ವಾಗ್ದಾಳಿ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು JDS ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ಇದು ಆ ಅಧಿಕಾರಿಯ ದುರಹಂಕಾರದ ಪರಮಾವಧಿ. ನಾವು ನಿಮ್ಮನ್ನ ಮೇಡಂ ಅಂತಾನೆ ಮಾತ್ನಾಡಿಸ್ತೀವಿ, ಅದು ನಮ್ಮ ಪಕ್ಷದ ಸಂಸ್ಕಾರ. ಅಧಿಕಾರಿಗಳನ್ನ ಈ ಮಟ್ಟಕ್ಕೆ ರಾಜ್ಯದಲ್ಲಿ ಬಳಸಿಕೊಳ್ತಿದ್ದಾರೆ. ವಿರೋಧ ಪಕ್ಷದ ನಾಯಕಿಯಂತೆ ಹಾಸನ ಡಿಸಿ ವರ್ತನೆ ಮಾಡ್ತಿದ್ದಾರೆ. ಇದು ಡಿಸಿ ಅವರ ದುರಂಹಕಾರದ ಪರಮಾವಧಿ ತೋರಿಸ್ತಿದೆ ಎಂದಿದ್ದಾರೆ.

ಯಾವುದೇ ಅಪಾದನೆ ಬಂದಲ್ಲಿ, ಅದು ಸತ್ಯವೊ, ಸುಳ್ಳೋ ಅನ್ನೋದನ್ನು ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಪೋಸ್ಟರ್ ಮೂಲಕ ಉತ್ತರ ಕೊಡೋದು ಮಾಡ್ತಿದ್ದಾರೆ. ಕಾಲ ಹೀಗೆ ಇರಲ್ಲ, ಒಂದೂವರೆ ವರ್ಷದ ನಂತರ ಕಾಲದ ಚಕ್ರ ಮರಳಿ ತಿರುಗುತ್ತದೆ. ಅದನ್ನ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಲಿ ಎಂದು ಎಚ್ಚರಿಸಿದ್ದಾರೆ. ನೀವೇನು ಆಕಾಶದಿಂದ ಇಳಿದು ಬಂದ ಅಧಿಕಾರಿಯಲ್ಲ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಮಂತ್ರಿಗೇ ಈ ರೀತಿ ಆದಲ್ಲಿ, ಸಾರ್ವಜನಿಕರಿಗೆ ತಾವು ಹೇಗೆ ಉತ್ತರ ನೀಡುತ್ತೀರಿ..? ಎಂದು ಪ್ರಶ್ನಿಸಿದ್ದಾರೆ. ರಾಜ್ಯವು ಒಂದು ಕೆಟ್ಟ ಪರಿಸ್ಥಿತಿ ಕಡೆಗೆ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

H.D ಕುಮಾರಸ್ವಾಮಿ ಅವರು ಎಂದೂ ಬೋಗಸ್ ಹೇಳಿಕೆ ಕೊಡೋದಿಲ್ಲ. ರಾಜ್ಯದ ಪ್ರಸಕ್ತ ವಿದ್ಯಮಾನ ಹೇಗಿದೆ..? ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಬರ್ತಿದ್ದಾರೆ. ಮೊನ್ನೆ ಹಾಸನದಲ್ಲಿ ಜನ ತಿರುಗಿ ಬಿದ್ದಿದ್ದಾರೆ. ಜನ ಎಲ್ಲವನ್ನೂ ನೋಡ್ತಿದ್ದಾರೆ, ಜನ ಕೆಲವೇ ದಿನಗಳಲ್ಲಿ ತಿರುಗಿ ಬೀಳ್ತಾರೆ ಎಂದು ಸರ್ಕಾರಕ್ಕೂ ಎಚ್ಚರಿಸಿದ್ದಾರೆ. ಸರ್ಕಾರ ಡೀಸೆಲ್‌ ಹಾಕಿಸಲು ದುಡ್ಡಿಲ್ಲ ಎನ್ನುತ್ತಿರುವ ಈ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಬಿಡಬೇಕು ಎಂದಿದ್ದಾರೆ. ಕೋಲಾರದಲ್ಲಿ ಆಡಳಿತ ಪಕ್ಷದ ಶಾಸಕರೇ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದಿದ್ದಾರೆ.

ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಸಮೃದ್ದಿ ಮಂಜುನಾಥ್ ವಾಗ್ದಾಳಿ ಮಾಡಿದ್ದು, ಪ್ರಿಯಾಂಕ ಖರ್ಗೆ ಗೃಹ ಸಚಿವ ಆದ್ಮೇಲೆ ದರ್ಪದ ಮಾತು ಯಾವ ಮಟ್ಟಿಗೆ ಹೋಗುತ್ತಿದೆ. ನಾನು ಅದೇ ಸಮುದಾಯದ ಶಾಸಕ, HDK ಬಗ್ಗೆ ಮಾತ್ನಾಡಿದ್ರೆ ದೊಡ್ಡವನಾಗ್ತೀನಿ ಎಂಬಂತೆ ಮಾತ್ನಾಡ್ತಿದ್ದಾರೆ. HD ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಹಳ್ಳಿ ಗುಗ್ಗು, ಪರಿಜ್ಞಾನ ಇಲ್ಲ ಎಂಬ ಪದ ಬಳಸಿದ್ದಾರೆ. ಆದರೆ ಇದನ್ನೆಲ್ಲಾ ಜ‌ನ ವೀಕ್ಷಣೆ ಮಾಡ್ತಿದ್ದಾರೆ, ಅದಕ್ಕೆ ಜನ ಉತ್ತರ ಕೊಡ್ತಾರೆ. ಕೊಡುಗೆಗಳಿಂದ ಬಂದಂತಹ ವ್ಯಕ್ತಿಗಳು ಹೀಗೆಲ್ಲಾ ಮಾತ್ನಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

Related posts

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot

SIR ವಿರುದ್ಧ ಕಾಂಗ್ರೆಸ್​ ಆರೋಪ.. ಬಿಜೆಪಿ ನಾಯಕರ ಜಾಗೃತಿ.. ಜನರಲ್ಲಿ ಗೊಂದಲ..

Publicspot

Hariyana Vote Theft; ಹರಿಯಾಣದಲ್ಲೂ ಮತಗಳ್ಳತನ ಆಗಿದೆ.. ಸಾಕ್ಷ್ಯ ಕೊಟ್ಟ ರಾಹುಲ್​..

Publicspot

ಮಾಲೂರು ಕ್ಷೇತ್ರದ ಮರು ಮತ ಎಣಿಕೆ.. ಶಾಸಕತ್ವ ಬದಲಾಗೋದು ಪಕ್ಕಾನಾ..?

Publicspot

ಒಂದು ರಾಷ್ಟ್ರ ಒಂದು ಚುನಾವಣೆ.. ಜಾರಿ ಆಗಲು ಅಡ್ಡಿ ಆತಂಕ ಏನು..?

Publicspot