The Public Spot
ಅಪರಾಧ

ನಿದ್ರೆ ಮಾತ್ರೆ ಗಮ್ಮತ್ತು.. ಎಚ್ಚರ ಆಗಿದ್ದಕ್ಕೆ ಆಪತ್ತು.. ಗಂಡ ಫಿನಿಷ್..

ಕಲಬುರ್ಗಿ ಜಿಲ್ಲೆ ಮಳಖೇಡ ಗ್ರಾಮದ ಸಿದ್ದರಾಮ ಅನ್ನೋ ಯುವಕನ ಜೊತೆಗೆ ಅಂಬಿಕಾ ಎಂಬ ಯುವತಿಯ ಮದ್ವೆಯಾಗಿತ್ತು. ಸೈಬರ್​ ಸೆಂಟರ್ ಇಟ್ಕೊಂಡಿದ್ದ ಸಿದ್ದರಾಮ, ಒಳ್ಳೆಯ ಜೀವನ ನಡೆಸ್ತಿದ್ದ. ಪತ್ನಿ ಮತ್ತು ಮಕ್ಕಳು ಅಂದ್ರೆ ಜೀವ ಬಿಡ್ತಿದ್ದ ಸಿದ್ದರಾಮ. ಆದರೆ, ಅಂಬಿಕಾ ಮಾತ್ರ ಮಾಜಿ ಪ್ರಿಯಕರನ ಮೋಹಕ್ಕೆ ಸೆರಗು ಚೆಲ್ಲಿದ್ದಳು. 10ನೇ ಕ್ಲಾಸ್‌ ಓದ್ತಿದ್ದಾಗಲೇ ಮಾರುತಿ ಅನ್ನೋನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಅಂಬಿಕಾಳನ್ನು ಕುಟುಂಬಸ್ಥರು ಹರಸಾಹಸ ಮಾಡಿ ಪ್ರೀತಿಗೆ ಬ್ರೇಕ್‌ ಹಾಕಿದ್ರು. ಅಲ್ಲದೆ ಮಗಳ ಮನವೊಲಿಸಿ ಸಿದ್ದರಾಮನ ಜೊತೆ ಮದುವೆಯನ್ನೂ ಮಾಡಿಸಿದ್ರು.

ಅತ್ತ ಅಂಬಿಕಾಳ ಪ್ರೀತಿ ಸಿಗದೆ ಕಂಗಾಲಾದ ಮಾರುತಿ, ಇನ್ನೇನು ಸುಖವಿಲ್ಲ ಅಂತಾ ಬೇರೆ ಹುಡುಗಿ ಜೊತೆ ಮದುವೆ, ಸಂಸಾರ ಅಂತಾ ಬದುಕು ಕಟ್ಟಿಕೊಂಡ. ಆದರೆ, ಹಳೇ ಜೋಡಿಯ ಸಂಪರ್ಕ ಮಾತ್ರ ಬ್ರೇಕ್​ ಆಗಿರ್ಲಿಲ್ಲ. ಮಕ್ಕಳು ಮರಿ ಆದ್ರೂ ಕದ್ದುಮುಚ್ಚಿ ಭೇಟಿ ಮಾಡೋದು ನಡೆದಿತ್ತು. ಗಂಡ ಮಕ್ಕಳನ್ನ ಮರೆತು ಹಳೇ ದೋಸ್ತಿ ಸಂಗಡ ನಿಂತ ಅಂಬಿಕಾ, ಗಂಡನಿಗೇ ಗೋಲಿ ಹೊಡೀತಿದ್ಲು. ಗಂಡನಿಗೆ ಊಟದಲ್ಲಿ ನಿದ್ದೆಮಾತ್ರೆ ಹಾಕಿ ಪ್ರಿಯಕರನನ್ನೇ ಮನೆಗೆ ಕರೆಸಿಕೊಳ್ತಿದ್ಲು. ಅದೇ ರೀತಿ ಮೊನ್ನೆ ಕೂಡ ಗಂಡನಿಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಳು.

ಗಂಡ ಸಿದ್ದರಾಮ ನಿದ್ರೆ ಮಾತ್ರೆ ಮಂಪರಿನಲ್ಲಿ ಹಾಸಿಗೆ ಸೇರ್ತಿದ್ದಂತೆ ಪ್ರಿಯಕರ ಮೆಲ್ಲಗೆ ಎಂಟ್ರಿ ಕೊಟ್ಟಿದ್ದ. ಕತ್ತಲೆ ರಾತ್ರಿಯಲ್ಲಿ ಕೈಕೈ ಹಿಡಿದು ನಿಂತವರು, ಪಲ್ಲಂಗದ ಆಟ ಶುರು ಮಾಡಿದ್ರು. ಅಷ್ಟೊತ್ತಿಗೆ ಸಿದ್ದರಾಮನಿಗೆ ಇದ್ದಕ್ಕಿಂದಂತೆ ಎಚ್ಚರವಾಗಿತ್ತು. ಅಂಬಿಕಾ ಹಾಕಿದ್ದ ನಿದ್ದೆ ಮಾತ್ರೆಗಳು ಕಡಿಮೆ ಆಗಿದ್ವೋ..? ಇಲ್ಲ ಕಂಪನಿಯಲ್ಲೇ ಡೂಪ್ಲಿಕೇಟ್​​ ಆಗಿತ್ತೋ ಏನೋ. ಮಲಗಿದ್ದವನು ಎದ್ದು ಬಂದಿದ್ದ. ಕಡು ಕತ್ತಲೆಯಲ್ಲಿ ಪ್ರಣಯದಾಟ ಕಣ್ಣಿಗೆ ಬಿದ್ದಿತ್ತು. ನೋಡಬಾರದ ಸ್ಥಿತಿಯಲ್ಲಿ ಹೆಂಡತಿಯನ್ನು ನೋಡ್ತಿದ್ದಂತೆ ಸಿದ್ದರಾಮ ಬೆಪ್ಪಾಗಿ ಹೋಗಿದ್ದ.

ಹುಟ್ಟ ಬಟ್ಟೆಯಲ್ಲಿದ್ದ ಪ್ರೇಮ ಪಕ್ಷಗಳು, ಏಕಾಏಕಿ ಸಿದ್ದರಾಮನನ್ನು ನೆಲಕ್ಕೆ ಕೆಡವಿಕೊಂಡು, ನಾವು ಬಚಾವ್‌ ಆಗ್ಬೇಕು ಅಂದ್ರೆ ಈತನನ್ನ ಮುಗಿಸಬೇಕು ಅಂತಾ ನಿರ್ಧಾರ ಮಾಡಿ ಹೆಣ ಉರುಳಿಸಿದ್ರು. ಬೆಳಗಾಗ್ತಿದ್ದಂತೆ ನವರಂಗಿ ಆಟ ಶುರುಮಾಡಿದ್ದ ಅಂಬಿಕಾ, ನನ್ನ ಗಂಡನಿಗೆ ಏನಾಯ್ತೋ ಗೊತ್ತಿಲ್ಲ. ನಿನ್ನೆ ಪಾರ್ಟಿ ಮಾಡೋದಕ್ಕೆ ಅಂತಾ ಸ್ನೇಹಿತರ ಜೊತೆ ಹೋಗಿದ್ದರು. ಅಲ್ಲಿ ಯಾರೋ ಹಲ್ಲೆ ಮಾಡಿದ್ರು ಅಂತಾ ನನ್ನ ಬಳಿ ಹೇಳಿದ್ರು. ಬೆಳಗೆದ್ದು ನೋಡಿದ್ರೆ ಸತ್ತೇ ಹೋಗಾವ್ರೆ ಅಂತಾ ಮೊಸಳೆ ಕಣ್ಣೀರು ಸುರಿಸಿ ನಾಟಕ ಆಡಿದ್ಲು. ಆದರೆ ಖಾಕಿ ಹಾಕೊಂಡು ತಪ್ಪಿತಸ್ಥರ ಪತ್ತೆಗೆ ಅಂತಾನೇ ಇರುವ ಪೊಲೀಸ್ರು ಬಿಡ್ಬೇಕಲ್ಲ. ಅಂಬಿಕಾಳ ಚಿಣಿಮಿಳಿ ಆಟ ನೋಡಿ, ಪೊಲೀಸ್‌ ಸ್ಟೇಷನ್‌ಗೆ ಎತ್ತಾಕೊಂಡು ಹೋಗಿ ಪೊಲೀಸ್ ಭಾಷೆಯಲ್ಲಿ ಮಾತನಾಡಿಸ್ತಿದ್ದ ಹಾಗೆ ಅಸಲಿ ಸತ್ಯ ಹೊರ ಬಿದ್ದಿತ್ತು.

ನಿದ್ರೆ ಮಾತ್ರೆ ಹಾಕಿದ್ರೂ ಮಧ್ಯರಾತ್ರಿ ಇದ್ದಕ್ಕಿಂದ್ದಂತೆ ಎದ್ದು ಬಂದ ತಪ್ಪಿಗೆ ಸಿದ್ದರಾಮಯ್ಯ ತನ್ನ ಪ್ರಾಣವನ್ನೇ ದಂಡವಾಗಿ ಕೊಡಬೇಕಾಯ್ತು. ಇನ್ನು ಪ್ರೇಮಿ ಜೊತೆಗೆ ಕಾಮದೂಟ ಮಾಡುವಾಗ ಮದವೇರಿದ ಆನೆಯಂತೆ ಸಿದ್ದರಾಮನ ಮೇಲೆ ಬಿದ್ದ ಮಾರುತಿ ತನ್ನ ಕುಟುಂಬವನ್ನು ಬಿಟ್ಟು ಜೈಲು ಸೇರುವಂತಾಯ್ತು. ಸುಖ ಸಂಸಾರಕ್ಕೆ ಇಬ್ಬರು ಮಕ್ಕಳಿದ್ದರೂ ಬಾಲ್ಯದ ಚಕ್ಕಂದವನ್ನು ಗಂಡನ ಮನೆಯಲ್ಲೂ ಮುಂದುವರಿಸಿದ ತಪ್ಪಿಗೆ ಇಬ್ಬರು ಮಕ್ಕಳನ್ನು ಬಿಟ್ಟು ಕಂಬಿ ಎಣಿಸಲು ಹೊರಟಳು ಅಂಬಿಕಾ. ಒಂದು ಸಂಸಾರ ಹಾಳು ಮಾಡಲಿಲ್ಲ. ಒಟ್ಟಿಗೆ ಎರಡು ಸಂಸಾರವನ್ನು ಮುಗಿಸಿಬಿಟ್ಟಳು ಮಾನಗೇಡಿ ಹೆಣ್ಣು.

Related posts

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

ಸಾವಿತ್ರಿ ಗಂಡನ ಸಹವಾಸ ಬಿಟ್ಟು ಹೋದಳಾ..? ಕೊಲೆ ಆದಳಾ..? ಏನೀ ಅನುಮಾನ..?

Publicspot

ಮದುವೆ ಆಗದಿದ್ದರೂ ಬೇಡ ಇಂಥಹ ಹುಡುಗಿ.. ಈಕೆ ಮಾಡಿದ್ದಾದ್ರೂ ಏನು..?

Publicspot

Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

Publicspot

Dating App: ಡೇಟಿಂಗ್​ ಆ್ಯಪ್​ನಲ್ಲಿ ಬಲೆ.. ಸುಲಿಗೆ ಮಾಡಿ ಹುಡುಗಿ ಎಸ್ಕೇಪ್​..

Publicspot

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

Publicspot