The Public Spot
ರಾಜ್ಯ

ಇವತ್ತೇ ಕೊನೆ ದಿನ.. ಹಾಸನಾಂಬೆ ದರ್ಶನ ಆಗಬೇಕಿದ್ರೆ 4 ಗಂಟೆ ಒಳಗೆ ಕ್ಯೂನಲ್ಲಿರಿ..

ಹಾಸನ: ಹಾಸನಾಂಬೆ ದರ್ಶನಕ್ಕೆ ಲಕ್ಷ ಲಕ್ಷ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹಾಸನಾಂಬೆ ದರ್ಶನ ತಡ ಆಗುತ್ತಿರುವುದಕ್ಕೆ ಜನರು ಸಿಕ್ಕ ಸಿಕ್ಕವರ ಮೇಲೆ ಕೋಪ ತೋರಿಸುತ್ತಿದ್ದಾರೆ. ಅದೂ ಅಲ್ಲದೆ ವಿಐಪಿಗಳ ದರ್ಶನ ಸಾಮಾನ್ಯ ದರ್ಶನ ಮಾಡುವ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಈ ನಡುವೆ ಹಾಸನಾಂಬೆ ದರ್ಶನದ ಅವಕಾಶ ಈ ವರ್ಷದ ಮಟ್ಟಿಗೆ ಮುಕ್ತಾಯ ಆಗುತ್ತಿದ್ದು, ಸಾರ್ವಜನಿಕರ ದರ್ಶನಕ್ಕೆ ಇವತ್ತೇ ಕೊನೆ ದಿನ ಆಗಿದೆ. ನಾಳೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಾಸನಾಂಬೆ ದೇವಸ್ಥಾನ ಬಾಗಿಲು ಮುಚ್ಚಲಾಗುತ್ತದೆ. ಇವತ್ತು ಸಂಜೆ 4 ಗಂಟೆ ಒಳಗೆ ದರ್ಶನದ ಸಾಲು ಸೇರಿಕೊಂಡಿದ್ದರೆ ಮಾತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಈ ವರ್ಷದ ಹಾಸನಾಂಬೆ ದರ್ಶನೋತ್ಸವ ಇಂದು ಸಂಜೆಗೆ ಮುಕ್ತಾಯ ಆಗಲಿದೆ. ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭವಾಗಿ ಇಂದಿಗೆ 12 ದಿನ ಆಗಲಿದ್ದು, ಇಲ್ಲೀವರೆಗೂ ಲಕ್ಷಾಂತರ ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಕೃಪೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ನಿನ್ನೆ ಸಚಿವ ಹೆಚ್​.ಸಿ ಬಾಲಕೃಷ್ಣ, ಮಾಜಿ ಸಚಿವ ಜಿ.ಟಿ ದೇವೇಗೌಡ, ಕೆ.ಆರ್​. ಪೇಟೆ ಶಾಸಕ ಮಂಜು ಹೆಚ್​.ಟಿ, MLC ರಂಗನಾಥ್​, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ದೇವಿ ದರ್ಶನ ಪಡೆದುಕೊಂಡಿದ್ದಾರೆ. ನಟ ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌, ಸುದೀಪ್​ ಅಕ್ಕ ಸುಜಾತಾ, ಪ್ರೇಮದ ಊರಲ್ಲಿ ಚಿತ್ರದ ನಾಯಕ ಶ್ರೀರಾಮ್‌ ಕೂಡ ಆಗಮಿಸಿದ್ರು.

ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಮಾತನಾಡಿ, ಇಂದು ಸಂಜೆ 6ಗಂಟೆಗೆ ಸಾರ್ವಜನಿಕ ದರ್ಶನ ಮುಕ್ತಾಯ ಆಗಲಿದೆ. ಸಂಜೆ 4 ಗಂಟೆಗೆ ಗೇಟ್‌ ಕ್ಲೋಸ್ ಆಗಲಿದ್ದು, ಸಾರ್ವಜನಿಕರು ಸರತಿ ಸಾಲುಗಳಲ್ಲಿ ನಿನ್ನೆ ರಾತ್ರಿ ಮಧ್ಯರಾತ್ರಿ 2 ರಿಂದ 3 ಗಂಟೆ ವರೆಗೆ ನೈವೇದ್ಯ ಸಮಯವಿದ್ದು, ಬೆಳಗ್ಗಿನ ಜಾವ 3 ಗಂಟೆಯಿಂದ ದರ್ಶನ ಆರಂಭ ಆಗಿದ್ದು, ಇಂದು ಸಂಜೆ 6 ರವರೆಗೂ ನಿರಂತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಂದು ಸಂಜೆಯಿಂದಲೇ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿದ್ದು, ಇವತ್ತು ಸಂಜೆ ಸಿದ್ದೇಶ್ವರ ಜಾತ್ರೋತ್ಸವ ಕೂಡ ನಡೆಯಲಿದ್ದು, ಬುಧವಾರ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಹಾಕಲಾಗುತ್ತದೆ ಎಂದಿದ್ದಾರೆ.

ಪ್ರತಿದಿನ ಲಕ್ಷಾಂತರ ಭಕ್ತರು ಹಾಸನಾಂಬೆ ತಾಯಿ ದರ್ಶನ ಪಡೆದುಕೊಂಡಿದ್ದು, ಇಂದೂ ಕೂಡ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ನಡುವೆ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಂದ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ಪ್ರವೇಶ ಟಿಕೆಟ್​ ₹1,000 ಹಾಗೂ ₹300 ದರ ನಿಗದಿ ಮಾಡಲಾಗಿತ್ತು. ಜೊತೆಗೆ ಲಾಡು ಪ್ರಸಾದಕ್ಕೂ ದರ ನಿಗದಿಯಾಗಿತ್ತು. ಇದ್ರಿಂದ ಸಕಾ್ರದ ಬೊಕ್ಕಸಕ್ಕೆ ಬರೋಬ್ಬರಿ 24 ಕೋಟಿಗೂ ಅಧಿಕ ಆದಾಯ ಬಂದಿದೆ. ಇನ್ನು ಹುಂಡಿ ಎಣಿಕೆ ಕಾರ್ಯ ಆದ ಬಳಿಕ ಭಕ್ತರಿಂದ ಸರ್ಕಾರಕ್ಕೆ ಲಾಭ ಎಷ್ಟು ಅನ್ನೋ ಖಚಿತ ಮಾಹಿತಿ ಸಿಗಲಿದೆ.

Related posts

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ.. ಹೌದು ನಮ್ಮ ತಪ್ಪು ಎಂದು ಒಪ್ಪಿಕೊಂಡ ಸಚಿವರು..

Publicspot

ರಾಜ್ಯಕ್ಕೆ ಮುಂಗಾರು ಪ್ರವೇಶ.. ಎಲ್ಲೆಲ್ಲಿ ಮಳೆ ಆಗ್ತಿದೆ ಗೊತ್ತಾ..?

Publicspot

ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್

admin

ಚುಂಚನಗಿರಿ ಶ್ರೀಗಳು ದಾರಿ ತಪ್ಪಿದ್ದಾರೆ ಎಂದು ಕ್ಷಮೆ ಕೇಳಿದ ಶಾಸಕ..!

Publicspot

ಕಾವೇರಿಗಾಗಿ ಆಗಸ್ಟ್‌ 13ರಂದು ಕರ್ನಾಟಕ ಬಂದ್‌.. ಆಕ್ರೋಶದ ಕೂಗು..

Publicspot