The Public Spot
ಟ್ರೆಂಡ್

ಸ್ಟಿಂಗ್​ ಮತ್ತು ಕುಮಾರಸ್ವಾಮಿ ಸಂಚು.. ಆಯುಕ್ತರ ಮೇಲೆ ಅನುಮಾನದ ಹುತ್ತ..

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣ ಸ್ಫೋಟಕ ತಿರುವು ಪಡೆದಿದೆ. ಸ್ಟಿಂಗ್‌ ಪ್ರಕರಣದಲ್ಲಿ ಬಳಕೆಯಾದ ಮೊಬೈಲ್ ಫೋನ್‌ಗಳು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರ ದೆಹಲಿಯ ಅಧಿಕೃತ ನಿವಾಸದಲ್ಲಿಯೇ ಹಸ್ತಾಂತರವಾಗಿವೆ ಅನ್ನೋದು ಬಯಲಾಗಿದೆ. ಬಂಧಿತ ರಿತೇಶ್ ಪಾಂಡೆ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಅವರ ಮನೆಯಲ್ಲಿ ರಿತೇಶ್ ಪಾಂಡೆ ಇದ್ದ ಅಂತಾನೂ ಹೇಳಿದ್ದಾರೆ.

ಈ ಪ್ರಕರಣದಲ್ಲಿ ರಿತೇಶ್ ಪಾಂಡೆ ಮಾತ್ರ ಅಲ್ಲದೆ ವಿನೋದ್ ಶರ್ಮಾ ಹಾಗೂ ಪ್ರಜ್ವಲ್‌ ಪ್ರಸಾದ್‌ ಎಂಬ ಇಬ್ಬರು ವ್ಯಕ್ತಿಗಳು ಪ್ರಮುಖವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ರಿತೇಶ್ ಪಾಂಡೆ ದೆಹಲಿಯ ಅಂಗಡಿಯೊಂದಕ್ಕೆ ತೆರಳಿ ಮೊಬೈಲ್ ಫೋನ್‌ಗಳನ್ನು ಖರೀದಿ ಮಾಡಿದ್ದು, ತಾನು ಖರೀದಿಸಿದ ಫೋನ್‌ಗಳನ್ನು ತಂದು ದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲೇ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರ ಮಾಡಿದ್ದ ಎಂದು ವಿಚಾರಣೆ ವೇಳೆ ರಿತೇಶ್ ಪಾಂಡೆ ತಿಳಿಸಿದ್ದಾನೆ ಎನ್ನಲಾಗಿದೆ.

ಪ್ರಜ್ವಲ್​ ಪ್ರಸಾದ್​​​​​ ಖರೀದಿಸಿದ್ದ 15 ಸಾವಿರ ರೂಪಾಯಿಯ ಮೊಬೈಲ್‌ನಲ್ಲೇ ವೀಡಿಯೋ ಅಪ್‌ಲೋಡ್‌ ಮಾಡಲಾಗಿದೆ ಅಂತೆ. ಬಂಧಿತ ಆರೋಪಿ ರಿತೇಶ್ ಪಾಂಡೆ ಮೂಲಕ ವೀಡಿಯೋ ಅಪ್ ಲೋಡ್ ಮಾಡಿಸಲಾಗಿದೆ. ಅಪ್‌ಲೋಡ್ ಮಾಡಲು ಹೇಳಿದವರು ಯಾರು..? ಅಂತ ತನಿಖೆ ನಡೆಯುತ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಮನೆಯಲ್ಲೇ ಮೊಬೈಲ್‌ ಬದಲಾವಣೆಯಾದ ಹಿನ್ನೆಲೆ ಪ್ರಜ್ವಲ್ ಪ್ರಸಾದ್​​​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಪೂರಕ ದಾಖಲೆಗಳನ್ನು ಇಟ್ಟುಕೊಂಡು ಸಿಸಿಬಿ ತನಿಖೆ ನಡೆಸುತ್ತಿದೆ. ಮೊಬೈಲ್ ಖರೀದಿ ಮಾಡಿರೋ ಅಂಗಡಿ ಸಿಸಿಟಿವಿ ಕೂಡ ಪರಿಶೀಲನೆ ಮಾಡಲಾಗ್ತಿದೆ.

ಇನ್ನು ಮೂರು ಆರೋಪಿಗಳ ಪೈಕಿ ಒಬ್ಬ ಸಿಕ್ಕಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗ್ತಿದೆ. ತನಿಖೆ ಭಾಗವಾಗಿ ಹೇಳಿಕೆಗಳನ್ನು ಪಡೆದು ಮಹಜರು ಪ್ರಕ್ರಿಯೆ ಮಾಡ್ತೇವೆ ಎಂದು ಸೀಮಂತ್​ ಕುಮಾರ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದಂತೆ ಆಗಿದೆಯಾ..? ಅನ್ನೋ ಬಗ್ಗೆಯೂ ತನಿಖೆಯಾಗ್ತಿದೆ. ಯಾರ ಅಣತಿಯಂತೆ ಈ ಸ್ಟಿಂಗ್ ಮಾಡಲಾಗ್ತಿದೆ..? ಎಂದು ತನಿಖೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆದರೆ ಬೆಂಗಳೂರು ಪೊಲೀಸ್​ ಆಯುಕ್ತರು ಈ ವಿಚಾರವನ್ನು ಮಾಧ್ಯಮಗಳ ಎದುರು ಹೇಳಿದ್ಯಾಕೆ..? ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸ್​ ಆಯುಕ್ತರು ಮಾಹಿತಿ ಲೀಕ್​ ಮಾಡಿದ ಉದ್ದೇಶ ಆದರೂ ಏನು..? ಅನ್ನೋ ಬಗ್ಗೆಯೂ ಹತ್ತಾರು ಅನುಮಾನಗಳು ಹರಿದಾಡುತ್ತಿವೆ.

Related posts

AIBE 20 ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ ರಿಲೀಸ್‌‌.. ಡೌನ್‌ಲೋಡ್‌ ಮಾಡೋದು ಹೇಗೆ..?

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot

RSS ಪಥಸಂಚಲನ.. ಸಸ್ಪೆಂಡ್​ಗೆ ಆಕ್ರೋಶ.. ಇವತ್ತು ಮತ್ತೆ ಪಥಸಂಚಲನ ಸಂಚಲನ..!

Publicspot

Farmers Fight; ಸಕ್ಕರೆ ಕಾರ್ಖಾನೆ ಮಾಲೀಕರು ಡ್ರಾಮಾ ಮಾಡಿದ್ರೆ ರೈತರು ಬುದ್ಧಿ ಕಲಿಸ್ತಾರೆ..!

Publicspot

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

Publicspot

S.L Byrappa No More; ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ S.L ಬೈರಪ್ಪ ಇನ್ನಿಲ್ಲ..

Publicspot