The Public Spot
ದೇಶ-ವಿದೇಶ

ಅಮೆರಿಕ ಗೆಲುವು.. ಕರ್ನಾಟಕದಲ್ಲಿ ಸಂಭ್ರಮ.. ಏನಿದು ಲಿಂಕ್​..!?

ಕರ್ನಾಟಕದ ಭಟ್ಕಳ ಅಂದಾಕ್ಷಣ ಟೆರರಿಸ್ಟ್ ವಿಚಾರದಲ್ಲಿ ಭಾರೀ ಸದ್ದು ಮಾಡುವ ಕಾಲವೊಂದಿತ್ತು. ಆ ಬಳಿಕ ಪಾಕಿಸ್ತಾನದ ಜೊತೆಗೆ ವಿವಾಹ ಸಂಬಂಧ ವಿಚಾರದಲ್ಲೂ ಆಗ್ಗಾಗ್ಗೆ ಸುದ್ದಿಯಲ್ಲಿ ಇರುತ್ತದೆ. ಮುಸ್ಲಿಂ ಪ್ರಾಬಲ್ಯ ಇರುವ ಕರಾವಳಿ ಕರ್ನಾಟಕದ ಭಟ್ಕಳ ಇದೀಗ ಒಳ್ಳೆಯ ಕಾರಣಕ್ಕೆ ಸುದ್ದಿ ಮಾಡ್ತಿದೆ. ಭಟ್ಕಳ ಅಮೆರಿಕ ಚುನಾವಣೆ ಫಲಿತಾಂಶದ ಬಗ್ಗೆ ಎದುರು ನೋಡ್ತಿತ್ತು. ಇದೀಗ ಸಂತಸಪಡುವ ಸುದ್ದಿಯೊಂದು ಹೊರಬಿದ್ದಿದೆ. ಮಿಚಿಗಾನ್​ ಸೆನೆಟರ್​ ಆಗಿ ಡೆಮಕ್ರಟಿಕ್​ ಪಕ್ಷದ ಅಬ್ದುಲ್​ ಇ ಸಯ್ಯದ್​ ಆಯ್ಕೆ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಸೆನೆಟರ್​ ಆಗಿ ಆಯ್ಕೆ ಆಗಿದ್ದಾರೆ. ಇದು ಮುಸ್ಲಿಂ ಸಮುದಾಯದ ಜೊತೆಗೆ ಕರ್ನಾಟಕದ ಭಟ್ಕಳಕ್ಕೂ ಸಂಭ್ರಮ ತರಿಸುವ ವಿಚಾರ ಆಗಿದೆ.

42 ವರ್ಷದ ಈಜಿಪ್ಟ್​ ಮೂಲದ ಅಬ್ದುಲ್​ ಇ ಸಯ್ಯದ್​, ಅಮೆರಿಕದ ಮಿಚಿಗನ್​ ಸೆನೆಟರ್​ ಆಗಿ ಆಯ್ಕೆ ಆಗಿರುವುದು ಕರ್ನಾಟಕದಲ್ಲೂ ಸಂಭ್ರಮಕ್ಕೆ ಕಾರಣ ಆಗಿದೆ. ಭಟ್ಕಳ ಮೂಲದ ಮನೋಶಾಸ್ತ್ರಜ್ಞೆ ಡಾ. ಸಾರಾ ಜುಕಾಕು ಮದುವೆ ಆಗಿರುವ ಅಬ್ದುಲ್ ಇ ಸಯ್ಯದ್, ಇತಿಹಾಸ ಸೃಷ್ಟಿಸಿದ್ದಾರೆ. ಮೈಸೂರು ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ B.D ಜತ್ತಿ ಅವರ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದ ಜುಕಾಕು ಶಂಶುದ್ಧೀನ್​ ಅವರ ಮೊಮ್ಮಗಳು ಡಾ ಸಾರಾ ಜುಕಾಕು. ಮಿಚಿಗಾನ್​ ಯೂನಿವರ್ಸಿಟಿಯಲ್ಲಿ ಒಟ್ಟಿಗೆ ಓದುವ ಸಮಯದಲ್ಲಿ ಪರಿಚಯವಾಗಿ, ಸ್ನೇಹ ಪ್ರೀತಿಗೆ ತಿರುಗಿ ವಿವಾಹ ಆಗಿದ್ದರು.

ಅಬ್ದುಲ್​ ಇ ಸಯ್ಯದ್ ಕೂಡ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ನಿಮಗೆ ಗೊತ್ತಾ ನಾನು ದಕ್ಷಿಣ ಭಾರತದ ಹುಡುಗಿಯನ್ನು ಕಳೆದ 20 ವರ್ಷಗಳ ಹಿಂದೆಯೇ ಮದುವೆ ಆಗಿದ್ದೇನೆ. ನಾನು ಅರಬ್​ಗಿಂತಲೂ ಹೆಚ್ಚಾಗಿ ಭಾರತೀಯನ ರೀತಿ ಕಾಣುತ್ತೇನೆ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಡಾ ಸಾರಾ ಜುಕಾಕು ಸಂಬಂಧಿಕರು, ಜುಕೂಕು ಅವರು ವಕೀಲರಾಗಿದ್ದರು, ಸಾಕಷ್ಟು ಅಬಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಭಟ್ಕಳಕ್ಕೆ ವಿದ್ಯುತ್​ ಸೌಲಭ್ಯ ಮಾಡಿದ್ದೇ ಅವರ ಕಾಲದಲ್ಲಿ. ಅಷ್ಟೇ ಅಲ್ಲದೆ ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ವರ್ಗದ ಜನರ ಪರವಾಗಿ ವಕಾಲತು ವಹಿಸುತ್ತಿದ್ದರು ಎಂದು ನೆನಪು ಮಾಡಿಕೊಳ್ತಾರೆ.

ಇನ್ನು ಮೈಸೂರು ರಾಜ್ಯದ ಮಾಜಿ ಸಚಿವ ಜುಕೂಕು ಅವರಿಗೆ ಒಟ್ಟು 10 ಜನ ಮಕ್ಕಳಿದ್ದು, ಅದರಲ್ಲಿ ನಾಲ್ವರು ಗಂಡು ಮಕ್ಕಳು ಹಾಗೂ ಆರು ಜನ ಹೆಣ್ಣು ಮಕ್ಕಳಿದ್ದರು. ಅದರಲ್ಲಿ ಡಾ ಸಾರಾ ಜುಕೂಕು ಅವರ ತಂದೆ ಡಾ ತಾಹೆಬ್​ ಜುಕೂಕು ಬೆಂಗಳೂರಿನಲ್ಲಿ MBBS ಮುಗಿಸಿದ್ದು, ಆ ನಂತರ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಬ್ದುಲ್​ ಇ ಸಯ್ಯದ್ ರಾಜಕೀಯದ ಬಗ್ಗೆ ಇಡೀ ಕುಟುಂಬವೇ ಹೆಮ್ಮೆ ವ್ಯಕ್ತಪಡಿಸುತ್ತದೆ. ಅಲ್ಲದೆ ಆಸ್ತಿ ಘೋಷಣೆ ವೇಳೆ ಡಾ ಸಾರಾ ಜುಕೂಕು ಮಾಲೀಕತ್ವದ ಬೆಂಗಳೂರಿನ ಆಸ್ತಿ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂದು ವರದಿ ಆಗಿದೆ.

ಒಟ್ಟಾರೆ ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್​ ನೇತೃತ್ವದ ರಿಪಬ್ಲಿಕನ್​ ಪಾರ್ಟಿ ಸೋಲುಂಡಿದ್ದು, ಡೆಮಾಕ್ರಟಿಕ್​ ಪಕ್ಷ ವಿಜಯದ ನಗೆ ಬೀರಿದೆ. ಡೆಮಾಕ್ರಟಿಕ್​ ಪಕ್ಷದಿಂದಲೇ ಗೆಲುವು ಸಾಧಿಸಿರುವ ಅಬ್ದುಲ್​ ಇ ಸಯ್ಯದ್​ ಸೆನೆಟರ್​ ಆಗಿರುವುದು ಸಂತಸದ ವಿಚಾರ. ಇನ್ನು ಅಬ್ದುಲ್​ ಇ ಸಯ್ಯದ್ ನಮ್ಮ ಕರ್ನಾಟಕದ ಅಳಿಯ ಅನ್ನೋದು ವಿಶೇಷ. ಭಟ್ಕಳ ಯಾವಾಗಲೂ ಕೆಟ್ಟ ಸುದ್ದಿಯಿಂದಲೇ ಸದ್ದು ಮಾಡುತ್ತಿತ್ತು. ಇದೀಗ ಒಳ್ಳೇ ವಿಚಾರಕ್ಕೂ ಭಟ್ಕಳ ಸುದ್ದಿಯಾಗಿದ್ದು, ಅಲ್ಲಿನ ಸ್ಥಳೀಯ ಜನರಿಗೆ ಹೆಮ್ಮೆಯ ಸಂಗತಿ ಅಂತಾನೇ ಹೇಳಬಹುದು.

Related posts

NEET ಪ್ರಶ್ನೆ ಪತ್ರಿಕೆ ಲೀಕ್‌ ಕೇಸ್‌ನಲ್ಲಿ BJP, RSS ಕೈವಾಡ ಇದೆಯಾ..?

Publicspot

MODI GIFT FOR INDIANS: ದೇಶವಾಸಿಗಳಿಗೆ ದೀಪಾವಳಿ ಗಿಫ್ಟ್​.. ಏನೇನು ಕಡಿಮೆ ಆಗುತ್ತೆ..?

Publicspot

ಇರಾನ್‌ ಯುದ್ಧದಿಂದ ಭಾರತಕ್ಕೆ ಏನೆಲ್ಲಾ ಸಮಸ್ಯೆ ಆಗ್ತಿದೆ ಗೊತ್ತಾ..?

Publicspot

ಮಕ್ಕಳಿಗೆ ಇಂಟರ್ನೆಟ್ ಸೇವೆ ನಿರ್ಬಂಧ ಅಸಾಧ್ಯ.. ಸುಪ್ರೀಂ ಆದೇಶ..

Publicspot

ದೇಶಾದ್ಯಂತ CJP ಹೋರಾಟ ಅಂತ್ಯ.. ಎಲ್ಲಾ ಬೇಡಿಕೆಗಳಿಗೂ ಮೋದಿ ಸರ್ಕಾರ ಒಪ್ಪಿಗೆ

Publicspot

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ದ್ವೇಷಕ್ಕೆ ಕಾರಣ ಏನು..? ಖಮೇನಿ ಕೊಂದಿದ್ಯಾಕೆ..?

Publicspot