The Public Spot
ರಾಜ್ಯ

ಸರ್ಕಾರ ಹೇಳಿದ್ದು 5 ಸಾವಿರ ಪರಿಹಾರ.. ಕೊಟ್ಟಿದ್ದು ಅರ್ಧಕ್ಕೂ ಕಡಿಮೆ..!!

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರ ರೈತರಿಗೆ 5 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ರೈತರಿಗೆ ಬರ ಪರಿಹಾರವಾಗಿ ಒಟ್ಟು 5 ಸಾವಿರ ರೂಪಾಯಿ ಕೊಡ್ತೀವಿ. ಅದನ್ನು 2 ಕಂತುಗಳಲ್ಲಿ 2,500 ರೂಪಾಯಿಯಂತೆ ರೈತರ ಖಾತೆಗೆ ಜಮೆ ಮಾಡ್ತೀವಿ ಅಂದಿದ್ರು. ಆ ಬಳಿಕ ನವೆಂಬರ್‌ 5ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಿ, ಬಿಡುಗಡೆ ಮಾಡಿದ್ರು. ಬರದಿಂದ ಕಂಗೆಟ್ಟಿದ್ದ ಅನ್ನದಾತರು ದೀಪಾವಳಿ ಹಬ್ಬಕ್ಕೆ ಸರ್ಕಾರ ಅಷ್ಟೋ ಇಷ್ಟೋ ಕೊಡ್ತಿದ್ಯಲ್ಲ ಅಂತ ಖುಷಿಯಾಗಿದ್ರು. ಆದ್ರೀಗ ರೈತರಿಗೆ ಪರಿಹಾರದ ಹಣ ಅಕೌಂಟ್‌ಗೆ ಜಮೆ ಆಗ್ತಿದೆ. ಆದ್ರೆ ಸರ್ಕಾರ ಹೇಳಿದ್ದಕ್ಕಿಂತ ಕಡಿಮೆ ಬಂದಿದೆ. ಮುಖ್ಯಮಂತ್ರಿ ಹೇಳಿದ್ದಕ್ಕಿಂತಲೂ ಕಡಿಮೆ ಹಣ ಬಂದಿದ್ದು ರೈತರ ಕಣ್ಣು ಕೆಂಪಾಗಿಸಿದೆ.

ಒಬ್ಬರಿಗೆ 1,200 ರೂಪಾಯಿ. ಇನ್ನೊಬ್ಬರಿಗೆ 1,500 ರೂಪಾಯಿ ಬರ ಪರಿಹಾರ. ಮತ್ತೊಬ್ಬರಿಗೆ 2 ಸಾವಿರ ಬರ ಪರಿಹಾರ. ಇನ್ನೂ ಕೆಲವರಿಗೆ 1,600, 1,700 ರೂಪಾಯಿ ಹೀಗೆ ರೈತರಿಗೆ ಬೇಕಾಬಿಟ್ಟಿಯಾಗಿ ಪರಿಹಾರದ ಮೊತ್ತ ರಿಲೀಸ್‌ ಆಗಿದೆ. ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಖಾತೆಗೆ ಕಡಿಮೆ ಹಣ ಜಮೆ ಮಾಡಿರೋದು ರೈತರನ್ನ ಕೆರಳಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಕೆರೆ-ಕಟ್ಟೆಗಳು ಬತ್ತಿ ಹೋಗಿದೆ. ಬೆಳೆ ಒಣಗಿ ಹೋಗಿದೆ. ರೈತರು ಕಂಗಾಲಾಗಿದ್ದಾರೆ. ಬರ ಪರಿಹಾರ ಸಿಗುತ್ತೆ ಅಂತ ಕಾಯ್ತಿದ್ದ ರೈತನಿಗೆ ಕಡಿಮೆ ಪರಿಹಾರ ಬಂದಿರೋದು ಆಕ್ರೋಶದ ಕಟ್ಟೆ ಒಡೆದಿದೆ.

ರಾಜ್ಯ ಸರ್ಕಾರ ಭಿಕ್ಷೆ ಹಾಕಿದಂತೆ ಕೊಟ್ಟಿರುವ 1,500, 2,000 ರೂಪಾಯಿ ನಮಗೆ ಬೇಡವೇ ಬೇಡ ಅಂತ ರೈತರು ತಿರುಗಿ ಬಿದ್ದಿದ್ದಾರೆ. 2000 ರೂಪಾಯಿ ಹಣವನ್ನು ಕರ್ನಾಟಕ ಸರ್ಕಾರಕ್ಕೆ ವಾಪಸ್ ಕೊಡುತ್ತೇವೆ ಎಂದು ಚೆಕ್ ಬರೆದು, ಆ ಚೆಕ್‌ಗಳನ್ನ ಸರ್ಕಾರಕ್ಕೆ ಕಳುಹಿಸುವ ಮೂಲಕ ರೈತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕೊಟ್ಟಿರೋ ಹಣ ನಮಗೆ ಅವಮಾನ ಮಾಡಿದಂತೆ ಆಗಿದೆ. ಈ ಹಣದಿಂದ ಒಂದು ಚೀಲ ಗೊಬ್ಬರ ಕೂಡ ಬರೋದಿಲ್ಲ. ಇದಕ್ಕಿಂತ ಆ ಹಣವನ್ನು ಸರ್ಕಾರಕ್ಕೆ ವಾಪಸ್ ಕೊಟ್ಟುಬಿಡ್ತೀವಿ, ನಮ್ಮ ಬೆಳೆ ನಷ್ಟಕ್ಕೆ ಸರಿಯಾದ ಪರಿಹಾರ ಕೊಡುವುದಾದರೆ ಕೊಡಲಿ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ 2500 ಪರಿಹಾರ ಘೋಷಣೆ ಮಾಡಿದಾಗಲೇ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ನಾಯಕರು ಟೀಕಿಸಿದ್ದರು. ಸರ್ಕಾರ ಈ ರೀತಿಯ ಕಳಪೆ ಕಾರ್ಯಕ್ರಮ ಕೊಡುತ್ತೆ ಅಂತಾ ನಾವು ಭಾವಿಸಿರಲಿಲ್ಲ. ಇದು ಹೇಗಿದೆ ಅಂದ್ರೆ ಕೆಲವರಿಗೆ 200, 300 ಬರುತ್ತೆ. ರೈತರನ್ನು ಅಪಹಾಸ್ಯ ಮಾಡೋ ಕೆಲಸ ಸರ್ಕಾರ ಮಾಡ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ. ಗ್ಯಾರಂಟಿಯಲ್ಲೂ ಜನರನ್ನು ಭಿಕ್ಷುಕರ ರೀತಿ ನಡೆಸಿಕೊಳ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಪರಿಹಾರ ಹಣ ನಿರೀಕ್ಷೆಯಲ್ಲಿದ್ದ ರೈತರಿಗೆ ಕಡಿಮೆ ಹಣ ಹಾಕಿರೋದಕ್ಕೆ ಸರ್ಕಾರದಿಂದ ಇಲ್ಲಿವರೆಗೆ ಯಾವುದೇ ಉತ್ತರ ಬಂದಿಲ್ಲ. ಆದರೆ ರೈತರು ಸರ್ಕಾರದ ಹಣವನ್ನೇ ಸರ್ಕಾರಕ್ಕೇ ವಾಪಸ್ ಕೊಡುವ ಮೂಲಕ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ. ವಿರೋಧ ಪಕ್ಷಗಳಿಗೆ ಹಾಲುಅನ್ನ ಉಂಡಂತೆ ಆಗಿದೆ ಅನ್ಬಹುದು.

Related posts

ಜನ ಮೆಚ್ಚಿದ ಅಧಿಕಾರಿ ಮಹಾಂತೇಶ್‌ ಬೀಳಗಿ ಇನ್ನಿಲ್ಲ.. ಅಪಘಾತದಲ್ಲಿ ನಿಧನ

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

Publicspot

ರಾಜಕೀಯ ಬಿಟ್ಟು ಅಭಿವೃದ್ಧಿಗೆ ಆದ್ಯತೆ ಕೊಡುತ್ತಾ ರಾಜ್ಯ ಸರ್ಕಾರ..?

Publicspot

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ಯಶವಂತಿ

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

Publicspot