The Public Spot
ಆಹಾರ - ಆರೋಗ್ಯ

‘ನೀನು ವೈದ್ಯನೇ ಅಲ್ಲ.. ಮನೆಯಲ್ಲಿ ಸರಾಯಿ ಕುಡಿಯುತ್ತಾ ಕುಳಿತಿರು’

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥಗೊಂಡ ಭಕ್ತಾಧಿಗಳನ್ನು ಕಬ್ಬೂರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಕಬ್ಬೂರ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದ ಶಾಸಕ ದುರ್ಯೋಧನ ಐಹೊಳೆ, ಆಸ್ಪತ್ರೆ ಭೇಟಿ ನೀಡಿದ ಬಳಿಕ ತಾಲೂಕು ಆರೋಗ್ಯ ಅಧಿಕಾರಿಯನ್ನು (THO) ಡಾ. ಖನದಾಳೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ನಡೆದು ನೂರಾರು ಜನ ಅಸ್ವಸ್ಥರಾಗಿದ್ದಾರೆ. ನಿನ್ನೆಯಿಂದ ಆಸ್ಪತ್ರೆಗೆ ಬಾರದೆ ಏನು ಮಾಡುತ್ತಿದ್ದೀರಿ ಎಂದು ಗರಂ ಆಗಿದ್ದಾರೆ.

ಕಬ್ಬೂರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಗಿರುವ ಡಾ. ಖನದಾಳೆ, ಶಾಸಕರು ಭೇಟಿ ನೀಡಿದಾಗಲೂ ಆಸ್ಪತ್ರೆಗೆ ಬಾರದ ವೈದ್ಯನಿಗೆ ಕರೆ ಮಾಡಿದ್ದಾರೆ. ಆಗ ನಾನು ಆಸ್ಪತ್ರೆಯಲ್ಲೇ ಇದ್ದೀನಿ ಎಂದು ಸುಳ್ಳು ಹೇಳಿದ ಡಾ ಖನದಾಳೆ ಮಾತಿಗೆ ಸಿಟ್ಟಾದ ಶಾಸಕ ದುರ್ಯೋಧನ ಐಹೊಳೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀನು ಮನೆಯಲ್ಲೆ ಸರಾಯಿ ಕುಡಿಯುತ್ತ ಕುಳಿತುಕೊ, ನೀನು ಮನುಷ್ಯನೇ ಅಲ್ಲ ಎಂದು ಶಾಸಕ ದುರ್ಯೋಧನ ಐಹೋಳೆ ವೈದ್ಯರಿಗೆ ಗ್ರಹಚಾರ ಬಿಡಿಸಿದ್ದಾರೆ. ಬುಧನವಾರ ಪ್ರಸಾದ ಸೇವಿಸಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಈಗಲೂ 35 ಜನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ.

Related posts

ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?

Publicspot

Rat Fever: ಕರ್ನಾಟಕಕ್ಕೆ ವಕ್ಕರಿಸಿದೆ ಇಲಿ ಜ್ವರ.. ಮಳೆಯಿಂದ ಸೋಂಕು ಹೆಚ್ಚಳ..

Publicspot

ಹಾಲು ಅಮೃತ ಅನ್ಕೊಂಡಿದ್ರೆ ಅದು ಸುಳ್ಳು..! ಬೀ ಕೇರ್​ ಫುಲ್​..

Publicspot

5 Kg Ration Cut; ರೇಷನ್​ ಕಾರ್ಡ್​ಗೆ ಇನ್ಮುಂದೆ 10 ಕೆ.ಜಿ ಅಕ್ಕಿ ಸಿಗಲ್ಲ.. ಕಾರಣ ಗೊತ್ತಾ..?

Publicspot

Hospital Bill new Rules: ಖಾಸಗಿ ಆಸ್ಪತ್ರೆಗಳಲ್ಲಿ ಮೊದಲೇ ಬಿಲ್ ಕೇಳುವಂತಿಲ್ಲ​ .. ಸರ್ಕಾರದ ಹೊಸ ರೂಲ್ಸ್​..

Publicspot

New BPL Card: ರೇಷನ್​ ಕಾರ್ಡ್​ ಇಲ್ಲದವರಿಗೆ ಸರ್ಕಾರದಿಂದ ಗುಡ್​ ನ್ಯೂಸ್​..

Publicspot