The Public Spot
ಅಪರಾಧ

ವಯಸ್ಸಿನ ಅಂತರ.. ಹೆಂಡತಿ ಪ್ರೇಮದಾಟ.. ಕೊಲೆಗಾರ ಗಂಡ..

ಅಕ್ರಮ ಸಂಬಂಧ ಅನ್ನೋದು ಕಾನೂನು ಪ್ರಕಾರ ತಪ್ಪು ಅಲ್ಲದೇ ಇರಬಹುದು. ಆದರೆ ನೈತಿಕತೆಯ ಪ್ರಶ್ನೆ. ಕುಟುಂಬದ ಮರ್ಯಾದೆ ಅನ್ನೋದು ಕೊಲೆಗಾರನನ್ನಾಗಿ ಮಾಡಿಬಿಟ್ಟಿದೆ. ಬೆಳಗಾವಿಯ ಮುರುಳೀಧರ್ ಕಾಲೋನಿಯಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿತ್ತು. 23 ವರ್ಷದ ಅಶ್ವಿನಿ ವಿಠ್ಠಲ ಹೆಗ್ಗಡೆ ಎಂಬಾಕೆಯ ಬದುಕು ರಕ್ತದ ಮಡುವಿನಲ್ಲಿ ಮಲಗಿತ್ತು. ಇದಕ್ಕೆ ಕಾರಣ ಆಕೆಯ ಗಂಡ ವಿಠಲ್‌‌ ತೆಗೆದುಕೊಂಡ ನಿರ್ಧಾರ. ಪೇಟಿಂಗ್ ಕೆಲಸ ಮಾಡ್ಕೊಂಡಿದ್ದ ವಿಠ್ಠಲ್, ಹೆಂಡತಿ ಪಾಲಿಗೆ ರಾಕ್ಷಸನಾಗಿದ್ದ.

ಅಕ್ರಮ ಸಂಬಂಧ ಶುರುವಾಗಲು ನಾನಾ ಕಾರಣಗಳು ಇರುತ್ತವೆ. ಇಬ್ಬರು ಮುದ್ದಾದ ಮಕ್ಕಳ ತಾಯಿಯ ಕಾಮದ ಅಮಲು ನೆತ್ತಿಗೇರಿತ್ತು. ಪ್ರಪಂಚವನ್ನೇ ಮರೆತು ಮೋಹದ ಬಲೆಯಲ್ಲಿ ಬಿದ್ದಿದ್ದ 23 ವರ್ಷದ ಅಶ್ವಿನಿಯದ್ದು ತಪ್ಪೋ..? 33 ವರ್ಷದ ವಿಠ್ಠಲ ಹೆಗ್ಗಡೆ ಕುಡಿದು ದಿನನಿತ್ಯ ಮನೆಯಲ್ಲಿ ರಾಮಾಯಣ ಮಾಡಿದ್ದು ತಪ್ಪೋ ಅನ್ನೋ ಗೊಂದಲ ಮೂಡುವಂತಹ ಸಂಸಾರ. 10 ವರ್ಷ ವ್ಯತ್ಯಾಸ, ಸಂಸಾರದಲ್ಲಿ ಹಿತವಿಲ್ಲದ ಹೆಣ್ಣು ಪರಪುರುಷನ ಮೋಹಕ್ಕೆ ಬಿದ್ದಿದ್ದಳು. ಇದೀಗ ಎರಡು ಮಕ್ಕಳ ತಾಯಿ ಬೀದಿ ಹೆಣವಾಗಿದ್ದಾಳೆ. ಪತ್ನಿಯ ಕಾಮದಾಟಕ್ಕೆ ರೊಚ್ಚಿಗೆದ್ದ ಗಂಡ ವಿಜಯದಶಮಿ ದಿನವೇ ಹೆಣ ಉರುಳಿಸಿದ್ದಾನೆ.

ದಿನನಿತ್ಯವೂ ಕುಡಿದು ಬಂದು ಕೊಡಬಾರದ ಕಿರುಕುಳ ಕೊಡ್ತಿದ್ದ ವಿಠ್ಠಲ್​ ಹೆಗ್ಗಡೆಯನ್ನು ಹೆಂಡತಿ ಮಾನಸಿಕವಾಗಿ ದೂರ ಮಾಡಿದ್ದಳು. ಅಶ್ವಿನಿಗೆ ಪರಪುರುಷನ ಮೋಹ ಬೆಳೆಸಿದ್ದು ತಿಳಿದ ಗಂಡ ಹೆಡೆ ತುಳಿದ ನಾಗರ ಹಾವಿನಂತಾಗಿದ್ದ. ವಿಠ್ಠಲ ಹೆಗ್ಗಡೆ ತಂಡೆ ವಯೋಸಹಜವಾಗಿ ಹಾಸಿಗೆ ಹಿಡಿದಿದ್ದು, ಊಟ ಮಾಡಿಸುತ್ತಿದ್ದ ಪತ್ನಿಯನ್ನು ಅಪ್ಪನ ಎದುರಲ್ಲೇ ಕೊಚ್ಚಿ ಕೊಂದಿದ್ದಾನೆ. ಅನೈತಿಕ ಸಂಬಂಧ ಸಂಸಾರವನ್ನೇ ಸರ್ವನಾಶ ಮಾಡಿದೆ. ಅಮ್ಮ ಪ್ರಾಣವನ್ನೇ ಬಿಟ್ಟರೆ, ಅಪ್ಪ ಜೈಲು ಸೇರಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ.

Related posts

Darshan Jail; ಜೈಲಿನಲ್ಲಿ ಸಹ ಕೈದಿಗಳ ಮೇಲೆ ನಟ ದರ್ಶನ್​ ಹಲ್ಲೆ.. ಎಷ್ಟು ಸತ್ಯ..?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

Youtuber Mukaleppa Love Zihad; ಮುಕಳೆಪ್ಪ ವಿರುದ್ಧ ಲವ್‌ ಜಿಹಾದ್‌ ಕೇಸ್‌.. ಪತ್ನಿ ಪೊಲೀಸ್‌ ವಶಕ್ಕೆ..

Publicspot

ಗಿಳಿ ಹಿಡಿಯಲು ಹೋದ ಯುವಕ, ಕರೆಂಟ್​ ಶಾಕ್​ನಿಂದ ಸಾವು..!

Publicspot

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

SBI Bank Looted ; ಭೀಮಾ ತೀರದಲ್ಲಿ ರಕ್ತಪಾತವಿಲ್ಲದೆ ಬ್ಯಾಂಕ್‌ ದರೋಡೆ..

Publicspot