September 27, 2026
The Public Spot
Uncategorizedರಾಜಕೀಯರಾಜ್ಯ

ಮಂತ್ರಿಯಾಗಿ ನಾಳೆ ಮೊದಲ ಸದನ.. ಖಾತೆ ಪಡೆದ ಸಚಿವರು ಏನಂದ್ರು..?

ಕರ್ನಾಟಕ ಸರ್ಕಾರದಲ್ಲಿ ಖಾತೆ ಹಂಚಿಕೆ ಬಳಿಕ ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಖಾತೆ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ, ಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್ ವಿಶ್ವಾಸ ಇಟ್ಟು ಸೀನಿಯರ್ ಅಂತ ಸಮಾಜ ಕಲ್ಯಾಣ ಖಾತೆ ಕೊಟ್ಟಿದ್ದಾರೆ. ಡಿಸಿಎಂ ಡಾ ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸೇರಿದಂತೆ ಸಮುದಾಯದವರು ಒಟ್ಟಾಗಿ ಸೇರಿ ನಿರ್ಧಾರ ಮಾಡಿ ಕೆಲಸ ಮಾಡುತ್ತೇವೆ. ಎಲ್ಲಾ ಮಂತ್ರಿಗಳು ಒಟ್ಟಿಗೆ ಕೂತು ಮಾತನಾಡಿದ ಬಳಿಕ ಸಿಎಂ ಮುಂದೆ ತರಬೇಕು ಅನ್ನೋ ಹೊಸ ಚಿಂತನೆ ಮಾಡಿದ್ದೇವೆ. ಸಮಾಜವನ್ನ ಯಾವ ರೀತಿ ಅಭಿವೃದ್ಧಿ ಮಾಡಬೇಕು. ಒಳ್ಳೆ ಜೀವನ ಮಾಡಲು ಏನ್ ಮಾಡಬೇಕು ಅಂತ ಸಭೆ ಮಾಡಿ ಸಿಎಂ ಗಮನಕ್ಕೆ ತರುತ್ತೇವೆ. ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಕ್ಯಾಬಿನೆಟ್​ನಲ್ಲಿ ಮಂತ್ರಿ ಆಗಿದ್ದೆ. ಉನ್ನತ ಶಿಕ್ಷಣ ಖಾತೆ ತುಂಬ ಪ್ರಮುಖ ಖಾತೆ. ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಬೆಂಗಳೂರಿಗೆ ಬರ್ತಾರೆ. ವಿದೇಶದಿಂದ ಭಾರತಕ್ಕೆ ಬರುವವರಲ್ಲಿ ಅತಿ ಹೆಚ್ಚು ಇಲ್ಲಿಗೆ ಬರ್ತಾರೆ. ಇಲಾಖೆಯಲ್ಲಿ ಸಾಕಷ್ಟು ಕೆಲಸಗಳಿವೆ. ವಿಶ್ವ ವಿದ್ಯಾಲಯಗಳ ಸುಧಾರಣೆಗಳಾಗಬೇಕು. ಡಿಕೆ ಶಿವಕುಮಾರ್ ಚಾಣಾಕ್ಷತನದಿಂದ ಸರ್ಕಾರ ನಡೆಸ್ತಾರೆ. ಹಣಕಾಸು ಹೊಂದಿಸುವ ಕೆಲಸ ಮಾಡ್ತಾರೆ. ಹೆಣ್ಣು ಮಕ್ಕಳಿಗೆ ಪಕ್ಷ ಅವಕಾಶ ಕೊಡುತ್ತದೆ. ಈಗ ಕೆಲವು ಸಲಹೆ ಸೂಚನೆ ನೀಡಿದ್ದಾರೆ ಎಂದಿದ್ದಾರೆ.

ನೂತನ ಸಚಿವ ಡಾ ಅಜಯ್ ಸಿಂಗ್ ಮಾತನಾಡಿ, ಖಾತೆ ಬಗ್ಗೆ ಯಾವುದೇ ನಿರೀಕ್ಷೆ ಇದ್ದಿದ್ದಿಲ್ಲ. ಕೊಟ್ಟ ಖಾತೆ ನಿಭಾಯಿಸುತ್ತೇನೆ. ಅಧಿವೇಶನಕ್ಕೆ ರೆಡಿ ಇದೀವಿ, ನಾವೇನು‌ ಹೊಸಬರಲ್ಲ. ಮೂರು ಬಾರಿ ಗೆದ್ದಿದ್ದೇನು. ಅಧಿವೇಶನಕ್ಕೆ ರೆಡಿ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೂತನ ಸಚಿವ ಪುಟ್ಟರಂಗ ಶೆಟ್ಟಿ ಮಾತನಾಡಿ, ಹೈಕಮಾಂಡ್ ನಂಬಿ ಖಾತೆ ಕೊಟ್ಟಿದೆ. ಹೈಕಮಾಂಡ್ ಏನು ಕೊಟ್ಡಿದೆಯೋ ನಿಭಾಯಿಸುತ್ತೇನೆ. ನೂತನ ಖಾತೆ ಬಗ್ಗೆ ತೃಪ್ತಿ ಇದೆ ಎಂದಿದ್ದಾರೆ.

ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿ ಹೋರಾಟದ ವಿಚಾರವಾಗಿ ಸಚಿವ ನಾಗೇಂದ್ರ ಮಾತನಾಡಿ, ಬಿಹಾರದ ಸಿಎಂ ಮೇಲೆ‌ ಹಲವಾರು ಕೇಸ್​ಗಳಿವೆ ಏನ್​ ಮಾಡೋದು ಎಂದು ಟಾಂಟ್​ ಕೊಟ್ಟಿದ್ದಾರೆ. ಸದನದಲ್ಲಿ ಏನ್ ಪ್ರಶ್ನೆ ಕೇಳಿದ್ರು ಉತ್ತರ ಕೊಡೊದಕ್ಕೆ ಪ್ರಯತ್ನ ಮಾಡ್ತಿನಿ. ವಿರೋಧ ಪಕ್ಷಗಳ ಕೆಲಸವೇ ಆರೋಪ ಮಾಡೋದು. ಬರ ಸಮಸ್ಯೆ ಇದೆ ರಾಜ್ಯದ ಜ್ವಲಂತ ಸಮಸ್ಯೆಗಳಿವೆ. ಬರ ಅಧ್ಯಯನ ಮಾಡಿದ್ದೇವೆ. ಅಭಿವೃದ್ಧಿ, ಬಡವರಿಗೆ ಅನುಕೂಲ ಮಾಡಬೇಕು. ಸಿಎಂ ಜೊತೆ ನಾವೆಲ್ಲಾ ಕೈ ಜೊಡಿಸಿದ್ದೇವೆ. ಬಿಡದಿ ಹಾಗೂ ನನ್ನ ವಿಚಾರದಲ್ಲಿ ಬಿಜೆಪಿಯವರು ಕಾಲಹರಣ ಮಾಡ್ತಿದ್ದಾರೆ. ನಾನು ಒಬ್ಬ ದಲಿತ, ದಲಿತರನ್ನ ಬಿಜೆಪಿಯವರು ಟಾರ್ಗೆಟ್ ಮಾಡ್ತಿದ್ದಾರೆ ಎಂದಿದ್ದಾರೆ.

ಬಿಜೆಪಿಯವರು ದೊಡ್ಡ ದೊಡ್ಡ ನಾಯಕರನ್ನ ಮೂಲೆ ಗುಂಪು ಮಾಡಿದ್ದಾರೆ. ಮೊದಲು ಅವರ ಮನೆಯಲ್ಲಿ ಇರೋದನ್ನ ಕ್ಲಿಯರ್ ಮಾಡಿಕೊಂಡು ಬರಲಿ. ನಾನು ಯಾವ ಖಾತೆಯನ್ನ ಕೇಳಿರಲಿಲ್ಲ. ಕೆಲವು ಸಮಯದಲ್ಲಿ ನನ್ನ ಮೆಲೆ ಅಪಾದನೆ ಬಂದಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇದ್ದಾವೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದು, ವಿರೋಧ ಪಕ್ಷದವರದ ಕೆಲಸ ಅದೇ. ಅವರ ಕಿವಿಯಲ್ಲಿ ಯಾರಾದ್ರು ಹೇಳ್ತಾರಾ..? ಛಲವಾದಿ ನಾರಾಯಣಸ್ವಾಮಿ ಹಿರಿಯರು ಇದ್ದಾರೆ ಬ್ಲಾಕ್ ಮೇಲ್ ಮಾಡಿದ್ದಾರೆ ಅಂತಾರೆ. ಈ ಹಿಂದೆ ರಾಜೀನಾಮೆಯನ್ನ ಸ್ವ ಇಚ್ಚೆಯಿಂದನೇ ಕೊಟ್ಟಿದ್ದೆ. ನಾನು ಮಂತ್ರಿಯಾಗಿದ್ರೆ ತೊಂದರೆ ಆಗುತ್ತೆ ಅಂತಾ ರಾಜೀನಾಮೆ ಕೊಟ್ಟಿದ್ದೆ. ಮುಕ್ತನಾಗಿ ಬರಬೇಕಂತ ರಾಜೀನಾಮೆ ಕೊಟ್ಟಿದ್ದೆ. ಈಗ ಎಸ್​ಐಟಿಯಿಂದ‌ ಕ್ಲೀನ್ ಚಿಟ್ ಸಿಕ್ಕಿದೆ. ಮಂತ್ರಿ ಆಗಿದ್ದೇನೆ ಎಂದಿದ್ದಾರೆ.

Related posts

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

Publicspot

ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್

admin

Veerashaiva Lingayat; ಲಿಂಗಾಯತ ಬೇರೆ ಅಲ್ಲ.. ವೀರಶೈವ ಬೇರೆ ಅಲ್ಲ.. ನಾವಿಬ್ಬರೂ ಒಂದೇ.. ಮತ್ತೆ ಗೊಂದಲ

Publicspot

ಬಿ ‘ಹಾರ’ ಯಾರಿಗೆ..? ಮತ ಎಣಿಕೆ ಮೇಲೆ ಕೋಟಿ ಕೋಟಿ ಕಣ್ಣು..!

Publicspot

Namma Metro ಹಳದಿ ಮಾರ್ಗದಲ್ಲಿ ಮಹಾನ್​ ಎಡವಟ್ಟು.. ಜನರೆಲ್ಲಾ ಕಂಗಾಲು..

Publicspot

ರಾಜ್ಯದಲ್ಲಿ ಬೇಸಿಗೆ ಮಳೆಗೆ ಕಂಗಾಲಾದ ರೈತರು.. ಹಲವು ಬೆಳೆಗಳು ಹಾನಿ..

Publicspot