The Public Spot
ದೇಶ-ವಿದೇಶ

ವಾಟ್ಸಪ್​, ಟೆಲಿಗ್ರಾಂ ಬಂದ್ ಆಗುತ್ತೆ.. ನಿಯಮ ಬದಲಾವಣೆ..!

ಪತ್ರವ್ಯವಹಾರ, ಇ-ಮೇಲ್​, ಫೋನ್​ ಸಂಭಾಷಣೆ ಸೇರಿದಂತೆ ಸಾಕಷ್ಟು ಸಂವಹನ ವ್ಯವಸ್ಥೆಯನ್ನು ನುಂಗಿ ನೀರು ಕುಡಿದಿದ್ದು ಅಂದ್ರೆ ವಾಟ್ಸಪ್​ ಹಾಗೂ ಟೆಲಿಗ್ರಾಂ. ಒಂದು ಸಂದೇಶ ಹಾಕಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. ಇದೀಗ ವಾಟ್ಸಪ್​ ಹಾಗೂ ಟೆಲಿಗ್ರಾಂ ಆ್ಯಪ್​ಗೆ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿ ಮಾಡುತ್ತಿದೆ. ಈ ನಿಯಮ ಸಾಕಷ್ಟು ಜನರ ವಾಟ್ಸಪ್​ ಹಾಗೂ ಟೆಲಿಗ್ರಾಂ ಆ್ಯಪ್​ ಬಳಕೆಯನ್ನೇ ಸ್ಥಗಿತ ಮಾಡುತ್ತದೆ.

ಬಹುತೇಕ ಮಂದಿ ವಾಟ್ಸಪ್​ ಬಳಕೆಗೆ ಒಂದು ಮೊಬೈಲ್​ ನಂಬರ್​ ತೆಗೆದುಕೊಂಡಿರ್ತಾರೆ. ಒಮ್ಮೆ ಆ ನಂಬರ್​ನಲ್ಲಿ ವಾಟ್ಸಪ್​ ಸೇರಿದಂತೆ ಇತರೆ ಮೆಸೇಂಜಿಂಗ್​ ಆ್ಯಪ್​ ಹಾಕಿಕೊಂಡು ರಿಜಿಸ್ಟರ್​ ಮಾಡ್ತಾರೆ. ಆ ಬಳಿಕ ಆ ಮೊಬೈಲ್​ ನಂಬರ್​ ಬಳಕೆಯನ್ನೇ ಮಾಡದೆ, ರೀಚಾರ್ಜ್​ ಕೂಡ ಮಾಡದೆ ಹಾಗೆ ಬಿಟ್ಟಿರುತ್ತಾರೆ. ಅದು ಮೂರ್ನಾಲ್ಕು ತಿಂಗಳಲ್ಲಿ ಡೆಡ್​ ಆಗುತ್ತದೆ. ಆದರೂ ಮೆಸೇಜ್​ ಆ್ಯಪ್​ ಮಾತ್ರ ಅದೇ ನಂಬರ್​ನಲ್ಲಿ ಕಂಟಿನ್ಯೂ ಆಗಿರುತ್ತದೆ. ಆದರೆ ಜನವರಿ 1, 2027ರಿಂದ ರೀಚಾರ್ಜ್​ ಮಾಡಿಸದೆ ಡೆಡ್​ ಸಿಮ್ ನಂಬರ್​ ಎಲ್ಲವೂ ಬಂದ್​ ಆಗಲಿದೆ. ಮೊಬೈಲ್​ ನಂಬರ್​ ಒಮ್ಮೆ ಖರೀದಿ ಮಾಡಿ ವಾಟ್ಸಪ್​, ಟೆಲಿಗ್ರಾಂ ಕನೆಕ್ಟ್​ ಮಾಡಿಕೊಂಡು ಸಿಮ್​ ಆಕ್ಟೀವ್​ ಇರಿಸಿಕೊಳ್ಳದ ಸಿಮ್​​ಗಳು ಕೆಲಸ ಕಾರ್ಯ ನಿಲ್ಲಿಸುತ್ತವೆ.

ಕೇಂದ್ರ ಸರ್ಕಾರ ಆನ್​ಲೈನ್​ ಫ್ರಾಡ್​ಗಳನ್ನು ನಿಲ್ಲಿಸೋಕೆ ಮಹತ್ವದ ಕ್ರಮ ಕೈಗೊಂಡಿದ್ದು, ಅದರಲ್ಲಿ ಡೆಡ್​ ಸಿಮ್​ಗಳ ನಂಬರ್​ ಬಳಸಿ ವಾಟ್ಸಪ್​, ಟೆಲಿಗ್ರಾಂ ಬಳಕೆ ಮಾಡುವುದು, ಅದರಿಂದ ಮೆಸೇಜ್​ ಕಳುಹಿಸಿ ದೋಖಾ ಮಾಡುವುದನ್ನು ತಡೆಯುವ ಕೆಲಸ ಮಾಡುತ್ತಿದೆ. ಯಾವ ಸಿಮ್​ನಲ್ಲಿ KYC ಅಪ್​ಡೇಟ್​ ಆಗಿರುತ್ತದೆಯೋ ಆ ಸಿಮ್​ಗಳು ಮಾತ್ರ ಕೆಲಸ ಮಾಡಲಿವೆ. ನೀವು ಬಳಸುತ್ತಿರುವ ಸಿಮ್​ನಲ್ಲೇ ವಾಟ್ಸಪ್​ ಕೂಡ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ.

ಇಂಡಿಯಾ ಮೊಬೈಲ್​ ನಂಬರ್​ ಬಳಸಿಕೊಂಡು ಅಪರಾಧ ಕೃತ್ಯ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರದ ಟೆಲಿಕಾಂ ಡಿಪಾರ್ಟ್​ಮೆಂಟ್​ ಮುಂದಾಗಿದ್ದು, ಮೊಬೈಲ್​ನಲ್ಲಿ ಹಾಕಿರುವ ಸಿಮ್​ನಲ್ಲೇ ವಾಟ್ಸಪ್​, ಟೆಲಿಗ್ರಾಂ ಸೇರಿದಂತೆ ಮೆಸೇಜ್​ ಆ್ಯಪ್​ ಆಗಿ ಬಳಕೆ ಮಾಡಬೇಕು. ಅದನ್ನು ಬಿಟ್ಟು ಸಿಮ್​ ಇಲ್ಲದೆ ಬಳಸುವ ವಾಟ್ಸಪ್​ ಸೇರಿದಂತೆ ಮೆಸೇಜ್​ ಆ್ಯಪ್​ಗಳು ಅಪ್​ಡೇಟ್​ ಆಗಲು ಡಿಸೆಂಬರ್​ 31 ಕೊನೇ ದಿನವಾಗಿದೆ. ನಿಮ್ಮ ವಾಟ್ಸಪ್​ ಕೂಡ ಅದೇ ರೀತಿ ಬೇರೊಂದು ನಂಬರ್​ನಲ್ಲಿ ಆ್ಯಕ್ಟೀವ್​ ಆಗಿದ್ದರೆ ಈಗಲೇ ಬದಲಿಸಿಕೊಳ್ಳಿ.. ಇಲ್ಲದಿದ್ರೆ ಕೊನೆ ದಿನ ಸಂಕಷ್ಟ ತರಬಹುದು.

Related posts

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot

ಇಂದಿನಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಿದ್ಯಾ..?

Publicspot

ಇರಾನ್‌ ಸರ್ವೋಚ್ಛ ನಾಯಕ, ಇಸ್ರೇಲ್‌ ಪ್ರಧಾನಿ ಇಬ್ಬರೂ ಇಲ್ಲ.. ಏನಾದ್ರು..?

Publicspot

ಮಕ್ಕಳಿಗೆ ಇಂಟರ್ನೆಟ್ ಸೇವೆ ನಿರ್ಬಂಧ ಅಸಾಧ್ಯ.. ಸುಪ್ರೀಂ ಆದೇಶ..

Publicspot

RSS ನೋಂದಣಿ ವಿಚಾರದಲ್ಲಿ ವಾಕ್ಸಮರ.. ಪತ್ರ ಸೋರಿಕೆ ಆಗಿದ್ಯಾ..?

Publicspot

NEET ಪ್ರಶ್ನೆ ಪತ್ರಿಕೆ ಲೀಕ್‌ ಕೇಸ್‌ನಲ್ಲಿ BJP, RSS ಕೈವಾಡ ಇದೆಯಾ..?

Publicspot