The Public Spot
ರಾಜಕೀಯ

ಕಾಂಗ್ರೆಸ್​ ಆರೋಪಕ್ಕೆ ಖಡಕ್​ ಉತ್ತರ ಕೊಟ್ಟ ಸಂಸದ ತೇಜಸ್ವಿ ಸೂರ್ಯ.. ಇದು ಸತ್ಯ..

ನಮ್ಮ ಮೆಟ್ರೋ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಅನುದಾನದ ಬಗ್ಗೆ ಮಾತನಾಡಿದ್ದ ಗ್ರೇಟರ್​ ಬೆಂಗಳೂರು ಸಚಿವ ಕೃಷ್ಣಬೈರೇಗೌಡ ಅವರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ನಮ್ಮ ಮೆಟ್ರೋ ಅನುದಾನದ ಬಗ್ಗೆ ಮಾತಾಡಿದ್ದಾರೆ. ಮೆಟ್ರೋ ಯೋಜನೆ ಆಗಿರಲಿ, ಯಾವುದೇ ಯೋಜನೆಗಳಾಗಲಿ ಮೋದಿಯವರೇ ಆಗಲಿ, ಡಿಕೆ ಶಿವಕುಮಾರ್​ ಅವರ ಜೇಬಿನಿಂದ ಸ್ವಂತ ಹಣ ತೆಗೆದು ಮಾಡುವುದಿಲ್ಲ. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಯೋಜನೆಗಳು ಮಾಡುವುದು ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರದ 50 ಪರ್ಸೆಂಟ್, ರಾಜ್ಯ ಸರ್ಕಾರದ 50 ಪರ್ಸೆಂಟ್ ಪಾಲುದಾರಿಕೆ ಇದೆ. ಆದರೂ ಬೆಂಗಳೂರಿನಿಂದ ಜನರಿಗೆ ಮಿಸ್ ಗೈಡ್ ಮಾಡ್ತಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ತಗೊಂಡಿರುವ, ಮುಖ್ಯಮಂತ್ರಿಗಳು, ಬೆಂಗಳೂರು ನಗರಾಭಿವೃದ್ಧಿ ಸಚಿವರು, ಗಂಭೀರವಾದ ಸುಳ್ಳನ್ನು ಜನರಿಗೆ ಹೇಳ್ತಿದ್ದಾರೆ. ರಾಜ್ಯದ ಗೃಹ ಸಚಿವರು RSS ಮೇಲೆ ಫೇಕ್ ನ್ಯೂಸ್ ಮಾಡ್ತಾರೆ. ಆಹಾರ ಸಚಿವರು ಎಥೆನಾಲ್ ಮೇಲೆ ಫೇಕ್ ನ್ಯೂಸ್ ಮಾಡ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಮೆಟ್ರೋ ಯೋಜನೆ ಬಗ್ಗೆ ಫೇಕ್ ನ್ಯೂಸ್ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಶೇಕಡ 84 ರಷ್ಟು ಪಾಲು ಕೊಡ್ತಿದೆ. ಕೇಂದ್ರ ಸರ್ಕಾರ ಶೇಕಡ 16ರಷ್ಟು ಅನುದಾನ ಕೊಡ್ತಿದೆ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡಿಸ್ತಿರೋ ಲೋನ್ ಮಾಹಿತಿಯನ್ನು ಕೇಂದ್ರದ ಕಾಲಂನಲ್ಲಿ ಹಾಕೋ ಬದಲು ರಾಜ್ಯ ಸರ್ಕಾರ ಕಾಲಂನಲ್ಲಿ ಹಾಕಿದ್ದಾರೆ. ಸಾಲ ತೀರಿಸೋದು BMRCL. ಲೋನ್‌ಗೆ ಗ್ಯಾರಂಟಿ ಕೊಟ್ಟಿರೋದು ಕೇಂದ್ರ ಸರ್ಕಾರ. ಇದರಲ್ಲಿ ರಾಜ್ಯದ ಪಾಲು ಎಲ್ಲಿದೆ..? ಎಂದು ಪ್ರಶ್ನಿಸಿದ್ದಾರೆ. ಸಿಎಂ & ಸಚಿವರು ಮಿಸ್ ಗೈಡ್ ಮಾಡಿ ರಾಜ್ಯದ ಜನತೆ ಸುಳ್ಳು ಹೇಳಿದ್ದಾರೆ. ಸಂವಿಧಾನ ಮೇಲೆ ಪ್ರಮಾಣ ಮಾಡಿ ಈ ರೀತಿ ಸುಳ್ಳು ಹೇಳೋದು ಸರಿಯಲ್ಲ. 28,958 ಕೋಟಿ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಬಂದಿದೆ. ಈ ಹಣ ನೇರವಾಗಿ BMRCLಗೆ ಹೋಗುತ್ತದೆ ಅನ್ನೋ ಮಾಹಿತಿ ನೀಡಿದ್ದಾರೆ.

ಈ ಅಂಕಿ ಅಂಶಗಳ ಪ್ರಕಾರ ಕೇಂದ್ರದ ಪಾಲು ಶೇಕಡ 54ರಷ್ಟು ಆಗಲಿದ್ದು, ರಾಜ್ಯ ಸರ್ಕಾರರದ ಪಾಲು ಶೇಕಡ 46ರಷ್ಟು ಆಗುತ್ತದೆ. ಮೆಟ್ರೋ ಒಟ್ಟು ಪ್ರಾಜೆಕ್ಟ್ ಕಾಸ್ಟ್ 77,891 ಕೋಟಿ ಆಗಿದೆ. ಕೇಂದ್ರ ಸರ್ಕಾರದ ಒಟ್ಟು ಅನುದಾನ ಮತ್ತು ಸಾಲ ಸೇರಿಸಿ 41,558 ಕೋಟಿ ರೂಪಾಯಿ ಕೊಟ್ಟಿದ್ದು, ರಾಜ್ಯ ಸರ್ಕಾರದಿಂದ 36,333 ಕೋಟಿ ಅನುದಾನ ಬಂದಿದೆ. ಇಷ್ಟು ಇದ್ರು ರಾಜ್ಯದ ಜನತೆ ಮುಂದೆ ಸುಳ್ಳು ಹೇಳೋ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಪಂಚ ಗ್ಯಾರಂಟಿಗಳಿಂದ ದಿವಾಳಿ ಆಗಿರುವ ಸರ್ಕಾರಕ್ಕೆ ವಿದೇಶಿ ಬ್ಯಾಂಕುಗಳು ಲೋನ್ ಕೊಡುತ್ತವಾ..? ಎಂದು ವ್ಯಂಗ್ಯವಾಡಿದ್ದಾರೆ.

ಆರೆಂಜ್ ಲೈನ್ ಡಿಲೇ ಬಗ್ಗೆ ಸಚಿವ ಕೃಷ್ಣಬೈರೇಗೌಡರು ಮಾತನಾಡಿದ್ದಾರೆ. ಆರೆಂಜ್​ ಲೈನ್ ನನ್ನ ಕ್ಷೇತ್ರದಲ್ಲೇ ಬರುತ್ತದೆ. 2024ಕ್ಕೆ ಡಿಪಿಎಆರ್ ಅಪ್ರೋವಲ್ ಸಿಕ್ಕಿದೆ. ಎರಡು ವರ್ಷಗಳಾದ್ರು ರಾಜ್ಯ ಸರ್ಕಾರ ಏನು ಕೆಲಸ ಮಾಡಿಲ್ಲ. ಮೂರು ಬಾರಿ ಡಿಸೈನ್ ಚೈಂಜ್ ಮಾಡಿ ಡಿಪಿಆರ್​ಗೆ ಕಳುಹಿಸಿದ್ದಾರೆ. ಈ ರೀತಿಯ ಮಾಡಿದ್ರೆ ಯಾವ ರೀತಿ ಡಿಸೈನ್ ಅಪ್ರೋವಲ್ ಕೊಡಬೇಕು..? ಈ ಲೈನ್ ಬಗ್ಗೆ ಇವತ್ತಿನವರೆಗೂ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ. ಎರಡು ವರ್ಷಗಳಾಗಿದೆ ಅಪ್ರೂವಲ್ ಆಗಿ, ಇನ್ನೂ ಯೋಜನೆ ಮಾಡುತ್ತಿಲ್ಲ. ಇನ್ನೂ ರೆಡ್ ಲೈನ್ ಬಗ್ಗೆ ರಾಜ್ಯ ಸರ್ಕಾರ ಯಾವ ರೀತಿ ಖತಾರ್ನಕ್ ಕೆಲಸ ಮಾಡ್ತಿದೆ ಅಂದರೆ, ಅಕೌಂಟ್ ಇಲ್ಲದೇ ಹೆಚ್ಚು ವೆಚ್ಚ ಮಾಡಿ ರಾಜ್ಯದ ಜನರ ದುಡ್ಡನ್ನು ಲೂಟಿ ಮಾಡಲು ಹೊರಟಿದ್ರು. ಇವರು ಕಣ್ಮುಚ್ಚಿ ಕಳುಹಿಸಿರುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಓಕೆ ಅಂದಿದ್ದರೆ 2500 ಕೋಟಿ ಹಣ ಲೂಟಿ ಆಗುತ್ತಿತ್ತು ಎಂದು ಟೀಕಿಸಿದ್ದಾರೆ.

ಮೆಟ್ರೋ ಫೇಸ್ 3A ರೆಡ್ ಲೈನ್ ಕಾಸ್ಟ್ ಅಗತ್ಯಕ್ಕಿಂತ ಹೆಚ್ಚು ಮಾಡಲಾಗಿದೆ. ಡಿಸೈನ್ ಕಾಸ್ಟ್ ಬಹಳ ಹೆಚ್ವು ಮಾಡಿ ಜನರ ತೆರಿಗೆ ಹಣ ಲೂಟಿ ಮಾಡಲು ಹೊರಟಿದ್ರು. ಕೇಂದ್ರ ಸರ್ಕಾರ ರಿವ್ಯೂ ಮಾಡಿ 2,406 ಕೋಟಿ ಕಡಿಮೆ ಮೊತ್ತದಲ್ಲಿ ಸಬ್ ಮಿಟ್ ಮಾಡಲಾಗಿದೆ. ಜನರ ತೆರಿಗೆ ಹಣ ಉಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಡಿಸೈನ್, ಕಾಸ್ಟ್ ಕಡಿಮೆ ಮಾಡಲಾಗಿದೆ ಎಂದಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರ ಹೇಳಿದ್ದೂ ಸರಿಯಿದೆ. ಸಂಸದ ತೇಜಸ್ವಿ ಸೂರ್ಯ ಮಾಹಿತಿಯೂ ಸರಿಯಿದೆ. ರಾಜ್ಯದ್ದು 50 ಪರ್ಸೆಂಟ್​.. ಕೇಂದ್ರದ್ದು 16 ಪರ್ಸೆಂಟ್​.. ಉಳಿದದ್ದು ವಿದೇಶದಿಂದ ಸಾಲ. ಅದನ್ನು ರಾಜ್ಯ ಸರ್ಕಾರವೂ ಕಟ್ಟೋದಿಲ್ಲ, ಕೇಂದ್ರ ಸರ್ಕಾರವೂ ಕಟ್ಟೋದಿಲ್ಲ. ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಓಡಾಡುವ ಜನರ ದುಡ್ಡಿಂದ ಕಟ್ಟಲಾಗ್ತಿದೆ. ಅದೇ ಕಾರಣಕ್ಕೆ ಇಡೀ ದೇಶದಲ್ಲೇ ಅತ್ಯಧಿಕ ಟಿಕೆಟ್​ ದರ ಮಾಡಲಾಗಿದೆ ಅಷ್ಟೆ.

Related posts

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆ ಮತ್ತು ಅನುಮಾನ

Publicspot

ಅಪ್ಪನ ಕ್ಷೇತ್ರದಲ್ಲಿ ಮಗನ ಅಬ್ಬರ.. ಕುರುಬರು ಕಾಂಗ್ರೆಸ್‌ಗೆ ಮೀಸಲಲ್ಲ – HDK

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot

Okkaliga and Lingayath united; ಜಾತಿ ಗಣತಿ ಆರಂಭಕ್ಕೂ ಮುನ್ನವೆ ಬಲಾಢ್ಯರ ವಿರೋಧ.. ಸಣ್ಣ ಬಿರುಕು..

Publicspot

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

Publicspot