The Public Spot
ಅಪರಾಧ

ಬೆಂಗಳೂರಿನಲ್ಲಿ ಕಳ್ಳತನಕ್ಕೆ ಬಂದವನು ಫಿಲ್ಮ್​ ಆ್ಯಕ್ಟರ್ ಆಗಿದ್ಹೇಗೆ..? ​

ಬೆಂಗಳೂರಿನಲ್ಲಿ ಕಳ್ಳತಕ್ಕೆ ಹೋಗಿ ಸಿಕ್ಕಿಬಿದ್ದ ಖದೀಮನೊಬ್ಬ ಫಿಲ್ಮ್​ ಆ್ಯಕ್ಟರ್​ ಆಗಿ ಬದಲಾಗಿರುವ ಘಟನೆ ನಡೆದಿದೆ. ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಬಂದವನು ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆಗ ಜನರಿಂದ ತಪ್ಪಿಸಿಕೊಳ್ಳಲು ಅಂಗಡಿಯಲ್ಲಿದ್ದ ಯುವತಿಯನ್ನು ಹಿಡಿದುಕೊಂಡು ಎಳೆದಾಡಿದ್ದಾನೆ. ನನ್ನನ್ನು ಹಿಡಿಯೋಕೆ ಬಂದರೆ ಯುವತಿಯನ್ನ ಕೊಲೆ ಮಾಡುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ತಾನು ತಪ್ಪಿಸಿಕೊಳ್ಳಲು ಯುವತಿಯನ್ನ ನಡು ರಸ್ತೆ ಎಳೆದಾಡಿ ರಂಪಾಟ ಮಾಡಿದ್ದಾನೆ. ಕೂಡಲೇ ಆರೋಪಿಯನ್ನ ಹಿಡಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಆ ಬಳಿಕ ಹೊಯ್ಸಳ ಪೊಲೀಸ್ರಿಗೆ ಕರೆ ಮಾಡಿ ಒಪ್ಪಿಸಿದ್ದಾರೆ.

ಇಂದಿರಾ ನಗರ ಪೊಲೀಸರು ಆರೋಪಿ ಪ್ರಭುರಾಜ್ ಅಲಿಯಾಸ್​ ರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಪ್ರಭು ರಾಜ್​ ಅಲಿಯಾಸ್​ ರಾಜ್​ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಕಳೆದ ತಿಂಗಳು ಅಕ್ಟೋಬರ್​ 31 ರ ಮಧ್ಯಾಹ್ನ ಆರೋಪಿ ಕಳ್ಳತನಕ್ಕೆ ಯತ್ನಿಸಿದ್ದ. ಇಂದಿರಾನಗರದ 100 ಫೀಟ್ ರೋಡ್​ನ ಅಂಗಡಿ ಬಳಿ ನಿಂತಿದ್ದ ಯುವತಿಗೆ ಚಾಕು ತೋರಿಸಿ ಕುತ್ತಿಗೆಯಲ್ಲಿರೋ ಚಿನ್ನದ ಸರ ಕೊಡುವಂತೆ ಬೆದರಿಕೆ ಹಾಕಿದ್ದ. ಆಗ ಸ್ಥಳೀಯರ ಕೆಂಗಣ್ಣಿಗೆ ಬಿದ್ದ ಖದೀಮನನ್ನು ಹಿಡಿದುಕೊಳ್ಳಲು ಯತ್ನಿಸಿದ್ದರು.

ಅಕ್ಟೋಬರ್​ 31 ರ ಬೆಳಗ್ಗೆ 11.45 ರ ಸುಮಾರಿಗೆ ಪ್ರೀಮಿಯಂ ಶೂ & ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಎಂಬ ಯುವತಿ ಬಳಿ ಕಳ್ಳತನಕ್ಕೆ ಯತ್ನಿಸಿದ್ದ. ಅಂಗಡಿ ಒಳಕ್ಕೆ ನುಗ್ಗಿ ನನ್ನನ್ನು ಕೊಲೆ ಮಾಡಲು ಬರುತ್ತಿದ್ದಾರೆಂದು ಡ್ರಾಮ ಮಾಡಿದ್ದ. ಆ ಬಳಿಕ ಮಹಿಳೆಯ ಎರಡೂ ಕೈಗಳಿಗೆ ಫೆವಿಕ್ವಿಕ್ ಹಾಕಿ ಟೇಬಲ್​ಗೆ ಕೈಗಳನ್ನು ಅಂಟಿಸಿದ್ದ. ಆ ನಂತರ ಯುವತಿಯ ಕುತ್ತಿಗೆಯಲ್ಲಿದ್ದ 4.5 ಲಕ್ಷ ಮೌಲ್ಯದ 35 ಗ್ರಾಂ ಮಾಂಗಲ್ಯ ಸರ ಕಿತ್ಕೊಂಡಿದ್ದನು. ಅಷ್ಟರಲ್ಲಿ ಯುವತಿ ಕಿರುಚಾಡಿದ್ರಿಂದ ಅಕ್ಕಪಕ್ಕದ ಜನರು ಅಂಗಡಿ ಬಳಿಗೆ ಬಂದಿದ್ದರು. ಕೂಡಲೇ ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ನನ್ನನ್ನು ಹೋಗಲು ಬಿಡಿ, ಇಲ್ಲವೇ ಕೊಂದು ಬಿಡ್ತೇನೆ ಎಂದು ಬೆದರಿಸಿದ್ದನು.

ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಳ್ತಿದ್ದಂತೆ ಯುವತಿ ಚೀರಾಡಿದ್ದು, ಅಕ್ಕಪ್ಪದ ಅಂಗಡಿಯವ್ರು ಸಹಾಯಕ್ಕೆ ಬಂದಾಗ ಕತ್ತಿಗೆಗೆ ಚಾಕು ಹಿಡಿದು, ಸಿನಿಮೀಯ ಶೈಲಿಯಲ್ಲಿ ಕುತ್ತಿಗೆಗೆ ಚಾಕು ಹಿಡಿದು ಯಾರಾದ್ರು ಹತ್ತಿರ ಬಂದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನು. ಆ ನಂತರ ಹೆಲ್ಮೆಟ್ ಹಾಕಿಕೊಂಡು ಆಟೋ ಬಳಿ ಬಂದು ಪರಾರಿ ಆಗಲು ಪ್ರಯತ್ನ ಮಾಡಿದ್ದನು. ಆಗ ಹಿಡಿದುಕೊಂಡು ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ. ಬಂಧನದ ಬಳಿಕ ವಿಚಾರಣೆ ಮಾಡಿದಾಗ ಮನೆಯಲ್ಲಿ ಬಡತನ ಇದ್ದು, ಹಣಕ್ಕಾಗಿ ಈ ರೀತಿ ಮಾಡಿದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದಾರಾ..? ಅನ್ನೋ ಅನುಮಾನ ದಟ್ಟವಾಗ್ತಿದೆ. ಹಾಡಹಗಲಿನಲ್ಲೇ ಓರ್ವ ಯುವತಿಗೆ ಚಾಕು ತೋರಿಸಿ ಚಿನ್ನದ ಸರಕ್ಕಾಗಿ ಬೇಡಿಕೆ ಇಡುತ್ತಾನೆ ಎಂದರೆ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಅನ್ನೋದನ್ನು ಊಹೆ ಮಾಡಬಹುದಾಗಿದೆ. ಅದರಲ್ಲೂ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿ. ಬೆಂಗಳೂರಿನ ಪ್ರಮುಖ ಏರಿಯಾದಲ್ಲೇ ಪೊಲೀಸರ ವೈಫಲ್ಯ ಎದ್ದು ಕಾಣ್ತಿದೆ. ಇನ್ನುಳಿದಂತೆ ಪೊಲೀಸರು ಬೀಟ್​ ಕೆಲಸ ಸರಿಯಾಗಿ ಮಾಡ್ತಿಲ್ಲ ಅನ್ನೋ ಆರೋಪವೂ ಇದ್ದು, ಪ್ರತಿ ಏರಿಯಾದಲ್ಲಿ ದಿನಕ್ಕೊಮ್ಮೆ ಪೊಲೀಸರು ಸುತ್ತಾಡಿದಾಗ ಕಾನೂನು ಸುವ್ಯವಸ್ಥೆ ಹಿಡಿತಕ್ಕೆ ಬರಲಿದೆ. ಅದನ್ನು ಬಿಟ್ಟು ರಾಜಕಾರಣಿಗಳಿಗೆ ಭದ್ರತೆ ಕೊಡುತ್ತಾ ಕಾಲಕಳೆದರೆ ಕಾನೂನು ಸುವ್ಯವಸ್ಥೆ ಹದಗೆಡುವುದರಲ್ಲಿ ಸಂಶಯವಿಲ್ಲ.

Related posts

ನಟ ದರ್ಶನ್​ಗೆ ಅನುಕೂಲ ಆಗುವಂತೆ ಸಾಕ್ಷಿ ಹೇಳಿದ್ರಾ ರೇಣುಕಾಸ್ವಾಮಿ ತಾಯಿ..!?

Publicspot

BigBoss Ranjith Case; ಇರೋಕೆ ಮನೆ ಕೊಟ್ರೆ ನಂದೇ ಅಂದ್ರಂತೆ ನಟ ರಂಜಿತ್​..!!

Publicspot

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

Publicspot

ಮದುವೆಗೆ ಹೆಣ್ಣುಗಳು ಸಿಗದೆ ಬಳಲುತ್ತಿರುವಾಗ ವಂಚಕರ ಮಾಸ್ಟರ್​ ಪ್ಲ್ಯಾನ್​..!

Publicspot

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

Publicspot

Old Women Murder; ಕಜ್ಜಾಯ ಕೊಡ್ತೀನಿ ಬಾರಜ್ಜಿ ಎಂದವಳು ಕೊಂದು ಮೂಟೆ ಕಟ್ಟಿಟ್ಟಳು.. ಯಾಕೆ..?

Publicspot