The Public Spot
ಅಪರಾಧ

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

ಬೆಂಗಳೂರಿನಲ್ಲಿ ಪಿಜಿಯಲ್ಲಿ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ. ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿರೋ 30 ವರ್ಷದ ಮಹಿಳೆ ಯಲಹಂಕ ಬಳಿಯ ಪಿಜಿಯ ರೂಮ್​ನಲ್ಲಿ ವಾಸವಾಗಿದ್ದಾರೆ. ಈ ಮಹಿಳೆ ದಿನನಿತ್ಯ ಮಧ್ಯಾಹ್ನದ ಊಟಕ್ಕೂ ಪಿಜಿಗೆ ಬಂದು ವಾಪಸ್​ ಕೆಲಸಕ್ಕೆ ಹೋಗುತ್ತಾರೆ. ಆದರೆ ಆಗಸ್ಟ್​ 11ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಿಜಿಗೆ ಬಂದಿದ್ದ ಆಗಂತುಕನೊಬ್ಬ, ಮಹಿಳೆ ಬಳಿ ಇದ್ದ ಮೊಬೈಲ್ ಫೋನ್​​ಗಳು, ಚಿನ್ನದ ಬಳೆ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಕದ್ದೊಯ್ದಿದ್ದಾನೆ.

ಕಳ್ಳತನ ಮಾಡಲು ಮಧ್ಯಾಹ್ನದ ಸಮಯದಲ್ಲಿ PGಗೆ ಎಂಟ್ರಿ ಕೊಟ್ಟಿದ್ದ ಖದೀಮ, ಚಾಕು ತೋರಿಸಿ ಬೆದರಿಸಿ, ಲೈಂಗಿಕ ಕಿರುಕುಳ ಕೊಟ್ಟು ಆ ನಂತರ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್​ನಲ್ಲಿ ಘಟನೆ ನಡೆದಿದೆ. ಆಗಸ್ಟ್​ 11ನರ ಮಧ್ಯಾಹ್ನ 3ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಿವಾಸ್ ಲೇಡಿಸ್ ಪಿಜಿಯಲ್ಲಿ ಖದೀಮ ಈ ಕೃತ್ಯ ಎಸಗಿದ್ದಾನೆ.

ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಆಗಸ್ಟ್​ 11 ರ ಮಧ್ಯಾಹ್ನ ಊಟಕ್ಕೆ ಅಂತಾ ರೂಮಿಗೆ ಬಂದಿದ್ದ ವೇಳೆ ಪಿಜಿಯ ಮೂರನೇ ಮಹಡಿಯಲ್ಲಿರೋ ತನ್ನ ರೂಮಿಗೆ ಬಂದಿದ್ದರು. ಈ ವೇಳೆ ಚಾಕು ಸಮೇತ ಏಕಾಏಕಿ ಮೂರನೇ ಮಹಡಿಗೆ ಬಂದಿದ್ದ ಖದೀಮ, ಮಹಿಳೆಯ ರೂಮಿನ ಡೋರ್ ಬಡಿದು ಕರೆದಿದ್ದಾನೆ. ಯಾರೋ ಪಿಜಿಯವರು ಇರಬಹುದು ಅಂತಾ ಡೋರ್ ಓಪನ್ ಮಾಡಿದ್ದಾರೆ ದೂರುದಾರ ಮಹಿಳೆ. ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿರುವ ಆರೋಪಿ, ಆಕೆಯ ಅಂಗಾಂಗಗಳನ್ನು ಮುಟ್ಟಿ, ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಪರಾರಿ ಆಗಿದ್ದಾನೆ.

ಆಕೆ ಕಚೇರಿಯಿಂದ ಬಂದು ಬೆಡ್ ಮೇಲಿದ್ದ ಇಟ್ಟಿದ್ದ ಎರಡು ಮೊಬೈಲ್​ಗಳು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಜಿಗೆ ನುಗ್ಗಿ ಕಳ್ಳತನ ಮಾಡಿದ್ದು ಮಾತ್ರವಲ್ಲದೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ. ಇತ್ತೀಚಿಗೆ ಪಿಜಿಗಳು ಕಳ್ಳರ ಹಾಟ್​ ಸ್ಪಾಟ್​ ಎನ್ನುವಂತಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಘಟನೆಗಳೂ ಪದೆ ಪದೇ ವರದಿ ಆಗುತ್ತಿರುವುದು ಪಿಜಿಗಳಲ್ಲಿ ವಾಸ ಮಾಡುವ ( Single women’s ) ಒಂಟಿ ಮಹಿಳೆಯರ ಆತಂಕ ಹೆಚ್ಚಾಗುವಂತೆ ಮಾಡಿದೆ.

Related posts

ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಹುಡುಗಿಗೆ ನಡೀತ ಲವ್ ಜಿಹಾದ್..!​

Publicspot

ದರ್ಶನ್ ಪಾಲಿಗೆ ಕಠಿಣ ಆಗ್ತಿದೆ ಉರುಳು.. ಮಾಫಿ ಸಾಕ್ಷಿ ಬಿಚ್ಚಿಡೋ ಸತ್ಯವೇನು..?

Publicspot

ಕೋಟೆ ನಾಡಿನ ಕಾಂಗ್ರೆಸ್​ ಶಾಸಕ ಪಪ್ಪಿ ಜೈಲಿನಿಂದ ರಿಲೀಸ್​.. 4 ತಿಂಗಳ ಸೆರೆವಾಸಕ್ಕೆ ರಿಲೀಫ್..

Publicspot

ಬೆಂಗಳೂರಿನ ಮಂತ್ರಿ ಮಾಲ್‌ ಪಕ್ಕದಲ್ಲೇ ಪ್ರೇಯಸಿಯ ಕತ್ತು ಸೀಳಿ ಮರ್ಡರ್‌..!

Publicspot

Student Suicide; ಹಾಸ್ಟೆಲ್​ ವಾರ್ಡನ್ ಬೈಯ್ದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳಾ..?

Publicspot

ಧರ್ಮಸ್ಥಳದಲ್ಲಿ ಮತ್ತೊಂದು ಮಗ್ಗುಲಿಗೆ ಹೊರಳಿದ SIT ತನಿಖೆ..! ಮೂಳೆಗಳು ಬಂದಿದ್ದು ಎಲ್ಲಿಂದ..?

Publicspot