The Public Spot
Uncategorized

Online Game And Betting Apps Law: ಭಾರತದಲ್ಲಿ ಆನ್​ಲೈನ್ ಗೇಮ್​..​ ಬೆಟ್ಟಿಂಗ್ ಆ್ಯಪ್​​ ​ ಕಾನೂನು ಜಾರಿ..

ಭಾರತ ನಿರುದ್ಯೋಗಿಗಳ ರಾಷ್ಟ್ರವಾಗಿದೆ ಅನ್ನೋದ್ರಲ್ಲಿ ಯಾವುದೇ ಮುಜುಗರ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಭಾರತದಲ್ಲಿ ಭೂಮಿಯೂ ಇಲ್ಲ, ಗೇಮೆಯೂ (Work) ಇಲ್ಲ ಎನ್ನುವಂತ ಪರಿಸ್ಥಿತಿಗೆ ಈಗಾಗಲೇ ತಲುಪಿ ಆಗಿದೆ. ಕೆಲಸ ಇಲ್ಲದೆ ಅಲೆಯುವ ಯುವಕರು ಹಣ ಸಂಪಾದನೆ ಮಾಡಬೇಕು ಅನ್ನೋ ದುರಾಸೆಗೆ ಬಿದ್ದು, ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಳ್ತಾರೆ. ಕೈಯಲ್ಲಿ ಒಂದು ಮೊಬೈಲ್​ ಸಿಕ್ಕರೆ ಸಾಕು, ಜೂಜು ಆಡಿಯಾದರೂ ಸಂಪಾದನೆ ಮಾಡಬೇಕು ಅನ್ನೋ ಆಸೆ ಅಲ್ಲ ದುರಾಸೆ. ಒಂದೇ ಬಾರಿಗೆ ಕೋಟಿ ಸಿಕ್ಕಿ ಬಿಟ್ಟರೆ ಅನ್ನೋ ಭ್ರಮೆ. ಆ ಭ್ರಮೆಯಲ್ಲೇ ಬದುಕುವ ಜನರ ಹವ್ಯಾಸ ಬೆಟ್ಟಿಂಗ್​ ಹಾಗೂ ಆನ್​ಲೈನ್​ ಜೂಜು. ಪ್ರತಿವರ್ಷ ಈ ರೀತಿಯ ಜೂಜಿನಿಂದ 20 ಸಾವಿರ ಕೋಟಿ ವಂಚಕರ ಪಾಲಾಗುತ್ತಿದೆ ಎನ್ನುವ ಅಂಕಿಅಂಶ ಬೆಚ್ಚಿ ಬೀಳುವಂತೆ ಮಾಡುತ್ತದೆ. ಇದೀಗ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ಹೊಸ ಕಾನೂನು ಜಾರಿ ಮಾಡಿದೆ.

ಆನ್​ಲೈನ್​ ಗೇಮಿಂಗ್​ ಅಥಾರಿಟಿ ಮೂಲಕ ಆನ್​ಲೈನ್​ ಗೇಮ್​ ಹಾಗೂ ಬೆಟ್ಟಿಂಗ್​ ಆ್ಯಪ್​ಗಳ ನಿಯಂತ್ರಣ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಭಾರತದಲ್ಲಿ 45 ಕೋಟಿ ಜನರು ಆನ್​ಲೈನ್​ ಗೇಮ್​ ಹಾಗೂ ಬೆಟ್ಟಿಂಗ್​ ಆ್ಯಪ್​ ಬಳಕೆ ಮಾಡುತ್ತಿದ್ದಾರೆ ಅನ್ನೋ ಅಂಶವನ್ನು ಬಿಚ್ಚಿಟ್ಟಿರುವ ಕೇಂದ್ರ ಸರ್ಕಾರ, 20 ಸಾವಿರ ಕೋಟಿ ರೂಪಾಯಿ ಕಳೆದುಕೊಳ್ತಿದ್ದಾರಂತೆ. ಇದನ್ನು ನಿಯಂತ್ರಣ ಮಾಡಲು ಪ್ರಮೋಷನ್​ & ರೆಗ್ಯಲೇಷನ್​ ಆಫ್​ ಆನ್​ಲೈನ್​ ಗೇಮಿಂಗ್​ ಬಿಲ್​ – 2025 ನ್ನು ಮಂಡನೆ ಮಾಡಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಪಾಸ್​ ಮಾಡಲಾಗಿದೆ. ಈ ಕಾನೂನು ಜಾರಿಗೆ ಪಕ್ಷಾತೀತವಾಗಿ ಎಲ್ಲಾ ಸಂಸದರು ಸರ್ವಾನುಮತದಿಂದ ಬೆಂಬಲ ನೀಡಿದ್ದಾರೆ.

ಈ ಹೊಸ ಕಾನೂನು ಪ್ರಕಾರ ಆನ್​ಲೈನ್​ ಗೇಮ್​ ಆಡಿದವರನ್ನು ಶಿಕ್ಷೆಗೆ ಗುರಿಪಡಿಸುವುದಿಲ್ಲ. ಬದಲಿಗೆ ಹಣ ಹೂಡಿಕೆ ಮಾಡಿ ಗೇಮ್​ ಆಡುವಂತೆ ಪ್ರಚೋದಿಸುವ ಕಾನೂನು ಮೀರಿ ವರ್ತಿಸುವ ಆ್ಯಪ್​ ನಿರ್ಮಾಣ ಮಾಡಿ ಪ್ರಚೋದಿಸುವವರನ್ನು ಶಿಕ್ಷೆಗೆ ಗುರಿ ಪಡಿಸಲಾಗುವುದು. ಅಷ್ಟೇ ಅಲ್ಲದೆ ಈ ತಪ್ಪಿಗೆ ಕಾನೂನು ಪ್ರಕಾರ 3 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡಲಾಗಿದೆ ಎಂದು IT ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿದ್ದಾರೆ. ಹಾಗೂ ಆನ್​ಲೈನ್​ ಗೇಮ್​ ಹಾಗೂ ಬೆಟ್ಟಿಂಗ್​ ಆ್ಯಪ್​​ಗಳ ಪ್ರಮೋಷನ್​ ಮಾಡುವುದು, ಜರನ್ನು ಪ್ರಚೋದಿಸಿ ಆನ್​ಲೈನ್​ ಗೇಮ್​ ಆಡುವಂತೆ ಮಾಡುವ ಜನರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂಪಾಯಿ ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಲು ಈ ಕಾನೂನು ಅವಕಾಶ ಮಾಡಿಕೊಡುತ್ತದೆ.

ಈ ನೂತನ ಕಾನೂನು ಪ್ರಕಾರ ಇ ಸ್ಪೋರ್ಟ್ಸ್​ಗೆ ಮಾನ್ಯತೆ ಕೊಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಸೋಷಿಯಲ್​ ಆನ್​ಲೈನ್​ ಗೇಮಿಂಗ್​​ಗೂ ಅವಕಾಶ ಕೊಡಲಾಗುತ್ತದೆ ಎನ್ನಲಾಗಿದೆ. ರಿಜಿಸ್ಟರ್​ ಮಾಡಿಕೊಂಡು ಅಧಿಕೃತವಾಗಿ ಮಾನ್ಯತೆ ಪಡೆದ ಗೇಮ್​ಗಳಿಗೆ ತೆರಿಗೆ ವಿಧಿಸುವುದು ಸರ್ಕಾರ ನಿರ್ಧಾರ ಎನ್ನಲಾಗಿದ್ದು, ರಿಜಿಸ್ಟರ್​ ಆಗದೆ ಅನಧಿಕೃತವಾಗಿ ಗ್ಯಾಂಬ್ಲಿಂಗ್​ನಲ್ಲಿ ತೊಡಗಿರುವ 1500 ಕ್ಕೂ ಹೆಚ್ಚು ಗೇಮಿಂಗ್​ ಆ್ಯಪ್​ಗಳನ್ನು ಬ್ಲಾಕ್​ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಧಿಕೃತವಾದ ಆನ್​ಲೈನ್​ ಗೇಮ್​ನಲ್ಲಿ ಹಣ ಗೆಲುವು ಆದ ಬಳಿಕ 28 ಪರ್ಸೆಂಟ್​ ತೆರಿಗೆ ವಿಧಿಸಲಾಗ್ತಿತ್ತು. ಆದರೆ 2024-25ನೇ ಸಾಲಿನಿಂದ ಶೇಕಡ 30 ರಷ್ಟು ತೆರಿಗೆ ವಿಧಿಸಲು ನಿರ್ಧಾರ ಮಾಡಲಾಗಿದೆ.

Read more: Online Game And Betting Apps Law: ಭಾರತದಲ್ಲಿ ಆನ್​ಲೈನ್ ಗೇಮ್​..​ ಬೆಟ್ಟಿಂಗ್ ಆ್ಯಪ್​​ ​ ಕಾನೂನು ಜಾರಿ.. Read more: Online Game And Betting Apps Law: ಭಾರತದಲ್ಲಿ ಆನ್​ಲೈನ್ ಗೇಮ್​..​ ಬೆಟ್ಟಿಂಗ್ ಆ್ಯಪ್​​ ​ ಕಾನೂನು ಜಾರಿ..

ಪಾರ್ಲಿಮೆಂಟ್​ನ ಎರಡೂ ಹೌಸ್​ನಲ್ಲೂ ಆನ್​ಲೈನ್​ ಗೇಮ್ ಹಾಗೂ ಬೆಟ್ಟಿಂಗ್​ ಆ್ಯಪ್​ ನಿಯಂತ್ರಣಕ್ಕೆ ಸರ್ಕಾರ ಹೊಸ ಕಾನೂನು ಜಾರಿ ಮಾಡಿ ಸದನದ ಒಪ್ಪಿಗೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ X ವೇದಿಕೆಯಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದು, ಇಂಡಿಯಾವನ್ನು ಇನೋವೇಟಿವ್​ ಹಾಗೂ ಕ್ರಿಯೇಟಿವಿಟಿ ಮೂಲಕ ಗೇಮಿಂಗ್​ ಹಬ್​ ಮಾಡುವ ಉದ್ದೇಶವಿದೆ. ಇದು ಇ-ಸ್ಪೋಟ್ಸ್​ ಹಾಗೂ ಸೋಷಿಯಲ್​ ಗೇಮ್ಸ್​ನ ಪ್ರೋತ್ಸಾಹ ಮಾಡಲಿದೆ. ಇದೇ ವೇಳೆ ಆನ್​ಲೈನ್​ ಗೇಮ್​ಗಳಿಂದ ಸಮಾಜಕ್ಕೆ ಆಗುವ ಸಮಸ್ಯೆಗಳು ನಿಲ್ಲಲಿವೆ ಎಂದು ಬರೆದುಕೊಂಡಿದ್ದಾರೆ. ಅದೇನೇ ಆಗಲಿ, ಮೊಬೈಲ್​, ಕಂಪ್ಯೂಟರ್​ ಸೇರಿದಂತೆ ಯಾವುದೇ ರೀತಿಯ ಜೂಜುಗಳಿಗೂ ದಾಸರಾಗಬೇಡಿ. ದುಡಿದು ತಿನ್ನೋಣ. ಖುಷಿಗಾಗಿ ಆಡೋಣ. ಹಣ ಕಟ್ಟಿ ಆಡುವುದು ಜೂಜು ಅನ್ನೋದು ನಿಮ್ಮ ತಲೆಯಲ್ಲಿ ಇರಲಿ.

Related posts

ಮಂತ್ರಿಯಾಗಿ ನಾಳೆ ಮೊದಲ ಸದನ.. ಖಾತೆ ಪಡೆದ ಸಚಿವರು ಏನಂದ್ರು..?

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot

Thirupathi; ಮೂರು ನಾಮದ ಒಡೆಯನಿಗೇ ನಾಮ ಹಾಕಿದ ಅತಿಶಯ ಮನುಷ್ಯ..!

Publicspot

ಸತ್ತ ಗಂಡನ ಜೊತೆಗೆ 10 ದಿನಗಳನ್ನು ಕಳೆದಳು ಪತ್ನಿ..!

Publicspot

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

Publicspot