The Public Spot
ಅಪರಾಧ

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

ಮಂಡ್ಯ : ಅಪ್ರಾಪ್ತ ಬಾಲಕಿಯನ್ನು ಪೀತಿಸಿದ್ದಕ್ಕೆ ಯುವಕ ಹೆಣವಾದ್ನಾ ಅನ್ನೋ ಮಾತು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಕೇಳಿ ಬರುತ್ತಿದೆ. ರಾಮಂದೂರು ಗ್ರಾಮದ ಕೆರೆ ಬಳಿ 21 ವರ್ಷದದ ಯುವ ಮಂಜು ಎಂಬಾತನ ಶವ ಸಿಕ್ಕಿದ್ದು, ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಯುವಕ ಮಂಜುನನ್ನೂ ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದಾರೆ ಎನ್ನಲಾಗ್ತಿದೆ. ಮೃತ ಯುವಕನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತಪಟ್ಟಿರುವ ಮಂಜು ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಬಾಲಕಿ ಕುಟುಂಬಸ್ಥರೇ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಎರಡು ವರ್ಷದಿಂದ ಸಂಬಂಧಿಯೂ ಆಗಿರುವ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದ ಮೃತ ಮಂಜು. ಆಕೆಯನ್ನು 18 ವರ್ಷ ಪೂರ್ಣಗೊಂಡ ಬಳಿಕ ಮದುವೆ ಆಗಲು ನಿರ್ಧಾರ ಮಾಡಿಕೊಂಡಿದ್ದ. ಆ ಯುವತಿಯೂ ಮಂಜುನನ್ನೇ ಮದುವೆ ಆಗುವುದಾಗಿ ಬಿಗಿಪಟ್ಟು ಹಿಡಿದು, ಮಂಜು ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದಳು. ಅದೇ ಸಿಟ್ಟಿನಿಂದ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

ನಿನ್ನೆ ರಾಮಂದೂರಿನ ಕೆರೆಯಲ್ಲಿ ಮೀನು ಹಿಡಿಯಲು ಬಂದಿದ್ದ ಯುವಕ ಮಂಜು ಮೃತದೇಹ ಕೆರೆ ಪಕ್ಕದ ಹಳ್ಳದಲ್ಲಿ ಪತ್ತೆ ಆಗಿದೆ. ಆಟೋ ಪಲ್ಟಿಯಾಗಿ ಮೃತಪಟ್ಟಂತೆ ಸಿಕ್ಕಿದೆ ಯುವಕನ ಮೃತದೇಹ. ಆದರೆ ಈ ಸಾವಿನ ಬಗ್ಗೆ ಪೊಲೀಸರಲ್ಲೂ ಸಂಶಯ ವ್ಯಕ್ತವಾಗಿದ್ದು. ಕೊಲೆ ಮಾಡಿ ಆಟೋವನ್ನ ಹಳ್ಳಕ್ಕೆ ತಳ್ಳಿರುವ ಅನುಮಾನ ಮೂಡಿದೆ..

ಮೀನು ಹಿಡಿದು ಮನೆಗೆ ಹೊರಡುವಾಗ ಕುಟುಂಬಸ್ಥರು ಮುಂದೆ ಹೋಗಿದ್ದನ್ನು ನೋಡಿಕೊಂಡು ತಲೆಗೆ ಬಲವಾದ ಏಟು ಕೊಟ್ಟು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಅಪಘಾತವೋ..? ಕೊಲೆಯೋ..? ಅನ್ನೋದು ಮರಣೋತ್ತರ ಪರೀಕ್ಷಾ ವರದಿ ಬಳಿಕ ಖಚಿತ ಆಗಬೇಕಿದೆ.

Related posts

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

ED RAID: ಕಾಂಗ್ರೆಸ್​ ಶಾಸಕನ ಮನೆ ಮೇಲೆ ED ರೇಡ್​.. ಸಿಕ್ಕಿಂನಲ್ಲಿ ಲಾಕ್​ ಆದ ವೀರೇಂದ್ರ ಪಪ್ಪಿ..

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

ಸಿಂಗರ್‌ ಮೈಲಾರಿಗೆ 14 ದಿನ ನ್ಯಾಯಾಂಗ ಬಂಧನ.. ರೇಪ್‌ ಬಗ್ಗೆ ಆತ ಹೇಳಿದ್ದೇನು..?

Publicspot