The Public Spot
ಅಪರಾಧ

Suprem Court Guiding: ದರ್ಶನ್‌ ಬೇಲ್‌ ರದ್ದು ಮಾಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು..?

ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಜಾಮೀನು ರದ್ದು ಆಗ್ತಿದ್ದ ಹಾಗೆ ಪೊಲೀಸ್ರು ದರ್ಶನ್‌ ಅಂಡ್‌ ಗ್ಯಾಂಗ್‌ನ ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಆದರೆ ದರ್ಶನ್‌ ಜಾಮೀನು ರದ್ದು ಮಾಡಿರುವ ಸುಪ್ರೀಂಕೋರ್ಟ್‌ ಸಾಕಷ್ಟು ವಿಚಾರಗಳನ್ನು ಸ್ಪಷ್ಟವಾಗಿ ಹೇಳಿದೆ. ಈ ರೀತಿಯ ಕ್ರೌರ್ಯ ನಡೆದಿದ್ದರೂ ಜಾಮೀನು ಕೊಟ್ಟಿದ್ದು ಹೇಗೆ ಅನ್ನೋ ಪ್ರಶ್ನೆಯನ್ನೂ ಮಾಡಿದೆ.

ದರ್ಶನ್‌ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು ಅಂತಾ ನೋಡೋದಾದರೆ ಹೈಕೋರ್ಟ್‌ ನೀಡಿರುವ ಎಲ್ಲಾ ಜಾಮೀನು ಆದೇಶ ರದ್ದಾಗಿದೆ. ಆರೋಪಿಗಳು ವಿಚಾರಣಾ ಕೋರ್ಟ್‌ಗೆ ತಕ್ಷಣವೇ ಶರಣಾಗಬೇಕು. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಕರುಣೆ ತೋರಿಸಿ ಕೇಸ್‌ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ . ಜಾಮೀನು ಅನ್ನೋದು ಸ್ವಾತಂತ್ರ್ಯಕ್ಕಾಗಿ ಅಲ್ಲ, ಸದ್ಗುಣಗಳ ಜೋಡಣೆಗೆ ಮಾತ್ರ. ಆದ್ರೆ ಆರೋಪಿಗಳು ಜಾಮೀನು ದುರುಪಯೋಗ ಮಾಡಿದ್ದಾರೆ. ಆರೋಪಿ ಎಷ್ಟೇ ಪ್ರಭಾವಿ ಆಗಿದ್ರೂ ಕಾನೂನು ಎಲ್ಲರಿಗೂ ಒಂದೆ. ಪ್ರಭಾವಿಗಳಾಗಿದ್ರೂ ಕಾನೂನಿಗಿಂತ ಯಾರೂ ಮೇಲಲ್ಲ. ಆರೋಪಿ ಯಾರೇ ಆಗಿರಲಿ, ಎಷ್ಟೇ ಪ್ರಭಾವಿ ಆಗಿರಲಿ, ದೊಡ್ಡವನಿರಲಿ, ಚಿಕ್ಕವನಾಗಿರಲಿ ಕಾನೂನಿಗಿಂತ ಮೇಲಲ್ಲ ಎಂದಿದೆ.

ಸುಪ್ರೀಂಕೋರ್ಟ್‌ ಜಾಮೀನು ರದ್ದು ಮಾಡುವಾಗ ಕೆಲವೊಂದು ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಬೆನ್ನು ನೋವು ಅನ್ನೋ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಹೇಳಿ ಜಾಮೀನು ಪಡೆದು ಚಿಕಿತ್ಸೆ ಮಾಹಿತಿ ಸಲ್ಲಿಸಿರಲಿಲ್ಲ. ಆದರೂ ಹೈಕೋರ್ಟ್‌ ಸತ್ಯ ತಿಳಿಯಲು ವೈದ್ಯಕೀಯ ಮಂಡಳಿ ರಚಿಸಲಿಲ್ಲ. 6 ವಾರವಾದ್ರೂ ಆಪರೇಷನ್‌ ಆಗಿಲ್ಲ ಅನ್ನೋದನ್ನೂ ಪರಿಗಣಿಸದೆ ಹೈಕೋರ್ಟ್‌ ಬೇಲ್‌ ಕೊಟ್ಟಿದ್ದು ಆಕ್ಷೇಪಾರ್ಹ ಆಗಿದೆ. 11-12-/24 ರಂದು ಶಸ್ತ್ರಚಿಕಿತ್ಸೆ ಅಂತಾ ಹೇಳಲಾಗಿತ್ತು. ಆದರೆ ಬಿಪಿ ಇದೆ ಅಂತ ಆಪರೇಷನ್‌ ಮುಂದೂಡಲಾಯ್ತು. ನಿರಂತರ ವಿಳಂಬ, ಸ್ಪಷ್ಟತೆ ಇಲ್ಲದ ಸಮರ್ಥನೆಯಿಂದ ಕೋರ್ಟ್‌ ದಾರಿ ತಪ್ಪಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆನ್ನು ನೋವು ಅಂತಾ ಜಾಮೀನು ಪಡೆದ ವ್ಯಕ್ತಿ ಆ ನಂತರ ಆಪರೇಷನ್‌ ಕೂಡ ಮಾಡಿಸಿಕೊಳ್ಳದೆ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯವಂತನಾಗಿಯೇ ಕಾಣಿಸಿಕೊಂಡಿದ್ದಾರೆ. ಹೈಕೋರ್ಟ್‌ ಜಾಮೀನು ನೀಡಿ ಆದೇಶ ಮಾಡಿದ್ದು, ನ್ಯಾಯಯುತ ಆಡಳಿತಕ್ಕೆ ಬೆದರಿಕೆಯೇ ಆಗಿದೆ. ಕೊಲೆಯಾದ ವ್ಯಕ್ತಿ ದೇಹದ ಮೇಲೆ 39 ಬಾಹ್ಯ ಗಾಯ, 17 ಮೂಳೆಗಳ ಮುರಿತ ಹಾಗೂ ಆತನ ವೃಷಣಕ್ಕೂ ಪೆಟ್ಟು ಬಿದ್ದಿದೆ. ವಿದ್ಯುತ್‌ ಶಾಕ್‌ ಕೊಟ್ಟಿದ್ದಾರೆ ಅನ್ನೋದು ಮರಣೋತ್ತರ ವರದಿಯಲ್ಲಿ ಉಲ್ಲೇಖ ಆಗಿದೆ. ಹೈಕೋರ್ಟ್‌ನ ಆದೇಶ ನ್ಯಾಯ ಸಮ್ಮತವಲ್ಲ. ಹೈಕೋರ್ಟ್‌ನ ಈ ಆದೇಶ ಬೇರೆ ಆರೋಪಿಗಳಿಗೆ ವರವಾಗಿದೆ. ಬೇರೆ ಆರೋಪಿಗಳ ಖುಲಾಸೆಗೂ ವೇದಿಕೆ ಸಿದ್ಧವಾಗಿಸುತ್ತದೆ. ಇದು ಕಾನೂನಿಗೆ ವಿರುದ್ಧ, ಇದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ. ಜೈಲಿನ ಆಸ್ಪತ್ರೆ ವೈದ್ಯರ ಮೇಲೂ ಅಪನಂಬಿಕೆ ತರಿಸಿದೆ ಎಂದಿದೆ ಸುಪ್ರೀಂಕೋರ್ಟ್‌.

Related posts

SIT ತನಿಖೆ NIAಗೆ ವರ್ಗಾವಣೆ ಆಗುತ್ತಾ..? ಏನಿದು BJP ಆಗ್ರಹ..?

Publicspot

ಬಿಕ್ಲು ಶಿವ ಕೊಲೆ ಕೇಸ್‌.. ಬಿಜೆಪಿ ಶಾಸಕ ಬೈರತಿ ಬಸವರಾಜು ಅರೆಸ್ಟ್‌

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot

ನಾಳೆ ಮದುವೆ ಆಗಬೇಕಿದ್ದು ಮನೆ ಮಗಳು, ಕುಟುಂಬದ ಜೊತೆಗೆ ಹೆಣವಾದ ಕಥೆ..

Publicspot

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot