The Public Spot
ಅಪರಾಧ

Drashan Jail Shift: ದರ್ಶನ್​ ಜೈಲು ಶಿಫ್ಟ್​ ಮಾಡೋದು ಪಕ್ಕಾನಾ..?

ಸ್ಯಾಂಡಲ್​ ವುಡ್​ ನಟ ದರ್ಶನ್ ಸೇರಿದಂತೆ ಐವರು ಕೊಲೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡುವಂತೆ ಸಲ್ಲಿಸಿರುವ ಅರ್ಜಿಗೆ ಕೋರ್ಟ್​ ಇಂದಿಗೆ ಅರ್ಜಿ ವಿಚಾರಣೆ ನಡೆಸಿದೆ. ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದ್ದಾರೆ. ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಪ್ರತಿವಾದ ಮಂಡಿಸಿದ್ದಾರೆ.

ಎಸ್‌‌ಪಿಪಿ ಪ್ರಸನ್ನ ಕುಮಾರ್ ಆಡಳಿತ ದೃಷ್ಟಿಯಿಂದ ಸ್ಥಳಾಂತರ ಮಾಡಬಹುದು. ಜೈಲಿನ ಮ್ಯಾನ್ಯುಯಲ್‌ನಂತೆಯೇ ಭದ್ರತೆ ದೃಷ್ಟಿಯಿಂದ ಸ್ಥಳಾಂತರ ಮಾಡಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲರ ಭೇಟಿ ಮಾಡಬಹುದು. ಕುಟುಂಬಸ್ಥರು, ವಕೀಲರು, ಸ್ನೇಹಿತರ ಭೇಟಿಗೂ ಅವಕಾಶವಿದೆ ಬಳ್ಳಾರಿ ಜೈಲಿನ ಸ್ಥಿತಿಗತಿ ಬಗ್ಗೆಯೂ ಸುಪ್ರೀಂ ಕೋರ್ಟ್‌ಗೆ ಗೊತ್ತಿದೆ. ಸೆಲೆಬ್ರಿಟಿ ಆದ ಕಾರಣಕ್ಕೆ ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ ಇರುತ್ತದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಚಿಕ್ಕವರೂ ಅಲ್ಲ ಎಂದಿದ್ದಾರೆ.

ದರ್ಶನ್ ಪರ ವಕೀಲ ಸುನಿಲ್‌ ಕುಮಾರ್‌ ಪ್ರತಿವಾದ ಮಂಡಿಸಿ, ದರ್ಶನ್‌ಗೆ ಹಾಸಿಗೆ, ದಿಂಬು ಕೊಡಬೇಕು. ಮೂಲ ಸೌಕರ್ಯಗಳನ್ನೂ ನೀಡುತ್ತಿಲ್ಲ. ಊಟವನ್ನು ಬಿಸಾಡ್ತಾರೆ, ಶೂ ಬಿಚ್ಚಿ ಹೋಗು ಅಂತಾರೆ ಸುನಿಲ್‌ ಕುಮಾರ್‌. ಬ್ಲಾಂಕೆಟ್ ತೊಳೆಯಲು ಬಿಡುತ್ತಿಲ್ಲ, ಗಲೀಜು ಇದೆ, ಅದರ ಮೇಲೇ ಮಲಗು ಅಂತಾರೆ. ಕಾನೂನು ಪ್ರಕಾರವೇ ಎಲ್ಲವನ್ನೂ ಪಡೆಯಬೇಕಾಗಿದೆ ಎಂದಿದ್ದಾರೆ.

ಮತ್ತೋರ್ವ ದರ್ಶನ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಆರೋಪಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳಬಾರದು. ಯಾವ ಜೈಲಿನಲ್ಲಿಡಬೇಕು ಅನ್ನೋದು ಕೋರ್ಟ್‌ಗೆ ಬಿಟ್ಟಿದ್ದು. ವಕೀಲರೊಂದಿಗೆ ಮುಖಾಮುಖಿ ಕೂತು ಚರ್ಚೆ ಆಗಬೇಕಿದೆ. ಕೋರ್ಟ್​ಬಗ್ಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾಗೋದು ಸೂಕ್ತವಲ್ಲ. ಸುಮಾರು 310 ಕಿ.ಮೀ. ದೂರದ ಬಳ್ಳಾರಿಗೆ ಹೋಗಿ ಬರೋದು ಕಷ್ಟ. ಸಿಗರೇಟ್‌ ಫೋಟೋ ವೈರಲ್ ಕಾರಣಕ್ಕೆ ಬಳ್ಳಾರಿಗೆ ಶಿಫ್ಟ್‌ ಮಾಡಲಾಗಿದೆ. ಜೈಲಿನೊಳಗೆ ಸಿಗರೇಟು ಸೇದಲು ಕಾನೂನಿನಲ್ಲೇ ಅವಕಾಶವಿದೆ. ಸಿಗರೇಟು ಸೇದಿದ್ದ ಕಾರಣಕ್ಕೇ ಬಳ್ಳಾರಿಗೆ ಶಿಫ್ಟ್ ಮಾಡಬಾರದು ಎಂದಿದ್ದಾರೆ.

ಸುದೀರ್ಘ ವಾದ ಪ್ರತಿವಾದ ಆಲಿಸಿದ ಜಡ್ಜ್‌‌ ವಿಚಾರಣೆಯನ್ನ ಇವತ್ತು ಸಂಜೆ 4 ಗಂಟೆಗೆ ಮುಂದೂಡಿದ್ದಾರೆ. ಈ ನಡುವೆ ನಟ ದರ್ಶನ್​ ಪತ್ನಿ ರೆಡ್‌‌ ಕಾರ್ಪೆಟ್‌, ರೀಲ್ಸ್‌‌ ಅಂತ ಮಿಂಚ್ತಿದ್ದ ಆರ್‌.ಆರ್. ನಗರ ಗೌಡ್ತಿಗೆ ಮತ್ತೆ ಜೈಲೂಟವೇ ಗತಿಯಾಗಿದೆ.. ಸುಪ್ರೀಂಕೋರ್ಟ್​ ತೀರ್ಪಿನ ಬೆನ್ನಲ್ಲೇ ಜೈಲುಪಾಲಾಗಿದ್ದ ಪವಿತ್ರಾಗೌಡ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು.. ಆದ್ರೆ ವಾದ-ಪ್ರತಿವಾದ ಆಲಿಸಿದ 57ನೇ ಸೆಷನ್ಸ್ ಕೋರ್ಟ್, ಜಾಮೀನು ಅರ್ಜಿ ವಜಾ ಮಾಡಿದೆ.. ನ್ಯಾಯಮೂರ್ತಿ ಐ ಪಿ ನಾಯ್ಕ್ ಅವರಿದ್ದ ಪೀಠದಿಂದ ಆದೇಶ ಪ್ರಕಟಿಸಿದೆ. ಇವತ್ತು ಬಳ್ಳಾರಿ ಭವಿಷ್ಯ ನಿರ್ಧಾರ ಆಗುವ ಸಾಧ್ಯತೆಯಿದೆ.

Related posts

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

Publicspot

ಜಿಮ್ ಟ್ರೈನರ್ ಮಾಡಿದ್ನಾ ಲವ್ ಜಿಹಾದ್..? ಯಾವುದು ಸತ್ಯ..?

Publicspot

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

Publicspot