The Public Spot
ಅಪರಾಧ

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್ ದೂರು ನೀಡಿದ್ದಾರೆ. ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್​ ಅವರನ್ನು ನಾಯಿಗೆ ಹೋಲಿಸಿದ್ದಕ್ಕೆ ದೂರು ಸಲ್ಲಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಾಸಕ ಬಿ.ಪಿ ಹರೀಶ್ ಎಸ್​ಪಿ ಉಮಾ ಪ್ರಶಾಂತ್ ಶಾಮನೂರು ಮನೆಯ ನಾಯಿ ತರ ಆಡ್ತಾರೆ. ನಮ್ಮ ಕಡೆ ಬಂದ್ರೆ ಮುಖ ತಿರುಗಿಸಿಕೊಂಡು ಹೋಗ್ತಾರೆ ಎನ್ನುವ ಮೂಲಕ ನಾಯಿಗೆ ಹೋಲಿಕೆ ಮಾಡಿದ್ದರು. ಶಾಮನೂರು ಮನೆ ಕಾಯುವ ಪೊಮೊರಿಯನ್ ನಾಯಿ ಅಂತಾನೂ ಹೇಳಿದ್ರು. ಇದೆ ವಿಚಾರವಾಗಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಉಮಾ ಪ್ರಶಾಂತ ದೂರು ನೀಡಿದ್ದರು.

BNS ಸೆಕ್ಷನ್​ 132, 351(2), 79 ಸೆಕ್ಷನ್ ಅಡಿ ದೂರು ಸಲ್ಲಿಕೆ ಬಳಿಕ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ನಿವಾಸಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿದ್ದರು. ಇನ್​ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಶಾಸಕ ಬಿಪಿ ಹರೀಶ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ನಗರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಇರುವ ಶಾಸಕ ಬಿಪಿ ಹರೀಶ್ ಮನೆ ಭೇಟಿ ನೀಡಿ ವಿಚಾರಿಸಿದ್ದು, ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಮನೆಯಲ್ಲಿದ್ದ ಶಾಸಕರ ಪತ್ನಿ ಹಾಗೂ ಪುತ್ರನ ಬಳಿ ಮಾಹಿತಿ ಸಂಗ್ರಹಿಸಿದ ಪೊಲೀಸರು, ಶಾಸಕರಿಲ್ಲದ ಕಾರಣಕ್ಕೆ ವಾಪಸ್ಸಾಗಿದ್ದಾರೆ. ಗುರುವಾರ ವಿಚಾರಣೆಗೆ ಹಾಜರಾಗುವಂತೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ತೆರಳಿದ್ದಾರೆ.

ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್ ಶಾಸಕ ಬಿಪಿ ಹರೀಶ್​ ವಿರುದ್ಧ ಎಫ್​ಐಆರ್ ದಾಖಲಿಸಿದ್ರು. ಮಹಿಳಾ ಅಧಿಕಾರಿಗೆ ಅವಮಾನ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ FIR ಆಗಿದೆ. ಇವತ್ತು ಬಿಪಿ ಹರೀಶ್​ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಬಿ.ಪಿ ಹರೀಶ್​ ಅವರನ್ನು ಬಂಧನ ಮಾಡಿದ್ರೆ ಸೋಮವಾರದ ತನಕ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಶುಕ್ರವಾದ ಈದ್ ಮಿಲಾದ್​ ಇರುವ ಕಾರಣಕ್ಕೆ ಸರ್ಕಾರಿ ರಜೆ ಇರಲಿದೆ. ಆ ಬಳಿಕ ಶನಿವಾರ ನಂತರ ಭಾನುವಾರ ಅಂದರೆ ಮುಂದಿನ ಸೋಮವಾರದ ತನಕ ಜಾಮೀನು ಪಡೆಯಬೇಕಾಗುತ್ತದೆ.

ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್​ ಬಗ್ಗೆ ಹೀನಾಯವಾಗಿ ಮಾತನಾಡಿರುವ ಬಿಪಿ ಹರೀಶ್​ ವಿರುದ್ಧ ಚಿತ್ರದುರ್ಗದಲ್ಲಿ ಆಕ್ರೋಶ ಕೇಳಿ ಬಂದಿದೆ. ದಾವಣಗೆರೆ ಎಸ್​ಪಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಶಾಸಕ ಬಿ.ಪಿ. ಹರೀಶ್ ಅವರ ರಾಜಿನಾಮೆಗೆ ಆಗ್ರಹಿಸಿ ಬಿ.ವೈ ವಿಜಯೇಂದ್ರಗೆ ಪತ್ರ ಬರೆದಿದ್ದು, ರಾಜ್ಯ ಮಹಿಳಾ ಹಕ್ಕುಗಳ ಅಧ್ಯಕ್ಷರಿಗೂ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಒಂದು ವೇಳೆ ಶಾಸಕ ಬಿ.ಪಿ ಹರೀಶ್ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.

ಎಸ್​ಪಿ ಶಾಮನೂರು ಕುಟುಂಬಕ್ಕೆ ಪರಮಾಪ್ತರು, ಅವರಿಗಷ್ಟೇ ಪ್ರಾಮುಖ್ಯತೆ ಕೊಡ್ತಾರೆ ಅನ್ನೋ ಹೇಳಿಕೆಯನ್ನು ವಿಭಿನ್ನವಾಗಿ ಹೇಳುವುದಕ್ಕೆ ಮುಂದಾಗಿ ಶಾಸಕ ಬಿ.ಪಿ ಹರೀಶ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸರಿಗೇ ಹಿಯಾಳಿಸಿರುವುದರಿಂದ ಪೊಲೀಸರು ಉದ್ದೇಶವಿಲ್ಲದೆ ಎಫ್​ಐಆರ್ ದಾಖಲು ಮಾಡುವುದಿಲ್ಲ, ಇನ್ನು ಕೋರ್ಟ್​ ರಜೆ ನೋಡಿಕೊಂಡೇ ವಿಚಾರಣೆಗೆ ಬರುವಂತೆ ಸೂಚನೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ದಟ್ಟ ಅನುಮಾನ ಕಾಡುತ್ತಿದೆ. ಪೊಲೀಸರು ಸದ್ಯ ದಾಖಲಿಸಿರುವ ಸೆಕ್ಷನ್​ಗಳು ಜಾಮೀನು ನೀಡಬಹುದಾದ ಪ್ರಕರಣಗಳೇ ಆಗಿದ್ದರೂ ವಿಚಾರಣೆಗೆ ಬಂದಾಗ ನಡೆಯುವ ಅಂಶಗಳನ್ನೂ ಆಧರಿಸಿ ಬಂಧಿಸುವ ಅವಕಾಶ ಇದ್ದೇ ಇರುತ್ತದೆ ಎನ್ನಬಹುದು.

Related posts

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

Darshan Bail Cancel: ದರ್ಶನ್​ ಜಾಮೀನು ರದ್ದು.. ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂಕೋರ್ಟ್​ ಗುದ್ದು..

Publicspot

ಅಪ್ರಾಪ್ತ ವಯಸ್ಸಲ್ಲಿ ಪ್ರೀತಿ.. ಪ್ರೇಮ.. ಇಷ್ಟೆ ಇಷ್ಟೆ.. ಎಚ್ಚರ ತಪ್ಪಿದ್ರೆ ಫಿನಿಷ್..!!

Publicspot

BENGALURU BLAST: ಸ್ವಾತಂತ್ರ್ಯೋತ್ಸವದ ದಿನ ಸ್ಫೋಟ.. ಸಿಲಿಂಡರ್​ ಸ್ಫೋಟವೇ..? ಅನುಮಾನ..

ಯಶವಂತಿ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕಪ್‌ ಡೆತ್‌ ಕೇಸ್‌‌ನಲ್ಲಿ ಪೊಲೀಸರಿಗೆ ಗಲ್ಲು ಶಿಕ್ಷೆ..

Publicspot