The Public Spot
ಅಪರಾಧ

ತರಬೇತಿ ಸರ್ಟಿಫಿಕೇಟ್‌‌ ಪಡೆಯಲು ಹೋದ ವೈದ್ಯೆ ಕೊಂದಿದ್ಯಾರು..?

ಶಿವಮೊಗ್ಗದ ತ್ಯಾವರಕೊಪ್ಪದಲ್ಲಿ ಪಶುವೈದ್ಯೆ ಡಾ ಸಮೀಕ್ಷಾ ರೆಡ್ಡಿ ಸಾವಾಗಿದೆ. ಕೇಜ್‌ನಲ್ಲಿ ನೀರಾನೆ ಉಷ್ಣಾಂಷ ಪರೀಕ್ಷೆಗಾಗಿ ರಾತ್ರಿ ವೇಳೆ ಹೋಗಿದ್ದಾಗ ನಿರಾನೆ ದಾಳಿ ಮಾಡಿದೆ ಎಂದು ಹೇಳಲಾಗ್ತಿದೆ. ಆದರೆ ಈ ವರದಿ ಸಂಪೂರ್ಣ ಸುಳ್ಳು ಎನ್ನುವ ಅನುಮಾನ ದಟ್ಟವಾಗ್ತಿದೆ. ಮೃತ ಸಮೀಕ್ಷಾ ರೆಡ್ಡಿ ಒಂದು ತಿಂಗಳ ಹಿಂದಷ್ಟೇ ಶಿವಮೊಗ್ಗಕ್ಕೆ ತೆರಳಿದ್ದರು. ಕೇವಲ ಅಪ್ರೆಂಟೀಸ್ ಸರ್ಟಿಫಿಕೇಟ್‌ ಪಡೆಯುವುದಕ್ಕಾಗಿ ತೆರಳಿದ್ರು. ಆದ್ರೆ ತ್ಯಾವರೆಕೊಪ್ಪದ ಅರಣ್ಯ ಅಧಿಕಾರಿಗಳು ಹಿಪ್ಪೋಪೊಟಮಸ್‌ಗೆ ಚಿಕಿತ್ಸೆ ನೀಡಲು ಅಪ್ರೆಂಟೀಸ್‌ಗೆ ಬಂದಿದ್ದ ಯುವತಿಯನ್ನು ನಡುರಾತ್ರಿ ನೀರಾನೆ ಕೇಜ್‌ಗೆ ಕಳುಹಿಸಿದ್ದು ಯಾಕೆ..? ಇದು ಸರೀನಾ..? ಅನ್ನೋ ಪ್ರಶ್ನೆಗೆ ಅರಣ್ಯ ಇಲಾಖೆ ಸಚಿವರು ಹಾಗೂ ಅರಣ್ಯ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ಡಾ ಸಮೀಕ್ಷಾ ರೆಡ್ಡಿ ಕುಟುಂಬಸ್ಥರು ಹುಟ್ಟೂರು ಆನೇಕಲ್ ತಾಲೂಕಿನ ಸಕಲವಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಅಧಿಕಾರಿಗಳು ಈಗ ಸುಳ್ಳು ಆರೋಪ ಮಾಡ್ತಿದ್ದಾರೆ. ಯಾಕೆಂದ್ರೆ ಈಗ ಸಮೀಕ್ಷಾ ಇಲ್ಲ. ಹೀಗಾಗಿ ಅಧಿಕಾರಿಗಳು ಬಚಾವ್ ಆಗಲು ಏನು ಬೇಕಾದ್ರು ಹೇಳ್ತಾರೆ. ಕೆಲವು ಮಾಧ್ಯಮಗಳಲ್ಲೂ ಕೂಡ ಪೋಟೋ ಕ್ಲಿಕ್ಕಿಸಲು ಹೋಗಿ ಸಾವು ಅಂತಾ ಬರ್ತಿದೆ. ಆಕೆ ಪಶು ವೈದ್ಯೆ, ಪ್ರತಿ ನಿತ್ಯ ಪ್ರಾಣಿಗಳನ್ನು ನೋಡ್ತಾಳೆ. ಹಿಪ್ಪೋ ಪೊಟಮಸ್‌ಗೆ ಚಿಕಿತ್ಸೆ ಕೊಡಲು ಯಾವ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಹಸುಗಳಿಗೆ ಚಿಕಿತ್ಸೆ ಕೊಡಲು ನಾಲ್ಕೈದು ಜನರು ಬೇಕು. ಆದ್ರೆ ಹಿಪ್ಪೋಪೊಟಮಸ್ ಚಿಕಿತ್ಸೆ ನೀಡಲು ಒಬ್ಬಳನ್ನೇ ಹೇಗೆ ಕಳುಹಿಸಿದ್ರು ಎಂದು ಪ್ರಶ್ನಿಸಿದ್ದಾರೆ.

ರಾತ್ರಿ 10.30ರ ಸಮಯದಲ್ಲಿ ಈ ಘಟನೆ ಆಗಿದೆ ಎನ್ನಲಾಗ್ತಿದೆ. ಸೇಫ್ಟಿಗೆ ಗಾರ್ಡ್‌‌ ಕೂಡ ಇರಲಿಲ್ಲ. ಅಪ್ರೆಂಟೀಸ್ ಹುಡುಗಿಯನ್ನ ಹೇಗೆ ಕಳಿಸ್ತಾರೆ..? ಮೆಂಟರ್ಸ್ ಯಾರೂ ಇರಲಿಲ್ಲ. ಒತ್ತಾಯ ಪೂರ್ವಕವಾಗಿ ಅಧಿಕಾರಿಗಳೇ ಕಳುಹಿಸಿದ್ದಾರೆ. ನಮ್ಮ ಮಗಳ ಜೀವ ಹೋಗಿದೆ. ಇನ್ನಾದರೂ ಕಾಡು ಪ್ರಾಣಿಗಳ ಚಿಕಿತ್ಸೆ ವೇಳೆ ಮುಂಜಾಗ್ರತಾ ಕ್ರಮ ವಹಿಸಿ ಎಂದು ಸಮೀಕ್ಷಾ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಡಾ ಸಮೀಕ್ಷಾ ರೆಡ್ಡಿ ಜೊತೆಗೆ ನಾಲ್ವರು ತೆರಳಿದ್ದರು ಅನ್ನೋ ಮಾಹಿತಿ ಇದೆ. ಆದರೆ ಇಲ್ಲೀವರೆಗೂ ಡಾ ಸಮೀಕ್ಷಾ ಜೊತೆಗಿದ್ದ ವೈದ್ಯಕೀಯ ಸ್ನೇಹಿತೆಯರು ಪತ್ತೆಯಾಗಿಲ್ಲ. ಜೊತೆಗೆ ಡಾ ಸಮೀಕ್ಷಾ ಎಂಟ್ರಿ ಆಗಿದ್ದ ನೀರಾನೆಯ ಕೇಜ್‌ನಲ್ಲಿ ಸಿಸಿಟಿವಿ ಇದೆ. ಆದರೆ ಇಲ್ಲೀವರೆಗೂ ಸಿಸಿಟಿವಿ ಬಿಡುಗಡೆ ಆಗಿಲ್ಲ. ಮಾಧ್ಯಮದವರು ಕೇಳಿದಾಗ ಸಿಸಿಟಿವಿ ದೃಶ್ಯ ಡಿಲೀಟ್‌ ಆಗಿದೆ ಎಂದಿದ್ದಾರೆ. ಈ ಮಾತಿನಲ್ಲಿ ಭಾರೀ ಅನುಮಾನ ಹುಟ್ಟುವುದಕ್ಕೆ ಕಾರಣವಾಗಿದೆ.

ಡಾ ಸಮೀಕ್ಷಾ ರೆಡ್ಡಿ ನೀರಾನೆ ಕೇಜ್‌ಗೆ ಹೋಗಿದ್ದು ನಿಜನಾ..? ನೀರಾನೆ ಆಕೆ ಮೇಲೆ ದಾಳಿ ಮಾಡಿತಾ..? ಅಥವಾ ಅಧಿಕಾರಿಗಳು ಡಾ ಸಮಿಕ್ಷಾ ಸಾವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದ್ದಾರಾ..? ಅನ್ನೋ ಅನುಮಾನ ಮಾಡುವುದಕ್ಕೆ ಶುರುವಾಗಿದೆ. ಡಾ ಸಮೀಕ್ಷಾ ಅಪ್ರೆಂಟೀಸ್‌ ಆಗಿದ್ದರೆ ಒಬ್ಬರೇ ಹೋಗಿ ಚಿಕಿತ್ಸೆ ನೀಡುವುದು ಹೇಗೆ..? ಪ್ರಾಣಿಗಳನ್ನು ಈ ರೀತಿ ನಿರ್ಲಕ್ಷ್ಯ ಮಾಡ್ತಿದ್ದಾರಾ..? ಅರಣ್ಯ ಅಧಿಕಾರಿಗಳು. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮೌನಕ್ಕೆ ಶರಣಾಗಿದ್ದಾರಾ..? ಒಂದು ಸಾವು ಸಂಭವಿಸಿದೆ. ಈ ಸಾವು ಆಗಿದ್ದು ಹೇಗೆ ಅನ್ನೋ ಬಗ್ಗೆ ನೂರಾರು ಅನುಮಾನಗಳು ಮೂಡುತ್ತಿವೆ. ಮೊದಲೇ ಡಾ ಸಮೀಕ್ಷಾ ಕೊಲೆ ನಡೆದು ಸಾವನ್ನ ಉ ಮುಚ್ಚಿ ಹಾಕಲು ನೀರಾನೆ ಕೇಜ್‌ನಲ್ಲಿ ಹಾಕಿದ್ರಾ..? ಸಿಸಿಟಿವಿ ದೃಶ್ಯವನ್ನು ಮಾಧ್ಯಮಗಳಿಗೆ ಅಲ್ಲದಿದ್ರೂ ಪೊಲೀಸರಿಗೆ ಆದರೂ ಕೊಡಬೇಕಲ್ಲವೇ..? ಇನ್ನಾದ್ರೂ ಡಾ ಸಮೀಕ್ಷಾ ರೆಡ್ಡಿ ಸಾವಿನ ರಹಸ್ಯ ಬಯಲಾಗಬೇಕಿದೆ.

Related posts

MASK MEN FRIEND: ಅನಾಮಿಕ ಹೇಳ್ತಿರೋದೆಲ್ಲಾ ಸುಳ್ಳಾ..? ಫ್ರೆಂಡ್‌ ಬಿಚ್ಚಿಟ್ಟ ರಹಸ್ಯ

Publicspot

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

Court Order bring Happy & Sad: ಕೋರ್ಟ್‌ ಆದೇಶದಿಂದ ಸಂತೋಷ ಜೊತೆಗೆ ದುಃಖ

Publicspot

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

Publicspot

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot