The Public Spot
ರಾಜ್ಯ

Lingayath not cast: ಜಾತಿಗಣತಿ ವೇಳೆ ಲಿಂಗಾಯತ ಧರ್ಮ ಎಂದೇ ಬರೆಸಿ.. ಬಸವಣ್ಣನಷ್ಟೇ ಪೂಜಿಸಿ..

ಬೀದರ್: ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನುಳಿದ ಭಾವಚಿತ್ರ ಇಡದಂತೆ ಸಾಣೇಹಳ್ಳಿ ಶ್ರೀಗಳು ಕರೆ ನೀಡಿದ್ದಾರೆ. ಬೀದರ್‌ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಎಲ್ಲಾ ಮೌಢ್ಯಗಳನ್ನು ನಿರಾಕರಿಸಿ ಬಸವತತ್ವದ ಆಧಾರದಲ್ಲಿ ಬದುಕುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಿಮ್ಮೆಲ್ಲರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಹೊರತಾಗಿ‌ ಇನ್ಯಾವ ಭಾವಚಿತ್ರವನ್ನೂ ಇಟ್ಟುಕೊಳ್ಳಬೇಕಾಗಿಲ್ಲ ಎಂದು ಅನುಯಾಯಿಗಳಿಗೆ ಕರೆ ನೀಡಿದ್ದಾರೆ.

ನಿಮ್ಮ ಅಂಗೈ ಮೇಲೆ ಲಿಂಗ ಧರಿಸಿ ಪೂಜೆ ಮಾಡ್ಬೇಕು, ಬೇರೆ ಏನನ್ನೂ ಪೂಜೆ ಮಾಡುವ ಅವಶ್ಯಕತೆ ಇಲ್ಲ ಎಂದಿರುವ ಸಾಣೇಹಳ್ಳಿ ಶ್ರೀಗಳು, ನಮ್ಮ ದೇವರ ಗೂಡಗಳನ್ನ ನೋಡಿದ್ರೆ ಅದೊಂದು ಮ್ಯೂಸಿಯಂ ರೀತಿ ಕಾಣುತ್ತದೆ. ಆ ಮ್ಯೂಸಿಯಂ ತೆಗೆದು ಹಾಕಿ ಬಸವಣ್ಣ ನಮ್ಮ ಧರ್ಮ ಗುರು ಎಂದಷ್ಟೇ ಭಾವಿಸಬೇಕು ಎನ್ನುವ ಮೂಲಕ ಉಳಿದ ದೇವರ ಫೋಟೋಗಳನ್ನು ತೆರವು ಮಾಡಿ. ಬಸವಣ್ಣನನ್ನ ಅಷ್ಟೇ ಪೂಜಿಸಿ ಎಂದು ಕರೆ ಕೊಟ್ಟಿದ್ದಾರೆ.

ಅಂಗೈಯಲ್ಲಿ ಲಿಂಗವನ್ನ ಹಿಡಿದು ಪೂಜೆ ಮಾಡಿದ್ರೆ ಲಿಂಗಾಯತ ಧರ್ಮ ಖಂಡಿತ ಸ್ವತಂತ್ರ ಧರ್ಮವಾಗುತ್ತದೆ. ಲಿಂಗಾಯತರಿಗೆ ಏಕದೇವೋಪಾಸನೆಯ ಪಾಠ ಹೇಳಿದ್ದಾರೆ ಸಾಣೇಹಳ್ಳಿ ಶ್ರೀಗಳು. ಮುಂದಿನ ದಿನಗಳಲ್ಲಿ ನಡೆಯಲಿರುವ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಾ ನಮೂದಿಸಬೇಕು. ಜಾತಿಯ ಕಾಲಂ‌ನಲ್ಲಿ ನಿಮ್ಮ ನಿಮ್ಮ ಉಪಜಾತಿಗಳನ್ನ ನಮೂದಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನಿಸಿದೆ. ರಾಜ್ಯ ಸರ್ಕಾರ ಮಾತ್ರ ಲಿಂಗಾಯತ ಸ್ವತಂತ್ರ ಧರ್ಮ ಅಂತಾ ಕೊಟ್ಟಿದೆ. ಕೇಂದ್ರ ಸರ್ಕಾರವೂ ಕೊಡುವಂತೆ ಈ ಅಭಿಯಾನ ಎಚ್ಚರಿಕೆ ಘಂಟೆಯಾಗಬೇಕು ಎಂದಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಲಿಂಗಾಯತ ಸ್ವತಂತ್ರ ಧರ್ಮ ಅನ್ನೋ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಬಿಜೆಪಿ ಹಾಗೂ ಇನ್ನಿತರರು ಹಿಂದೂ ಧರ್ಮವನ್ನು ಒಡೆಯುವ ಉದ್ದೇಶದಿಂದ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ಲಿಂಗಾಯತರೂ ಕೂಡ ಹಿಂದೂಗಳ ಭಾಗವೇ ಆಗಿದ್ದಾರೆ. ವೀರಶೈವ ಲಿಂಗಾಯತರು ಹಿಂದೂಗಳು ಎಂದು ಸಾರುವ ಮೂಲಕ ಕಾಂಗ್ರೆಸ್​ ನಿರ್ಧಾರಕ್ಕೆ ತಡೆ ಬಿದ್ದಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್​ ಪಕ್ಷ 2018ರ ವಿಧಾನಸಭಾ ಚುನಾವಣೆಯಲ್ಲಿ ನೆಲ ಕಚ್ಚುವುದಕ್ಕೂ ಕಾರಣೀಭೂತ ಆಗಿತ್ತಿ. ಇದೀಗ ಮತ್ತೆ ಅದೇ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ರೀತಿಯ ಕರೆ ಕೊಡುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸಿದ್ದಾರೆ.

Related posts

Lingayath and Veershaiva are not same; ವೀರಶೈವಾ – ಲಿಂಗಾಯತ ಎರಡೂ ಬೇರೆ ಬೇರೆ.. ಮಾತೆ ಗಂಗಾದೇವಿ..

Publicspot

ಹಂಪಿ ಉತ್ಸವಕ್ಕೆ ಸಿಎಂ ಚಾಲನೆ.. ಇವತ್ತು ಬಿಗ್‌ಬಾಸ್‌ ಗಿಲ್ಲಿಯದ್ದೇ ಕಾರುಬಾರು..

Publicspot

ವಕೀಲರಿಗೆ ಸಿಹಿ ಸುದ್ದಿ.. ಬಾರ್​ ಕೌನ್ಸಿಲ್​ನಲ್ಲಿ ಎನ್​ರೋಲ್​ ಆದ ವಕೀಲರಿಗೆ ನಿರ್ಬಂಧವಿಲ್ಲ..!

Publicspot

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot

ಹಿರಿಯ ಕಾರ್ಮಿಕ ಹೋರಾಟಗಾರ ಅನಂತ್‌ ಸುಬ್ಬರಾವ್‌ ಇನ್ನಿಲ್ಲ.. ದೇಹವೂ ದಾನ..

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot