September 25, 2026
The Public Spot
ರಾಜ್ಯ

ವಕೀಲರಿಗೆ ಸಿಹಿ ಸುದ್ದಿ.. ಬಾರ್​ ಕೌನ್ಸಿಲ್​ನಲ್ಲಿ ಎನ್​ರೋಲ್​ ಆದ ವಕೀಲರಿಗೆ ನಿರ್ಬಂಧವಿಲ್ಲ..!

ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಮೂರು ವರ್ಷ ಅಥವಾ ಐದು ವರ್ಷದ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ ವಕೀಲರ ಪರಿಷತ್​ನಲ್ಲಿ ಮೊದಲಿಗೆ ನೋಂದಣಿ ಮಾಡಿಕೊಳ್ತಾರೆ. ವಕೀಲರಾಗಿ 2 ವರ್ಷದ ಅವಧಿಗೆ ರಾಜ್ಯ ಬಾರ್​ ಕೌನ್ಸಿಲ್​ ಪರವಾನಗಿ ನೀಡುತ್ತದೆ. ಈ ಅವಧಿಯಲ್ಲಿ ಕೋರ್ಟ್​ ಕಲಾಪಗಳಲ್ಲಿ ಭಾಗಿಯಾಗಬಹುದು. ಆದರೆ ವಕಾಲತ್​ ನಾಮ ಅಂದ್ರೆ ತನ್ನ ಕಕ್ಷಿದಾರನಿಂದ ಕೇಸ್​ ಪಡೆದು ಸನ್ನದ್ದುಗಳಿಗೆ ಸಹಿ ಹಾಕುವ ಅವಕಾಶ ಇರಲಿಲ್ಲ. ಆದರೆ ಯುವ ವಕೀಲರ ಅರ್ಜಿಯನ್ನು ಮಾನ್ಯ ಮಾಡಿರುವ ಕರ್ನಾಟಕ ಹೈಕೋರ್ಟ್​ ಸಿಹಿ ಸುದ್ದಿ ನೀಡಿದೆ.

ಯುವ ವಕೀಲ ಕಾರ್ತಿಕ್​ ಕುಮಾರ್​ ಎಸ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಮಾನ್ಯ ಮಾಡಿದ ಕರ್ನಾಟಕ ಹೈಕೋರ್ಟ್​ನ ನ್ಯಾಯಮೂರ್ತಿ S.R ಕೃಷ್ಣಕುಮಾರ್ ಅರ್ಜಿದಾರರಾದ ಯುವ ವಕೀಲ ಬಳ್ಳಾರಿಯ ಮರುಳಸಿದ್ದೇಶ ಎಸ್​.ಪಿ, ಬೆಳಗಾವಿಯ ನವೀನ್​ ಕುಮಾರ್​​ ಗೋರಗುಡ್ಡಿ, ಬೆಂಗಳೂರಿನ ಮಂಜುನಾಥ್​ ಮಹೇಶ್​, ಚಿಕ್ಕಬಳ್ಳಾಪುರದ ಬಾಲರಾಜ ಕೆ, ಬೆಂಗಳೂರಿನ ಸಾಗರ್​ ಕೆ, ರಾಯಚೂರಿನ ಶ್ರೀನಿವಾಸ್​ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಸೂಕ್ತ ವಿಲೇವಾರಿಗೆ ನಿರ್ದೇಶನ ನೀಡಲಾಗಿತ್ತು.

ಹೈಕೋರ್ಟ್​ ಸೂಚನೆ ಅನುಸರಿಸಿದ ಬಾರ್​ ಕೌನ್ಸಿಲ್​ ಆಫ್​ ಇಂಡಿಯಾ ​2 ವರ್ಷಗಳ ಕಾಲ ಕೋರ್ಟ್​ಗಳಲ್ಲಿ ವಕಾಲತ್ತು ಸಲ್ಲಿಕೆ ಮಾಡಿ ವಕೀಲಿಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಬಾರ್​ ಕೌನ್ಸಿಲ್​ ಚುನಾವಣೆಗಳಲ್ಲಿ ಮತದಾನದ ಹಕ್ಕು ಹೊಂದಿರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತ್ತು. BCI ಸ್ಪಷ್ಟನೆ ಬಳಿಕ ಕರ್ನಾಟಕ ಬಾರ್​ ಕೌನ್ಸಿಲ್​ ಕೂಡ ಅರ್ಜಿದಾರರಿಗೆ ಪತ್ರ ಬರೆದು ವಿವರಣೆ ನೀಡಿದ್ದು, ಒಮ್ಮೆ ಸ್ಟೇಟ್​ ಬಾರ್​ ಕೌನ್ಸಿಲ್​ನಲ್ಲಿ ಎನ್​ರೋಲ್​ ಆಗಿರುವ ವಕೀಲರು ಪ್ರಾವಿಷನಲ್ ಸರ್ಟಿಫಿಕೇಟ್ ಹೊಂದಿದ್ದರೂ ಕೂಡ ಕೋರ್ಟ್​ ಕಲಾಪಗಳಲ್ಲಿ ಭಾಗಿಯಾಗಬಹುದು, ವಕಾಲತ್​ಗೂ ಸಹಿ ಹಾಕಬಹುದು ಎಂದು BCI ಸ್ಪಷ್ಟನೆಯನ್ನು ಉಲ್ಲೇಖಿಸಿದ್ದಾರೆ.

ಇದೀಗ ರಾಜ್ಯ ವಕೀಲರ ಪರಿಷತ್​​ನಲ್ಲಿ ನೋಂದಣಿ ಆದ ಯುವ ವಕೀಲರು ವಕಾಲತ್​ ಹಾಕಲು 2 ವರ್ಷಗಳ ಕಾಲ ಕಾಯುವಂತಿಲ್ಲ. ವಕೀಲರಾದ ಬಳಿಕ AIBE ಪರೀಕ್ಷೆ ಪಾಸ್​ ಮಾಡಲು 2 ವರ್ಷಗಳ ಕಾಲಾವಧಿ ಇರಲಿದ್ದು, ಅಲ್ಲೀವರೆಗೂ ವಕೀಲ ವೃತ್ತಿ ಮಾಡುತ್ತಿರಬಹುದು. ಆದರೆ ನಿಗದಿತ ಅವಧಿಯಲ್ಲಿ AIBE ಪಾಸ್​ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಆಗಲಿದೆ. 2 ವರ್ಷದ ಅವಧಿಯಲ್ಲಿ ಸುಮಾರು 4 ಬಾರಿ ಪರೀಕ್ಷೆ ಸಿಗಲಿದ್ದು, ಕಾನೂನು ಪದವಿ ಮುಗಿಸಿದ ವಿದ್ಯಾರ್ಥಿಗಳು ವೃತ್ತಿ ಆರಂಭಕ್ಕೆ ಸಾಕಷ್ಟು ಅನುಕೂಲಕಾರಿ.

ಯುವ ವಕೀಲ ಕಾರ್ತಿಕ್​ ಕುಮಾರ್​ ಎಸ್, ಈ ರೀತಿಯ ಅರ್ಜಿ ಸಲ್ಲಿಕೆ ಮಾಡಿ ಯುವ ವಕೀಲರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸಾಕಷ್ಟು ಮಂದಿ ಕಾನೂನು ಪದವಿ ಮುಗಿಸಿದ ಬಳಿಕ AIBE ಪರೀಕ್ಷೆ ಹಾಜರಾದರೂ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಶೇಕಡ 50 ರಿಂದ 60 ರಷ್ಟು ಮಾತ್ರ. ಉಳಿದವರು ಅತ್ತ ಕೋರ್ಟ್​ಗೂ ಹೋಗಲಾರದೆ, ಇತ್ತ ಮನೆಯಲ್ಲೂ ಇರಲಾಗದೆ ತ್ರಿಶಂಕು ಸ್ಥಿತಿ ಅನುಭವಿಸಬೇಕಾಗಿತ್ತು. ಈ ಸ್ಪಷ್ಟನೆ ಬಳಿಕ ಎರಡು ವರ್ಷಗಳ ಕಾಲ ತನ್ನ ಪಾಡಿಗೆ ತಾನು ಕೋರ್ಟ್​ ಕಲಾಪಗಳಲ್ಲಿ ಕೇಸ್​ ನಡೆಸುತ್ತ ಅನುಭವ ಪಡೆಯಲು ಅನುಕೂಲಕಾರಿ ಆಗಿದ್ದು, ಯುವ ವಕೀಲ ಹಾಗೂ ಅರ್ಜಿದಾರರಿಗೆ ಸ್ನೇಹಿತರು, ಹಿತೈಷಿಗಳು ಹಾಗೂ ಕಾನೂನು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ​

Related posts

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ರಾಜ್ಯದಲ್ಲಿ ವರುಣಾರ್ಭಟ.. ಅಲ್ಲಲ್ಲಿ ಸಮಸ್ಯೆ.. ಬರ ನೀಗಿಸುತ್ತಾ ಮಳೆ..?

Publicspot

ರಾಜ್ಯ ಸಂಪುಟಕ್ಕೆ ಯಾರೆಲ್ಲಾ ಸೇರ್ತಾರೆ..? ದಿಲ್ಲಿಯಲ್ಲಿ ಫೈನಲ್‌ ಆಯ್ತಾ ಪಟ್ಟಿ..?

Publicspot

ಬೆಂಗಳೂರಲ್ಲಿ ಮಳೆಗೆ ನಿನ್ನೆ ರಸ್ತೆ ಜಲಾವೃತ.. ಇವತ್ತು ಮಳೆ ಬರುತ್ತಾ..?

Publicspot