ಕರ್ನಾಟಕದ ಬೀದರ್ನಲ್ಲಿ ಎಟಿಎಂ ವಾಹನ ದರೋಡೆ ಮಾಡಿದ ಖದೀಮರನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡುವಲ್ಲಿ ಕೊನೆಗೂ ಯಶಸ್ವಿ ಆಗಿದ್ದಾರೆ. ಒಂದು ವರ್ಷದ ಬಳಿಕವಾದರೂ ATM ದರೋಡೆಕೋರರನ್ನ ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಹಾರ ಜಿಲ್ಲೆಯ ಅಮನ್‌ಕುಮಾರ್ ಸಿಂಗ್ ಹಾಗೂ ಅಲೋಕ್‌ಕುಮಾರ್ ಎಂಬ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ.

ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಧಾಮೋದರ್ ಎಂಬ ಗ್ರಾಮದಲ್ಲಿ ಇಬ್ಬರು ಆರೋಪಿಗಳು 2025ರ ಜನವರಿ 16ರಂದು ಎಟಿಎಂಗೆ ಭರ್ತಿ ಮಾಡಲು ಬಂದಿದ್ದ ಎಟಿಎಂ ಹಣದ ವಾಹನದಲ್ಲಿದ್ದವರ ಮೇಲೆ ಗುಂಡು ಹಾರಿಸಿ ಓರ್ವನ ಹತ್ಯೆ ಬಳಿಕ ಹಣದ ಬಾಕ್ಸ್ ಜೊತೆಗೆ ಪರಾರಿ ಆಗಿದ್ದರು. ದರೋಡೆ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಸೇರಿದಂತೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಆದರೂ ಪೊಲೀಸರು ಆರೋಪಿಗಳನ್ನು ಬಂಧನ ಮಾಡಲು ಸಾಧ್ಯವಾಗಿರಲಿಲ್ಲ. 1 ವರ್ಷ 7 ತಿಂಗಳ ಬಳಿಕ ದರೋಡೆಕೋರರ ಬಂಧನ ಮಾಡಲಾಗಿದೆ

83 ಲಕ್ಷ ರುಪಾಯಿ ಹಣ ದರೋಡೆ ಮಾಡಿದ್ದ ಆರೋಪಿಗಳ ಬಗ್ಗೆ ಬೀದರ್ ಪೊಲೀಸರಿಗೆ ಕಳೆದ ಇಪ್ಪತ್ತು ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಇಪ್ಪತ್ತು ದಿನಗಳಿಂದ ನಿರಂತರವಾಗಿ ಆರೋಪಿಗಳನ್ನ ತಲಾಶ್ ಮಾಡಿದ್ದ ಕರ್ನಾಟಕ ಪೊಲೀಸರು, ಇಂದು ಮಧ್ಯಾಹ್ನ ಇಬ್ಬರನ್ನೂ ಬಂಧಿಸಿ ಬೀದರ್‌ಗೆ ಕರೆ ತರುತ್ತಿದ್ದಾರೆ. ಯಾವುದೇ ರಾಜ್ಯದ ಪೊಲೀಸರ ಸಹಕಾರವಿಲ್ಲದೇ ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ ಅನ್ನೋದು ವಿಶೇಷ. ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದ ತಂಡದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

ದರೋಡೆಕೋರರ ಬಂಧನ ಮಾಡುವ ಟೀಂನಲ್ಲಿ ಒಬ್ಬರು ಎಸ್‌ಪಿ, ಇಬ್ಬರು ಡಿಎಸ್‌ಪಿ, ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐ, ಕ್ರೈಂ ಸಿಬ್ಬಂದಿ 12 ಮಂದಿ ಸೇರಿದಂತೆ 20 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಬೀದರ್ ನಗರದ ಹೃದಯ ಭಾಗದಲ್ಲಿ 2025ರ ಜನವರಿ 16ರಂದು ದರೋಡೆ ನಡೆದಿತ್ತು. ಸಿಎಂಎಸ್ ಏಜೆನ್ಸಿ ಸಿಬ್ಬಂದಿಯನ್ನು ಹತ್ಯೆ ಮಾಡಿ 83 ಲಕ್ಷ ರೂಪಾಯಿ ದರೋಡೆ ಮಾಡಿದ್ದದ್ದರು. ಉಳಿದ ಹಣ ಬಾಕ್ಸ್ನಿಂದ ಕೆಳಕ್ಕೆ ಬಿದ್ದಿತ್ತು. ದರೋಡೆಯಲ್ಲಿ ಗಿರಿ ವೆಂಕಟೇಶ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಕುಮಾರ್ ಗುನ್ನಳ್ಳಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.

ದರೋಡೆಕೋರರ ಬಂಧನ ಮಾಡಿರುವ ಸಂತೋಷದ ವಿಚಾರ. ಕರ್ನಾಟಕ ಪೊಲೀಸ್ರು ತಡವಾಗಿಯಾದ್ರೂ ಆರೋಪಿಗಳನ್ನು ಬಂಧಿಸಿದ್ರು ಅನ್ನೋದು ನೆಮ್ಮದಿಯ ಸಂಗತಿ. ಇದೇ ಕಾರಣಕ್ಕೆ ಘಟನೆ ನಡೆದ ಎಸ್‌ಬಿಐ ಬ್ಯಾಂಕ್ ಮುಂದೆ ಪೊಲೀಸರು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಸಿಸಿಟಿವಿ ಸೇರಿದಂತೆ ಸಾಕಷ್ಟು ಪುರಾವೆಗಳೂ ಸಿಕ್ಕರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಒಂದು ವರ್ಷದ ಏಳು ತಿಂಗಳು ತೆಗೆದುಕೊಂಡಿದ್ದರು, ಅದರಲ್ಲೂ ಆಧುನಿಕ ಯುಗದಲ್ಲಿ ತಾಂತ್ರಿಕ ಸಹಾಯ ತೆಗೆದುಕೊಂಡರೂ ತಡವಾಗಿದ್ದರು ಬೇಸರ ಎನಿಸಬಹುದು.


