September 29, 2026
The Public Spot
ರಾಜ್ಯ

ಶಿಕ್ಷಕರ ನೇಮಕಾತಿ & ಕಡ್ಡಾಯ ನಿಯಮಗಳು.. BE, BSc, BCA ಗೂ ಚಾನ್ಸ್​​

15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನೇಮಕಾತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅಂತಿಮಗೊಳಿಸಿ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-2 (1ರಿಂದ 8ನೇ ತರಗತಿ) ಪ್ರೌಢ ಶಾಲಾ ಸಹ ಶಿಕ್ಷಕ , ದೈಹಿಕ ಶಿಕ್ಷಣ ಶಿಕ್ಷಕ-ಗ್ರೇಡ್-1 (ಪ್ರೌಢಶಾಲೆ) ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯ ಮಾಡಿದ್ದು, ಪರೀಕ್ಷೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಇರಲಿದೆ.

ಈ ಮೊದಲು ಚಾಲ್ತಿಯಲ್ಲಿದ್ದ ವಿವರಣಾತ್ಮಕ ಮಾದರಿ ಪರೀಕ್ಷೆಯನ್ನು ಕೈ ಬಿಡಲಾಗಿದ್ದು, ವಸ್ತುನಿಷ್ಠ ಮಾದರಿಯ ಮೂಲಕ ಪರೀಕ್ಷೆ ನಡೆಯಲಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 21 ವರ್ಷ ಆಗಿದ್ದು, ಸಾಮಾನ್ಯ ಅರ್ಹತ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1, ಅಂಗವೈಕಲ್ಯವುಳ್ಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45 ವರ್ಷಕ್ಕೆ ನಿಗದಿ ಮಾಡಲಾಗಿದೆ. ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷ ನಿಗದಿ ಮಾಡಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಆಗಸ್ಟ್ 18ರಿಂದ ಆರಂಭ ಆಗಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 07 ಕೊನೆಯ ದಿನ ಆಗಲಿದೆ. ಇನ್ನೂ ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದ್ದು, ಅಕ್ಟೋಬರ್ 05 ಮತ್ತು 06ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಹುದ್ದೆಗಳ ಆಯ್ಕೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ, ಟಿಇಟಿ ಹಾಗೂ ಶೈಕ್ಷಣಿಕ ಅಂಕಗಳ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಇಟಿ ಶೇಕಡ 70, ಟಿಇಟಿ ಶೇಕಡ 20, ಪಿಯುಸಿ ಶೇಕಡ 8 ಹಾಗೂ ಡಿ. ಇಡಿ ಶೇಕಡ 2 ಅಂಕ ಪರಿಗಣಿಸಲಾಗುತ್ತದೆ.

ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಸಿಇಟಿ ಶೇಕಡ 70, ಟಿಇಟಿ ಶೇಕಡ 20, ಪದವಿ ಶೇಕಡ 8 ಹಾಗೂ ಬಿ.ಇಡಿ ಶೇಕಡ 2 ರಷ್ಟು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರೌಢಶಾಲಾ ಸಹ ಶಿಕ್ಷಕರಿಗೆ ಸಿಇಟಿ ಶೇಕಡ 85, ಪದವಿ ಶೇಕಡ 13, ಬಿ.ಇಡಿ ಶೇಕಡ 2, ಕಂಪ್ಯೂಟರ್ ಸೈನ್ಸ್ ಶಿಕ್ಷಕರಿಗೆ ಸಿಇಟಿ ಶೇಕಡ 85 ಹಾಗೂ ಪದವಿ ಶೇಕಡ 15, ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಿಇಟಿ ಶೇಕಡ 85, ಪಿಯುಸಿ ಅಥವಾ ಪದವಿ ಶೇಕಡ 13, ಬಿ.ಪಿ.ಇಡಿ ಶೇಕಡ 2 ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗೆ ಬಿ.ಎಸ್ಸಿ ಸಿಎಸ್, ಬಿಸಿಎ ಅಥವಾ ಬಿ.ಇ ಬಿ.ಟೆಕ್ ಪದವಿ ಪಡೆದವರು ಅರ್ಜಿ ಹಾಕಬಹುದು. ಆದರೆ ನೇಮಕಗೊಂಡ ಐದು ವರ್ಷಗಳ ಒಳಗೆ ಬಿ.ಎಡ್ ಮತ್ತು ಟಿಇಟಿ ಪೂರ್ಣಗೊಳಿಸುವುದು ಕಡ್ಡಾಯ ಆಗಿದೆ.

Related posts

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ಮಳೆ ಸಂಭ್ರಮದ ಬದಲು ಕಣ್ಣೀರು ತರಿಸಿದ್ಯಾಕೆ..? ಇನ್ನೆಷ್ಟು ದಿನ ಮಳೆ..?

Publicspot

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

Publicspot

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

Publicspot

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

RSSಗೆ ಅಂಕುಶ ಯತ್ನ.. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ..!

Publicspot