September 26, 2026
The Public Spot
ರಾಜಕೀಯ

ಸಿಎಂ ಡಿಕೆಶಿ ಹೊಗಳಲು ಜೆಡಿಎಸ್​ ಬಗ್ಗೆ ತುಚ್ಛ ಮಾತು..! ನಾನೇ ಪಕ್ಷ ಕಟ್ಟಿದ್ದು..!!

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನೂತನ ಸಚಿವ ಎನ್​.ಚಲುವರಾಯಸ್ವಾಮಿ ಱಲಿ ನಡೆಸಿ ಮಾತನಾಡಿದ್ದು, ನನಗೆ ಸ್ಥಾನ ಸಿಕ್ಕಿದ್ದು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲದ ಜನರು ಕೊಟ್ಟ ಭಿಕ್ಷೆಯಿಂದ ನಾನು ಗೆದ್ದಿದ್ದು ಎಂದಿದ್ದಾರೆ. ಅಂದು ಜೆಡಿಎಸ್ ಪಕ್ಷ ಕಟ್ಟಿದ್ದು ಚಲುವರಾಯಸ್ವಾಮಿ. ಅವತ್ತು ಗೌರವವಾಗಿ ಉಳಿಸಿಕೊಂಡಿದ್ರೆ ಜೆಡಿಎಸ್ ಪಕ್ಷದಿಂದ 50 ರಿಂದ 60 ಜನ ಶಾಸಕರು ಗೆಲ್ತಿದ್ರು ಎಂದಿದ್ದಾರೆ. ಇದೇ ವೇಳೆ ಡಿ.ಕೆ ಶಿವಕುಮಾರ್​ ಮತ್ತೆ ಸಿಎಂ ಆಗೋದನ್ನ ಯಾರು ತಪ್ಪಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಪಾಪ ಗೆಲ್ಲೋದು 10 ರಿಂದ 20 ಸೀಟು. ಅವರ ಮನೆ ಹತ್ರ ಹೋಗಬೇಕು, ಇಲ್ಲವೇ ನಮ್ಮ ಹತ್ರ ಬರಬೇಕು ಎಂದು ಛೇಡಿಸಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ನಿಮ್ಮ ಆಶೀರ್ವಾದದಿಂದ ನಾನು ಮತ್ತೊಮ್ಮೆ ಸಚಿವನಾಗಿದ್ದೇನೆ. ನಾಗಮಂಗಲ ಹಾಗೂ ಕೊಪ್ಪ ಜನರಿಗೆ ಧನ್ಯವಾದಗಳು. ಮಂಡ್ಯದಲ್ಲೂ ಅದ್ದೂರಿಯಾಗಿ ಸ್ವಾಗತ ಕೋರಿದ್ದೀರಿ. ನಿಮ್ಮ ಋಣದಿಂದ ನಾನು ನಾಲ್ಕು ಬಾರಿ ಮಂತ್ರಿ ಆಗಿದ್ದೇನೆ. ನಮ್ಮ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸ್ತೇನೆ. ದೊಡ್ಡ ದೊಡ್ಡ ನಾಯಕರು ಜಿಲ್ಲೆಯನ್ನ ಆಳ್ವಿಕೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ, ನಮ್ಮ ಜಿಲ್ಲೆ. ದೊಡ್ಡ ಜಿಲ್ಲೆ. ಮಂಡ್ಯ ಅಂದ್ರೆ ದೇಶವೇ ಗೌರವಿಸುತ್ತದೆ. ಈ ಜಿಲ್ಲೆಯಿಂದ ನಾಲ್ಕು ಬಾರಿ ಮಂತ್ರಿ ಆಗುವ ಭಾಗ್ಯ ಕೊಟ್ಟಿದ್ದಿರಿ. ನಿಮ್ಮ ಪ್ರೀತಿ ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಇದೆ. ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲ್ಲ ಎಂದಿದ್ದಾರೆ.

ಟೀಕೆ ಟಿಪ್ಪಣಿ ಮಾಡಿದ್ರೆ ಮತಷ್ಟು ರಾಜಕೀಯ ಬಲಿಷ್ಠವಾಗುತ್ತದೆ ಎಂದಿರುವ ನೂತನ ಸಚಿವರು, ನಾನು ಮಾಡಿದ ಕಾಂಪ್ಲೆಕ್ಸ್ ಕಟ್ಟಡ ಓಪನ್ ಮಾಡಿರಲಿಲ್ಲ, ಈಗ ಮತ್ತೆ ನಾನು ಬಂದು ಓಪನ್​ ಮಾಡಿದೆ. ನಾಗಮಂಗಲದಲ್ಲಿ ಒಂದು ರಸ್ತೆ ಮಾಡಕ್ಕಾಗಿರಲಿಲ್ಲ. ಇವತ್ತು ನಾಗಮಂಗಲ ತಾಲ್ಲೂಕಿನ ರಸ್ತೆಗಳು ಅಭಿವೃದ್ಧಿ ಆಗಿವೆ. ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರು ಕೊಟ್ಟ ಭಿಕ್ಷೆಯಿಂದ ನಾನು ಗೆದ್ದಿದ್ದೆ. ಅಂದು 6 ಜನ ಪಕ್ಷ ಬಿಟ್ಟು ಹೋದಾಗ ಕೇವಲ 4 ಜನ ಉಳಿದುಕೊಂಡೆವು. ಆಗ ಜೆಡಿಎಸ್ ಪಕ್ಷ ಕಟ್ಟಿದ್ದು ಚಲುವರಾಯಸ್ವಾಮಿ. ಅವತ್ತು ನಮ್ಮನ್ನು ಗೌರವವಾಗಿ ಉಳಿಸಿಕೊಂಡಿದ್ರೆ ಜೆಡಿಎಸ್​ನಿಂದ 50 ರಿಂದ 60 ಜನ ಗೆಲ್ತಿದ್ರು ಎಂದಿದ್ದಾರೆ.

ನಾನು ಮಂತ್ರಿ ಆಗಿಲ್ಲ ಅಂತ ಟೀಕೆ ಮಾಡಿದ್ರು. ನಮ್ಮ ಕಾರ್ಯಕರ್ತರು ಅವರ ಟೀಕೆಗೆ ಹೆದರಬೇಡಿ. ಬಾ ತಾಕತ್ ಇದ್ರೆ ಅನ್ನಬೇಕು. ಸೋತವನು, ಗೆದ್ದವರು ಲೀಡರ್ ಅಲ್ಲ. ಜನ ಸೇವೆ ಮಾಡೋನು ಲೀಡರ್. 2028ಕ್ಕೆ ವಿಧಾನಸಭಾ ಚುನಾವಣೆ ಬರ್ತಿದೆ. ನಾನು ಮತ್ತೆ ಗೆದ್ದು ವಿಧಾನಸಭೆಗೆ ಹೋದ್ರೆ ಡಿ.ಕೆ ಶಿವಕುಮಾರ್​ ಅವರನ್ನ ಮತ್ತೆ ಸಿಎಂ ಆಗೋದನ್ನ ಯಾರು ತಪ್ಪಿಸಲು ಸಾಧ್ಯವಿಲ್ಲ. ಡಿಕೆಶಿ-ಸಿದ್ದರಾಮಯ್ಯ ಅಣ್ಣತಮ್ಮ ರೀತಿ ಇದ್ದಾರೆ, ಪಕ್ಷ ಕಟ್ಟಿದ್ದಾರೆ. ಡಿ.ಕೆ ಶಿವಕುಮಾರ್​ ಮತ್ತೆ ಸಿಎಂ ಆಗೋದನ್ನ ಯಾರು ತಪ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್​ಗೆ ಎಲ್ಲಾ ಸಮಾಜ ಒಂದೇ. ಬಿಜೆಪಿ-ಜೆಡಿಎಸ್​ಗೆ ಮಾತ್ರ ಬೇರೆ ಬೇರೆ ಅಂದಿದ್ದಾರೆ.

ಕುಮಾರಸ್ವಾಮಿಗೆ ಬಿಜೆಪಿ, ಕಾಂಗ್ರೆಸ್ ಅವಕಾಶ ಕೊಟ್ರು ಯಾಕೆ ಆಗಲಿಲ್ಲ..? ಪಾಪಾ ಅವರು ಗೆಲ್ಲೋದು 10 ಸೀಟ್. ಅವರತ್ರ ಹೋಗಬೇಕು.. ಇಲ್ಲ ನಮ್ಮ ಹತ್ರ ಬರಬೇಕು. ಡಿಕೆಶಿ, ಸಿದ್ದರಾಮಯ್ಯ ಯಾರ ಮನೆ ಹತ್ರ ಹೋಗಬೇಕಿಲ್ಲ. ಬೇರೆಯವರ ಮನೆಗೆ ಹೋಗಿ ಅಧಿಕಾರ ಕೇಳಲ್ಲ. ಜನರ ಮನೆ ಹತ್ರ ಮಾತ್ರ ನಾವು ಹೋಗಿ ಮತ ಕೇಳ್ತೇವೆ ಎಂದಿದ್ದಾರೆ. ಒಟ್ಟಾರೆ ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಟ್ಟಾಗಲೇ ಕುಮಾರಸ್ವಾಮಿಯನ್ನು ಹಣಿಯಲು ಡಿ.ಕೆ ಶಿವಕುಮಾರ್​ ಮಾಡಿರುವ ಯೋಜನೆ ಅನ್ನೋ ಬಗ್ಗೆ ಚರ್ಚೆ ಆಗಿತ್ತು. ಅದರಂತೆ ಚಲುವರಾಯಸ್ವಾಮಿ ಈಗಾಗಲೇ ಕುಮಾರಸ್ವಾಮಿ ಅವರನ್ನು ಟಾರ್ಗೆಟ್​ ಮಾಡಿದ್ದಾರೆ ಎನ್ನಬಹುದು.

Related posts

ಕಾಂಗ್ರೆಸ್‌ ನಾಯಕತ್ವ ಬಿಕ್ಕಟ್ಟು ನಡುವೆ ಸಾವಿರ ದಿನದ ಸಂಭ್ರಮ!

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

INTERNAL CASTE RESERVATION: ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡೆಲೆ ಆದ ಒಳಮೀಸಲಾತಿ..

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಮಣಿಪಾಲ್​ ಆಸ್ಪತ್ರೆಯಲ್ಲಿ ದೇವೇಗೌಡರನ್ನು ಭೇಟಿಯಾದ ಜಮೀರ್.. ಸ್ಪಷ್ಟನೆ..

Publicspot

ಅಪ್ಪನ ಕ್ಷೇತ್ರದಲ್ಲಿ ಮಗನ ಅಬ್ಬರ.. ಕುರುಬರು ಕಾಂಗ್ರೆಸ್‌ಗೆ ಮೀಸಲಲ್ಲ – HDK

Publicspot