The Public Spot
ಟ್ರೆಂಡ್

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

ನಿನ್ನೆ ರಾತ್ರಿ ಜವಹರಲಾಲ್ ನೆಹರು ತಾರಾಲಯದಲ್ಲಿ ಚಂದ್ರಗ್ರಹಣದ ಬಗ್ಗೆ ಉಪನ್ಯಾಸ ನೀಡಲಾಯ್ತು. ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ ಉಪನ್ಯಾಸ ನಡೆಸಿಕೊಟ್ಟರು. ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಟೆಲಿಸ್ಕೋಪ್ ಮೂಲಕ ಚಂದ್ರ ಗ್ರಹಣ ನೋಡಿದ ಜನರು ಖುಷ್‌ ಆದ್ರು.

ಚಂದ್ರಗ್ರಹಣದ ವೇಳೆ ಮೂಢನಂಬಿಕೆ ವಿರೋಧಿಸಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನ ಟೌನ್‌‌ಹಾಲ್ ಮುಂದೆ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. 150ಕ್ಕೂ ಹೆಚ್ಚು ಜನರಿಂದ ಆಹಾರ ಸೇವನೆ ಮಾಡಿದ್ದಾರೆ. ನಮ್ಮ ನಡಿಗೆ ವಿಜ್ಞಾನದೆಡೆಗೆ ಶೀರ್ಷಿಕೆ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸ್ಕೆಟ್, ಹಣ್ಣು ಹಂಪಲು, ನೀರು ಸೇವನೆ ಮಾಡಿದ್ದಾರೆ. ಈ ಮೂಲಕ ಮೂಡನಂಬಿಕೆ ತೊಲಗಲಿ ಎಂದು ಸೇವನೆ ಮಾಡಿದ್ದಾರೆ ಪ್ರಗತಿಪರರು.

ಬೀದರ್‌ನಲ್ಲಿ ಚಂದ್ರಗ್ರಹಣದ ವೇಳೆ ಸೈನಿಕ ಶಾಲೆ ಮಕ್ಕಳು ಮೌಢ್ಯಕ್ಕೆ ಸಡ್ಡು ಹೊಡೆದಿದ್ದಾರೆ. ಬೈನಾಕ್ಯೂಲರ್ ಹಿಡಿದು ಚಂದ್ರಗ್ರಹಣ ಕಣ್ತುಂಬಿಕೊಂಡಿದ್ದಾರೆ. ಬೀದರ್‌ನ ಸೈನಿಕ ಶಾಲೆಯಲ್ಲಿ ಬೈನಾಕ್ಯೂಲರ್ ಹಿಡಿದು ಚಂದ್ರಗ್ರಹಣ ನೋಡಲು ಮುಂದಾದ ಮಕ್ಕಳಿಗೆ ಬಾಳೆಹಣ್ಣು ವಿತರಿಸಿದೆ ಶಾಲಾ ಆಡಳಿತ ಮಂಡಳಿ. ಸೈನಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಚಂದ್ರಗ್ರಹಣ ನೋಡಿ ಮೌಢ್ಯತೆ ಆಚರಿಸಬಾರದು, ನಬೋ ಮಂಡಲದ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಎಂದು ಶಿಕ್ಷಕರು ತಿಳಿಸಿದ್ದಾರೆ.

ಆದರೆ ದೇವಸ್ಥಾನಗಳು ಬಾಗಿಲು ಬಂದ್ ಮಾಡಿಕೊಂಡಿದ್ದವು. ವಿಜ್ಞಾನ ಜನರಿಗೆ ಧೈರ್ಯ ಹೇಳುತ್ತಿದ್ದರೆ, ನಮ್ಮ ಧರ್ಮ ಜನರನ್ನು ಭಯಭೀತರನ್ನಾಗಿಸುವ ಕೆಲಸ ಮಾಡಿತ್ತು. ಆದರೂ ಜನರು ನೆಹರು ತಾರಾಲಯ ಸೇರಿದಂತೆ ಸಾಕಷ್ಟು ಕಡೆ ಚಂದ್ರಗ್ರಹಣ ಕಣ್ತುಂಬಿಕೊಂಡರು. ಆದರೆ ಬೆಂಗಳೂರು ಸೇರಿದಂತೆ ಸಾಕಷ್ಟು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಚಂದ್ರಗ್ರಹಣ ನೋಡುವ ಅವಕಾಶವೇ ಇಲ್ಲದಂತಾಯ್ತು.

Related posts

ಎಲೆಕ್ಟ್ರಿಕ್‌ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?

Publicspot

ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ.. ಏನಿದರ ವಿಶೇಷ..?

Publicspot

CM, DCM ಕೈಯಲ್ಲಿ 33 ಲಕ್ಷದ ವಾಚ್.. ಕದ್ದಿದ್ದೋ..? ಕೊಂಡಿದ್ದೋ..? ಲೆಕ್ಕ ಕೇಳಿದ ಛಲವಾದಿ..

Publicspot

Elephant; ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಆನೆ ಬದುಕಿದ್ಯಾ..? ಸತ್ತೇ ಹೋಯ್ತಾ..?

Publicspot

33 ಲಕ್ಷ ವಾಚ್​.. ಸಿಎಂ , ಡಿಸಿಎ ಕೊಟ್ಟ ಉತ್ತರ ಏನು ಗೊತ್ತಾ..?

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot