The Public Spot
ಅಪರಾಧ

Darshan jail case; ದರ್ಶನ್‌ಗೆ ಜೈಲಿನಲ್ಲಿ ಏನೂ ಸೌಲಭ್ಯ ಕೊಡ್ತಿಲ್ವಾ..? ಕೋರ್ಟ್‌ನಲ್ಲಿ ಏನಾಗುತ್ತೆ..?

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಕನಿಷ್ಟ ಸೌಲಭ್ಯ ಕೊಡ್ತಿಲ್ಲ ಅಂತಾ ಕೋರ್ಟ್‌ಗೆ ಅರ್ಜಿ ಹಾಕಿದ್ರು. ಆ ಬಳಿಕ ಜೈಲಿನ ಮ್ಯಾನ್ಯುಯಲ್‌ ಪ್ರಕಾರ ಓರ್ವ ಕೈದಿಗೆ ಕೊಡಬೆಕಿರುವ ಕನಿಷ್ಟ ಸೌಲಭ್ಯ ನೀಡುವಂತೆ ಕೋರ್ಟ್‌ ಆದೇಶ ಮಾಡಿತ್ತು. ಆದರೂ ಜೈಲಿನಲ್ಲಿ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ ಅಂತಾ ದರ್ಶನ್‌ ಮತ್ತೊಮ್ಮೆ ಕೋರ್ಟ್‌ ಮೊರೆ ಹೋಗಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್‌ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ಕೊಟ್ಟಿತ್ತು. ಇವತ್ತು ಜೈಲು ಅಧಿಕಾರಿಗಳು ಆಕ್ಷೇಪಣೆಯನ್ನೂ ಸಲ್ಲಿಕೆ ಮಾಡಿದ್ದಾರೆ. ಆದರೆ ಜೈಲು ಮ್ಯಾನ್ಯುಯಲ್‌ ಪ್ರಕಾರ ಸೌಲಭ್ಯ ಕೊಡುತ್ತಿದ್ದೇವೆ ಎಂದಿದ್ದಾರೆ.

ದರ್ಶನ್‌ ಪರ ವಕೀಲ ಸುನಿಲ್‌ ಕುಮಾರ್‌‌‌‌ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, ಜೈಲು ಅಥಾರಿಟಿ ಕೋರ್ಟ್‌ ಆದೇಶ ಪಡೆದಿತ್ತು. ಅದ್ರೆ ಕೋರ್ಟ್‌ ಆದೇಶವನ್ನ ಲಘುವಾಗಿ ಪರಿಗಣಿಸಿದ್ದಾರೆ. ಕೋರ್ಟ್ ಆರ್ಡರ್ ಇದ್ರೂ ಜೈಲಿನಲ್ಲಿ ಏನನ್ನೂ ಕೊಡ್ತಿಲ್ಲ. ಟೆಲಿಫೋನ್ ಕೊಟ್ಟಿದ್ದೀವಿ ಅಂತಿದೆ, ಅದು ಬೇಕಾಗಿಲ್ಲ, ಪ್ರತಿ ಕೈದಿ 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕು. ಅದ್ರೆ ದರ್ಶನ್ ಜೈಲಿಗೆ ಹೋಗಿ 32 ದಿ‌ನ ಆಗಿದೆ. ಆದರೂ ಈವರೆಗೆ ಕ್ವಾರಂಟೈನ್‌ ಸೆಲ್‌ನಲ್ಲೇ ಇಡಲಾಗಿದೆ. ಇವರನ್ನ ಯಾವ ಕಾರಣಕ್ಕಾಗಿ ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದೆ..? ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದವರು ಪಕ್ಕದ ಸೆಲ್‌‌ನಲ್ಲಿದ್ದಾರೆ. ಅವರಿಗೆ ಚೆಸ್, ಕೇರಂ ಎಲ್ಲಾ ಕೊಟ್ಟಿದ್ದಾರೆ. ನಮ್ಮ ಆರೋಪಿಗೆ ಏನು ಕೊಡದೆ ಹಿಂಸೆ ಕೊಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಪರ ವಕೀಲ ಸಚಿನ್‌ ಪ್ರತಿವಾದ ಮಂಡಿಸಿ ಜೈಲಿನ ಮ್ಯಾನ್ಯುಯಲ್‌ ಪ್ರಕಾರ ನೀಡಲಾಗಿದೆ. ಕೋರ್ಟ್ ಆದೇಶದಂತೆ ಎಲ್ಲಾ ಸೌಲಭ್ಯ ನೀಡಲಾಗ್ತಿದೆ. ಕಂಬಳಿ, ಬ್ಲಾಂಕೆಟ್‌‌‌, ಲೋಟ ಕೊಡಲಾಗಿದೆ. ಬೆಳಗ್ಗೆ, ಸಂಜೆ 1 ಗಂಟೆ ವಾಕಿಂಗ್‌ಗೆ ಬಿಡಲಾಗ್ತಿದೆ. ಅದನ್ನ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ನೀಡಿಲ್ಲ. ಕ್ವಾರಂಟೈನ್ ಅನ್ನೋದು ಈಗ ಜೈಲಿನಲ್ಲಿ ಇಲ್ಲ ಎಂದಿದ್ದಾರೆ. ದರ್ಶನ್‌ ಪರ ವಕೀಲರು ಪ್ರತಿವಾದ ಮಂಡಿಸಿ, ಕ್ವಾರಂಟೈನ್ ಪಿರೇಡ್ ಆಗ ಇದ್ದದ್ದು ಈಗ ಯಾಕೆ ಆ ಸೆಲ್‌ನಲ್ಲಿ ಇಡಬೇಕು..? ಎಷ್ಟು ದಿನ ಇಟ್ಟಿದ್ದಾರೆ..? ದಾಖಲೆ ಕೊಡಲಿ ಎಂದಿದ್ದಾರೆ. ನಾವು ಸಂಪರ್ಕ ಮಾಡಿದ್ರೆ ಪ್ರತಿಕ್ರಿಯೆ ಕೊಡ್ತಿಲ್ಲ. ವಕೀಲರ ಭೇಟಿಗೆ ಅವಕಾಶ ಕೊಡೋದು ನಿಯಮ. ಆಕ್ಷೇಪಣೆಯಲ್ಲಿ ತಮಗೆ ಯಾವ ರೀತಿ ಬೇಕೋ ಆ ರೀತಿ ಬರೆದುಕೊಂಡು ಬಂದಿದ್ದಾರೆ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಸೌಲಭ್ಯ ಕೊಡ್ತಿಲ್ಲ ಎಂದಿದ್ದಾರೆ. ಆದರೆ ಜೈಲಿನಲ್ಲಿ ಓರ್ವ ಕೈದಿಗೆ ಕೊಡಬೇಕಾದ ಸೌಲಭ್ಯ ಕೊಡ್ತಿದ್ದೇವೆ ಅನ್ನೋದು ಸರ್ಕಾರದ ವಾದ. ಆದರೆ ವಿಐಪಿ ಟ್ರೀಟ್‌ಮೆಂಟ್‌ಗೆ ಈ ಬಾರಿ ಆಸ್ಪದವಿಲ್ಲದೆ ದರ್ಶನ್‌ ಆರೋಪ ಮಾಡ್ತಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿರುವ ಕೋರ್ಟ್ ಸೆಪ್ಟೆಂಬರ್ 19ರಂದು ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆ ನಿರ್ಧಾರ ಮಾಡಲಿದೆ ಎನ್ನಲಾಗಿದೆ. ದರ್ಶನ್​ಗೆ ಕನಿಷ್ಟ ಸೌಲಭ್ಯಗಳನ್ನೂ ನೀಡದೆ ಇರಲು ದರ್ಶನ್‌ ಏನು ಜೈಲು ಅಧಿಕಾರಿಗಳ ಶತ್ರುವೇ..? ದರ್ಶನ್‌ ಶತ್ರುವಲ್ಲ ಅಂದ್ಮೇಲೆ ಹಿಂಸೆ ಯಾಕೆ ಕೊಡ್ತಾರೆ ಅಲ್ವಾ..?

Related posts

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

Publicspot

ಹೊಲಕ್ಕೆ ಹೊದವರನ್ನು ಗುಂಡಿಟ್ಟು ಕೊಂದಿದ್ಯಾಕೆ ಅರಣ್ಯ ಸಿಬ್ಬಂದಿ..?

Publicspot

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

Student Suicide; ಹಾಸ್ಟೆಲ್​ ವಾರ್ಡನ್ ಬೈಯ್ದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳಾ..?

Publicspot

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot