The Public Spot
ಅಪರಾಧ

ಧರ್ಮಸ್ಥಳದಲ್ಲಿ ಮತ್ತೊಂದು ಮಗ್ಗುಲಿಗೆ ಹೊರಳಿದ SIT ತನಿಖೆ..! ಮೂಳೆಗಳು ಬಂದಿದ್ದು ಎಲ್ಲಿಂದ..?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನ ಆದ ಬಳಿಕ ಧರ್ಮಸ್ಥಳದ ವಿರುದ್ಧ ಸಂಚು ಮಾಡಿಬಿಟ್ರಾ ಅನ್ನೋ ಶಂಕೆ ಸಾಕಷ್ಟು ಜನರನ್ನು ಕಾಡಿದ್ದು ಸುಳ್ಳಲ್ಲ. ಆದರೆ SIT ತನಿಖೆ ಮಾತ್ರ ನಡೆಯುತ್ತಲೇ ಇದೆ. ಕಳೆದ ಒಂದು ತಿಂಗಳಿಂದ ಸಾಕಷ್ಟು ನಾಯಕರನ್ನು ವಿಚಾರಣೆ ಮಾಡುತ್ತಿದ್ದ SIT ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ಸಂಗ್ರಹ ಮಾಡಿದ್ದರು.ಆ ಬಳಿಕ ಎಸ್‌ಐಟಿ ಟೀಂ ಮತ್ತೆ ಬಂಗ್ಲೆಗುಡ್ಡದ ಕಡೆಗೆ ತೆರಳಿದ್ದು, ಆಪರೇಷನ್‌ ಅಸ್ಥಿಗೆ ಇಳಿದಿತ್ತು. ಸೌಜನ್ಯ ಮಾವ ವಿಠಲಗೌಡ ಹೇಳಿಕೆ ಆಧರಿಸಿ ಸಕಲ ಸಿದ್ಧತೆಯೊಂದಿಗೆ ಬಂಗ್ಲೆಗುಡ್ಡದ ಬಳಿ SIT ಟೀಂ ಪರಿಶೀಲನೆ ಮಾಡಿತ್ತು. ಚಿನ್ನಯ್ಯ ತಲೆಯನ್ನು ತರುವಾಗ ಜೊತೆಯಲ್ಲಿ ಇದ್ದರು ಅನ್ನೋ ಕಾರಣಕ್ಕೆ ವಿಠಲಗೌಡನನ್ನು SIT ವಿಚಾರಣೆಗೆ ಕರೆದಿತ್ತು. ಆ ಬಳಿಕ ಸ್ಥಳ ಪರಿಶೀಲನೆಗೆ ಅಂತ ಬಂಗ್ಲೆಗುಡ್ಡಕ್ಕೆ ಕರೆದೊಯ್ಯಲಾಗಿತ್ತು. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಬಂಗ್ಲೆಗುಡ್ಡದಲ್ಲಿ ಸಾಕಷ್ಟು ಮೂಳೆಗಳನ್ನು ನೋಡಿದೆ ಎಂದಿದ್ದರು. ಇದೀಗ ಮೂಳೆಗಳು SITಗೆ ಸಿಕ್ಕಿವೆ.

ಧರ್ಮಸ್ಥಳ ಬಂಗ್ಲೆಗುಡ್ಡ ಕಾಡಿನಲ್ಲಿ 5ಕ್ಕೂ ಹೆಚ್ಚು ಮಾನವನ ಮೂಳೆಗಳು, ಬಟ್ಟೆಗಳ ತುಂಡುಗಳೂ ಪತ್ತೆಯಾಗಿವೆ. ಉತ್ಖನನಕ್ಕೆಂದು ಕಾಡಿನೊಳಗೆ ಹೋದ ಅರ್ಧ ಗಂಟೆಯಲ್ಲೇ ಮಾನವ ಅಸ್ಥಿ ಪಂಜರ ಲಭ್ಯವಾಗಿದೆ. ಸಮಾಧಿ ಅಗೆಯದೆ ನೆಲದ ಮೇಲೆಯೇ ಹುಡುಕಾಡಿದಾಗ ಭೂಮಿಯ ಮೇಲ್ಭಾಗದಲ್ಲೇ ಸಿಕ್ಕಿವೆ. ಮೂಳೆಗಳು ಪತ್ತೆಯಾದ ಸ್ಥಳದ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿದೆ ಸೊಕೊ ಟೀಂ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಮಾಡಿ, ಮೂಳೆಗಳನ್ನು ಪ್ಲಾಸ್ಟಿಕ್ ಪೈಪ್‌ಗಳಲ್ಲಿ ಸಂಗ್ರಹಿಸಲಾಗಿದೆ. ಬಂಗ್ಲೆಗುಡ್ಡದ 6 ಎಕರೆ ವಿಸ್ತೀರ್ಣದ ಸಂಪೂರ್ಣ ಕಾಡಿನಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಒಂದು ಕಡೆಯಿಂದ 3 ತಂಡಗಳಾಗಿ ಶೋಧ ಕಾರ್ಯಾಚರಣೆ ಮಾಡಲಾಗ್ತಿದೆ.

SIT ಎಸ್‌ಪಿ ಜಿತೇಂದ್ರ ದಯಾಮಾ ನೇತೃತ್ವದ ಅಧಿಕಾರಿಗಳು, ಎಫ್‌ಎಸ್‌ಎಲ್‌ ಅಧಿಕಾರಿಗಳು, ಸೊಕೊ ಟೀಂ, ಅರಣ್ಯ, ಕಂದಾಯ ಇಲಾಖೆ ಸಿಬ್ಬಂದಿ, ಪಂಚನಾಮೆ ತಂಡ, ಮೆಟಲ್‌ ಡಿಟೆಕ್ಟರ್‌ ತಂಡ ಜೊತೆಗೆ ಎಲ್ಲಾ ಕೆಲಸಗಾರರೂ ಸೇರಿ 50 ಮಂದಿ ಸಿಬ್ಬಂದಿ ಬಂಗ್ಲೆಗುಡ್ಡದ ಒಳಗೆ ನುಗ್ಗಿತ್ತು. ಪ್ಲಾಸ್ಟಿಕ್ ಪೈಪ್, ಉಪ್ಪು, ಪ್ಲಾಸ್ಟಿಕ್ ಬಾಕ್ಸ್, ಸೀಲ್ ಹಾಕೋ ಮೇಣ, ಸೀಲ್ ಮಾಡುವ ಬಟ್ಟೆಗಳನ್ನೂ ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳು ಗುಡ್ಡದಲ್ಲಿ ಸಿಕ್ಕ ಎಲ್ಲಾ ಮೂಳೆಗಳನ್ನು ಸಂರಕ್ಷಿಸಿ, ಸುರಕ್ಷಿತವಾಗಿ ಶಿಫ್ಟ್ ಮಾಡಿದರು. ಬಂಗ್ಲೆಗುಡ್ಡದಲ್ಲಿ ಮೂಳೆಗಳು ಸಿಕ್ಕ ಕೂಡಲೇ ಇದೀಗ ತನಿಖೆಯೂ ಚುರುಕು ಪಡೆದುಕೊಂಡಿದೆ. ಮೂಳೆಗಳು ಯಾರದ್ದು..? ಗಂಡೋ..? ಹೆಣ್ಣೋ..? ಸಾವಿನ ಕಾರಣ ಏನು..? ಅನ್ನೋ ಬಗ್ಗೆ ಹುಡುಕಾಟ ನಡೆದಿದೆ. ಎಲ್ಲಾ ಮೂಳೆಗಳನ್ನು ಎಫ್‌ಎಸ್‌ಎಲ್‌ ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಬಂಗ್ಲೆಗುಡ್ಡಕ್ಕೆ ಇಷ್ಟೊಂದು ಜನರ ಅಸ್ಥಿಪಂಜರ ಬಂದಿದ್ದು ಎಲ್ಲಿಂದ..? ಕಾಡಿನೊಳಗೆ ಭೂಮಿಯ ಮೇಲ್ಭಾಗದಲ್ಲೇ ಮೂಳೆಗಳು ಸಿಗಲು ಕಾರಣವೇನು..? ಮನುಷ್ಯರ ಮೃತದೇಹ ಕಾಡಿನೊಳಗೆ ಯಾರಾದರೂ ಬಿಸಾಕಿದ್ದರೆ..? ಅಥವಾ ಅಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವಾಗಿತ್ತಾ..? ಜನರಿಗೆ ವಾಸನೆ ಬಂದಿರಲಿಲ್ಲವೇ..? ಹೂತು ಹಾಕಲಾಗಿದ್ದ ಮೃತದೇಹದ ಮೂಳೆಗಳು ಮೇಲೆ ಬಂದಿವೆಯೇ..? ಅರಣ್ಯದಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ ದಫನ್‌ ಮಾಡಿದ್ದಾರಾ..? ಅರಣ್ಯದೊಳಗೆ ಶವ ಹೂಳಲು ಅನುಮತಿ ಕೊಟ್ಟಿದ್ದು ಯಾರು..? ಅನ್ನೋ ಪ್ರಶ್ನೆಗಳು ಎಸ್‌ಐಟಿ ಅಧಿಕಾರಿಗಳನ್ನೂ ಕಾಡುತ್ತಿದ್ದು, ಈ ಬಗ್ಗೆಯೂ SIT ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಒಟ್ಟಾರೆ ಧರ್ಮಸ್ಥಳ ಕೇಸ್‌ನಲ್ಲಿ ಮೂಳೆಗಳು ಪತ್ತೆಯಾಗಿರುವುದು ತನಿಖೆಯ ವೇಗಕ್ಕೆ ಕಾರಣ ಆಗಲಿದೆ.

Related posts

ಲಿವ್‌ ಇನ್‌ ರಿಲೇಷನ್‌ಶಿಪ್‌‌‌ನಲ್ಲಿ ಯುವತಿಯನ್ನು ಕೊಂದನಾ ಅಂಕಲ್‌..?

Publicspot

Darshan Court; ಇವತ್ತು ದರ್ಶನ್‌ಗೆ ಸಿಗುತ್ತಾ ಜೈಲು ರಿಲೀಫ್‌.. ಪತ್ನಿ ವಿಜಯಲಕ್ಷ್ಮೀ ಸೈಲೆಂಟ್‌ ಆಗಿದ್ಯಾಕೆ..?

Publicspot

ಆನ್‌ಲೈನ್‌ ಗೇಮ್‌ಗೆ ಇಡೀ ಕುಟುಂಬವೇ ಸರ್ವನಾಶ..! ಪೋಷಕರೇ ಎಚ್ಚರ..

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot