The Public Spot
ಅಪರಾಧ

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಗುಬ್ಬಚ್ಚಿ ಸೀನನ ಹೈಟೆಕ್ ಅಡ್ಡೆ ಆಗಿದೆ ಪರಪ್ಪನ ಅಗ್ರಹಾರ. ಗುಬ್ಬಚ್ಚಿ ಸೀನನ ಕಬೂತರ್ ಪೋಟೋ ಅಸಲಿ ಕಥೆ ಹೇಳುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ಮತ್ತೊಮ್ಮೆ ಬಟಾಬಯಲಾಗಿದೆ. ಹೋಟೆಲ್ ರೀತಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ನೀಡಲಾಗಿದೆ. ಜೈಲಿನಲ್ಲಿ ದುಡ್ಡು ಕೊಟ್ರೆ ಏನ್ ಬೇಕಾದ್ರು ಸಿಗುತ್ತೆ ಅನ್ನೋದಕ್ಕೆ ತಾಜಾ ಉದಾಹರಣೆ ಆಗಿದೆ ಗುಬ್ಬಚ್ಚಿ ಸೀನನ ಹೈಟೆಕ್​ ಜೈಲುವಾಸ.

ಹಣದಾಸೆಗೆ ಕೈದಿಗಳ ಜೊತೆ ಜೈಲಾಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲು ಆಗಿದ್ದಾರೆ. ಜೈಲಿನಲ್ಲಿ ಗುಬ್ಬಚ್ಚಿ ಸೀನ ಮತ್ತು ಆತನ ಸಹಚರರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಪೋಟೋ ಅಪ್ಲೋಡ್ ಮಾಡಿದ್ದಾನೆ ಗುಬ್ಬಚ್ಚಿ ಸೀನನ ಸಹಚರ ಅರವಿಂದ್. ಕೊಲೆ ಆರೋಪಿ ಆಗಿರುವ ಗುಬ್ಬಚ್ಚಿ ಸೀನನ ಸಹಚರ ಅರವಿಂದ್, ಫೋಟೋ ಎಲ್ಲಾ ಅವ್ಯವಹಾರವನ್ನೂ ಬಯಲು ಮಾಡಿದೆ. ವಿಚಾರಣಾಧೀನ ಕೈದಿಗಳ ರಾಜಾತಿಥ್ಯ ನೋಡಿದ್ರೆ ಜೈಲಿನಲ್ಲಿ ನಡೆಯುತ್ತಿರುವ ಅನಾಚಾರಗಳು ಬಯಲಾಗುತ್ತಿವೆ. ವಿಚಾರಣಾಧೀನ ಕೈದಿಗಳಿಗೆ LED TV ಸೌಲಭ್ಯ ಸಿಕ್ಕಿದೆ. ಅಡುಗೆ ಮಾಡಿಕೊಳ್ಳಲು ಸ್ಟೌವ್, ಪಾತ್ರೆ, ಅಡುಗೆ ಪದಾರ್ಥಗಳ ವ್ಯವಸ್ಥೆ ಮಾಡಲಾಗಿದೆ.

ಮೊಟ್ಟೆ ಟ್ರೈಗಳು, ಮಾಂಸ, ಚಿಕನ್ ಏನ್ ಬೇಕಾದ್ರು ಜೈಲಿನಲ್ಲಿ ಸಿಗುತ್ತದೆ ಅನ್ನೋದು ಕೂಡ ಬಯಲಾಗಿದೆ. ಮೊಬೈಲ್, ಚಾರ್ಜರ್, ಪಾರ್ಟಿ ಮಾಡಲು ಸೌಂಡ್ ಬಾಕ್ಸ್ ಏನು ಬೇಕು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ಕೊಟ್ರೆ ಪಬ್​ ಕೂಡ ಜೈಲಿನಲ್ಲೇ ಬಂದು ಬಿಡುತ್ತದೆ ಅನ್ನೋ ಮಟ್ಟಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪಾರಿವಾಳ ಹಿಡಿದು ಬಿಂದಾಸ್ ಪೋಟೋ ಶೂಟ್ ಮಾಡಿದ್ದಾರೆ. ಅದೇ ಪಾರಿವಾಳವೇ ಇವರಿಗೆ ನಾನ್ ವೆಜ್ ಆಹಾರ ಆಗಿದೆ. ಏಸು ಕ್ರಿಸ್ತನ ಮುಂದೆ ನಿಂತು ಗುಬ್ಬಚ್ಚಿ ಸೀನಾ ಅಂಡ್ ಗ್ಯಾಂಗ್ ಗ್ರೂಪ್ ಪೋಟೋ ತೆಗೆಸಿಕೊಂಡಿದೆ. ಇಷ್ಟಾದ್ರೂ ಇನ್ನೂ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದರಲ್ಲಿಯೇ ಬ್ಯುಸಿ ಆಗಿದ್ದಾರೆ ADGP ದಯಾನಂದ್.

ಜೈಲಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಇಲ್ಲೀವರೆಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತುಟಿಬಿಚ್ಚುತ್ತಿಲ್ಲ. ಜೈಲಿನಲ್ಲಿ ಇರುವ ನಟ ದರ್ಶನ್​​ಗೆ ಯಾವುದೇ ಮೂಲಭೂತ ಸೌಕರ್ಯ ಕೊಡುತ್ತಿಲ್ಲ ಎನ್ನುವ ಹೊತ್ತಿನಲ್ಲೇ ಜೈಲಿನ ಕರ್ಮಕಾಂಡ ಹೊರಬಿದ್ದಿದೆ. ಇದೀಗ ರಾಜ್ಯ ಸರ್ಕಾರ ಹಾಗೂ ಕಾರಾಗೃಹ ಇಲಾಖೆಗೂ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಅವ್ಯವಹಾರ ಗೊತ್ತಿದ್ಯಾ..? ಅನ್ನೋ ಗುಮಾನಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರ ಕೊಡಬೇಕಿದೆ. ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಜೈಲುಗಳಲ್ಲಿ ಐಶಾರಾಮಿ ವ್ಯವಸ್ಥೆ ಕಲ್ಪಿಸಲಾಗ್ತಿದೆ ಅನ್ನೋದು ಜನರ ಅನುಮಾನ ಆಗಿದೆ.

Related posts

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಪರ ವಕೀಲರ ಪ್ಲಾನ್ ಏನು..? ​

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot

ಕೋಟೆ ನಾಡಿನ ಕಾಂಗ್ರೆಸ್​ ಶಾಸಕ ಪಪ್ಪಿ ಜೈಲಿನಿಂದ ರಿಲೀಸ್​.. 4 ತಿಂಗಳ ಸೆರೆವಾಸಕ್ಕೆ ರಿಲೀಫ್..

Publicspot

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot

ಒಂದಲ್ಲ.. ಎರಡಲ್ಲ.. ಆಂಟಿ ಮೂರನೇ ಮದುವೆ.. ಬುಲೆಟ್‌ ರೈಡ್‌ಗಾಗಿ ಜೂಟ್‌..

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot