The Public Spot
ರಾಜಕೀಯ

CM Seat Fight; ದೆಹಲಿಗೆ ಬರುವಂತೆ ಸತೀಶ್‌ ಜಾರಕಿಹೊಳಿಗೆ ಬುಲಾವ್.. ನಾಯಕರು ಕಂಗಾಲು..!!

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ನಾಯಕರು ಬುಲಾವ್ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿರುವ ಸತೀಶ್ ಜಾರಕಿಹೊಳಿಗೆ ಶನಿವಾರ ತಡರಾತ್ರಿ ಕರೆ ಮಾಡಿ ದೆಹಲಿಗೆ ಬರುವಂತೆ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ. ಹೈಕಮಾಂಡ್‌ ಬುಲಾವ್ ಹಿನ್ನೆಲೆಯಲ್ಲಿ ಶನಿವಾರ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ತೆರಳಲಿದ್ದಾರೆ. ನವೆಂಬರ್ 25ರೊಳಗೆ ಗೊಂದಲ ಬಗೆಹರಿಸಿ ಎಂದಿದ್ದ ಸತೀಶ್ ಜಾರಕಿಹೊಳಿ, ಕರ್ನಾಟಕ ರಾಜ್ಯ ಕಾಂಗ್ರೆಸ್‌‌ ಹೊಣೆ ಹೊರುವ ಸಿದ್ಧತೆಯಲ್ಲಿದ್ದಾರೆ.

ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಸತೀಶ್‌ ನನ್ನ ಜೊತೆ ಈ ಬಗ್ಗೆ ಮಾತನಾಡಿಲ್ಲ. ದೆಹಲಿಗೆ ಹೋಗುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅವರು ವೈಯಕ್ತಿಕ ಕೆಲಸಕ್ಕೆ ಹೋಗ್ತಿದ್ದಾರೆ. ನವೆಂಬರ್‌ 5, 6 ಮತ್ತು 7ಕ್ಕೆ ನಾನೂ ಕೂಡ ಬಿಹಾರಕ್ಕೆ ಹೋಗ್ತಿದ್ದೇನೆ. ಸೆಂಟ್ರಲ್ ಮಿನಿಸ್ಟರ್ ಸಭೆ ಕರೆದಿದ್ದಾರೆ. 2ನೇ ದಿನ ಕಾವೇರಿ ನದಿ ವಿಚಾರವಾಗಿ ಕೇಸ್ ಇದೆ. ಮೂರನೇ ದಿನ ನನ್ನದೊಂದು ಬುಕ್ ರಿಲೀಸ್ ಕಾರ್ಯಕ್ರಮ ಇದೆ. ದೆಹಲಿಗೆ ಹೋದ್ರೆ ನಾವು ರಾಜಕೀಯಕ್ಕಾಗಿಯೇ ಹೋಗ್ತಿದ್ದೇವೆ ಅಂತ ಯಾಕೆ ಅಂದುಕೊಳ್ಳುತ್ತೀರಿ ಎಂದಿದ್ದಾರೆ. ಅವರು ಹೋಗೋದಾದ್ರೆ ಅವರು ಹೋಗ್ಲಿ ಬಿಡಿ, ಶಾಸಕರು, ಸಚಿವರು ಹೋಗೋದಾದ್ರೆ ಹೋಗ್ಲಿ ಎಂದಿದ್ದಾರೆ.

ನವೆಬರ್ ಕ್ರಾಂತಿ ನಡೆಯುವ ಬಗ್ಗೆ ಸಚಿವ ಜಮೀರ್​ ಅಹ್ಮದ್​ ಖಾನ್​ ಪ್ರತಿಕ್ರಿಯೆ ನೀಡಿದ್ದು, 2028 ರವರೆಗೆ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಡಿ.ಕೆ ಶಿವಕುಮಾರ್‌ಗೂ ಸಿಎಂ ಆಗುವ ಆಸೆ ಇರುತ್ತದೆ. ಕಾಂಗ್ರೆಸ್​ ಪಕ್ಷದ ಅಧಿಕಾರಕ್ಕೆ ಬರಲು ಡಿ.ಕೆ ಶಿವಕುಮಾರ್ ಕಾರಣ. ಮುಂದೆ ಅವರು ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ನನ್ನದು ಎಂದಿದ್ದಾರೆ. ಇದೇ ತಿಂಗಳು ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದು ಬಿಜೆಪಿಯವರ ಅಭಿಪ್ರಾಯ. ಮುಖ್ಯಮಂತ್ರಿಯವರ ಖುರ್ಚಿ ಖಾಲಿ ಇಲ್ಲ. ಕೆಪಿಸಿಸಿ ಅಧ್ಷಕ್ಷರ ಹುದ್ದೆಯೂ ಖಾಲಿ ಇಲ್ಲ ಎಂದಿದ್ದಾರೆ.

ಇನ್ನೂ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿರುವ ಸಚಿವ ಜಮೀರ್ ಅಹ್ಮದ್‌ ಖಾನ್‌​, ಅವರು ಆಗಾಗ ದೆಹಲಿಗೆ ಹೋಗುತ್ತಾರೆ. ಅವರು ಇಲಾಖೆ ಹಾಗು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗುತ್ತಾರೆ. ದಲಿತ ಸಿಎಂ ಕೂಗಿನ ಮಧ್ಯೆ ಸತೀಶ್‌ ಜಾರಕಿಹೊಳಿ ಭೇಟಿ ಎನ್ನುವ ವದಂತಿ ಇದೆ. ಈಗ ಸಿಎಂ ಹುದ್ದೆ ಖಾಲಿ ಇಲ್ಲ. ನಮ್ಮದು ಹೈಕಮಾಂಡ ತೀರ್ಮಾನದ ಪಕ್ಷ ಎಂದಿದ್ದಾರೆ ಜಮೀರ್‌. ಸತೀಶ ಜಾರಕಿಹೊಳಿ ದೆಹಲಿಗೆ ಹೋಗುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರವಾಗಿ ಪ್ರಿಯಾಂಕ್‌ ಖರ್ಗೆ ಮಾತನಾಡಿ, ನಮ್ಮ ನಾಯಕರು ಭೇಟಿ ಕೊಡ್ತಿರಬಹುದು. ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡ್ತಾರೆ. ಅದರಲ್ಲಿ ಏನೂ ಮರ್ಮ ಇಲ್ಲ ಎಂದಿದ್ದಾರೆ. ದೆಹಲಿ ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ನಾನೂ ನಾಡಿದ್ದು ಹೋಗ್ತೇನೆ. ಟೆಕ್ ಸಮ್ಮಿಟ್ ಸಂಬಂಧ ಚರ್ಚೆ ಮಾಡಲು ಹೋಗ್ತೇನೆ. ಆದ್ರೆ ಯಾವಾಗ ಏನಾಗಬೇಕೋ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರ್ತೀವಿ ಅಂತ ಎಲ್ರೂ ಮಾತಾಡಿದ್ದಾರಲ್ಲ ಎಂದಿದ್ದಾರೆ. ಇನ್ನೂ ನೀವು ಡಿಸಿಎಂ ಸ್ಥಾನಕ್ಕೆ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಬಿಟ್ಬಿಡಿ, ನಾನು ಕಲಬುರ್ಗಿ ಉಸ್ತುವಾರಿ ಆಗಿದ್ದೀನಿ, ಸಚಿವ ಆಗಿದ್ದೀನಿ. ಇವರೆಡು ಕೆಲಸ ಮಾಡ್ಕೊಂಡು ಹೋಗ್ತಿದೀನಿ, ಜನ ಈ ಎರಡು ಜವಾಬ್ದಾರಿ ಕೊಟ್ಟಿದ್ದಾರೆ, ಮಾಡ್ಕೊಂಡು ಹೋಗ್ತಿದೀನಿ ಎಂದಿದ್ದಾರೆ.

Related posts

Okkaliga and Lingayath united; ಜಾತಿ ಗಣತಿ ಆರಂಭಕ್ಕೂ ಮುನ್ನವೆ ಬಲಾಢ್ಯರ ವಿರೋಧ.. ಸಣ್ಣ ಬಿರುಕು..

Publicspot

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

ನಾನೊಬ್ಬನೇ ಸಿಎಂ ಆಗ್ಬೇಕು ಅಂತ ದೇವರು ಬರೆದಿದ್ದಾನಾ..? ತಪ್ಪಲ್ವಾ..? ಸಿಎಂ ಪ್ರಶ್ನೆ..

Publicspot

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot

ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್

admin