The Public Spot
ಅಂಕಣ

ಅಕ್ಕನ ಗಂಡನನ್ನೇ ಬುಟ್ಟಿಗೆ ಹಾಕೊಂಡ ತಂಗಿ.. ಅಕ್ಕನ ಕೊಂದಿದ್ಯಾರು..?

ಪ್ರೇಮ ಕಥೆಗಳು ಅಂದಾಗ ಚಿತ್ರ ವಿಚಿತ್ರ ಘಟನೆಗಳು ಇದ್ದೇ ಇರುತ್ತವೆ. ಅಕ್ಕನ ಗಂಡನನ್ನೇ ತಂಗಿ ಪ್ರೀತಿಸಿ ಮದ್ವೆಯಾಗಿರುವ ವಿಲಕ್ಷಣ ವಿಚಾರ ಇದು. ಪ್ರತಿ ಹೆಣ್ಣು ಮಗಳಿಗೆ ಏನನ್ನು ಬೇಕಿದ್ದರೂ ಹಂಚಿಕೊಳ್ತಾಳೆ. ಆದರೆ ತನ್ನ ಗಂಡನನ್ನು ಮಾತ್ರ ಹಂಚಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಆದರೆ ಈಕೆಯ ಪಾಲಿಗೆ ತಂಗಿಯೇ ಸವತಿ ಆಗಿದ್ದಳು.

ಅಕ್ಕನ ಗಂಡನನ್ನೇ ಬುಟ್ಟಿಗೆ ಕೆಡವಿಕೊಂಡ ಈಕೆ ಆತನಿಗೆ ಗಂಡನ ಪಟ್ಟ ಕೊಟ್ಟಿದ್ದಳು. ಯಾವಾಗ ಸ್ವಂತ ತಂಗಿಯೇ ತನ್ನ ಸಂಸಾರಕ್ಕೆ ಹುಳಿ ಹಿಂಡಿದಳೋ, ಅಮಾಯಕ ಹೆಣ್ಣು ಮಗಳು ಒಬ್ಬಂಟಿ ಜೀವನ ನಡೆಸೋದಕ್ಕೆ ಶುರು ಮಾಡಿದ್ದಳು. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ನಿಗೂಢವಾಗಿ ಕಾಣೆಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ.

ಬೆಂಗಳೂರು ನಿವಾಸಿಯಾಗಿದ್ದ ಪ್ರಮೋದಾ, ಸುರೇಶ್‌ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಗಂಡ ಹೆಂಡತಿಯ ದಾಂಪತ್ಯದ ಫಲವಾಗಿ ಒಬ್ಬ ಹೆಣ್ಣು ಮಗು ಹುಟ್ಟಿತ್ತು. ಆದೆರೆ ಅಕ್ಕನ ಗಂಡನ ಮೇಲೆ ತನ್ನ ತಂಗಿಯೇ ಕಣ್ಣಾಕಿ. ಬಾವ ಅನ್ನೋದನ್ನೂ ಮರೆತು ಅಕ್ಕನ ಗಂಡನನ್ನೇ ಬಲೆಗೆ ಕೆಡವಿಕೊಂಡಿದ್ದಳು. ಹೀಗಾಗಿ ಗಂಡನಿಂದ ದೂರವಾದವಳು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ಕೊಂಡು ಜೀವನ ಮಾಡುತ್ತಿದ್ದಳು. ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ವಾಸವಾಗಿದ್ದ ಪ್ರಮೋದಾ, ಈಕೆಯ ತಂಗಿ ಹೊರಮಾವು ಬಳಿಯ ಕಲ್ಕೆರೆಯಲ್ಲಿ ಬಾಡಿಗೆ ಮನೆ ಮಾಡ್ಕೊಂಡಿದ್ರು. ಯಾವಾಗ ತಂಗಿಯೇ ಅಕ್ಕನ ಸಂಸಾರಕ್ಕೆ ಹುಳಿ ಹಿಂಡಿದ ಬಳಿಕ, ಗಂಡ ಹಾಗೂ ತಂಗಿಯ ಸಂಪರ್ಕವನ್ನೇ ಇಟ್ಟುಕೊಂಡಿರಲಿಲ್ಲ.

ಪ್ರಮೋದಾ ಮೊನ್ನೆ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸಂಬಂಧಿಕರು ಎಷ್ಟೇ ಫೋನ್‌ ಮಾಡಿದ್ರೂ ಪೋನ್ ರಿಸೀವ್‌‌ ಮಾಡಿರಲಿಲ್ಲ. ಹೀಗಾಗಿ ಸ್ವಲ್ಪ ಸಮಯ ಕಾದವರು ನೇರವಾಗಿ ಬೊಮ್ಮನಹಳ್ಳಿಯ ಮನೆಗೆ ಬಂದಿದ್ದರು. ಆದರೆ, ಮನೆಯ ಡೋರ್​ ಹೊರಗಡೆಯಿಂದ ಲಾಕ್ ಆಗಿತ್ತು. ಹೀಗಾಗಿ ಮನೆ ಮಾಲೀಕರಿಗೆ ವಿಷ್ಯ ಮುಟ್ಟಿಸ್ತಿದ್ದಂತೆ ಕಿಟಕಿ ತೆಗೆದು ನೋಡಿದ್ದಾರೆ. ಯಾರೂ ಕಾಣದಿದ್ದಾಗ ಬಾಗಿಲು ಒಡೆದು ನೋಡಿದಾಗ ಪ್ರಮೋದಾ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರಮೋದಾಳನ್ನ ಕೊಂದವಱರು..? ಅನ್ನೋದು ಗೊತ್ತಿಲ್ಲ. ಆದರೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದಲೇ ಈ ಹೆಣ್ಣು ಮಗಳನ್ನು ಕೊಂದು ಹಾಕಿದ್ದಾರೆ. ಆ ನಂತರ ಮನೆಯ ಬಾಗಿಲನ್ನು ಲಾಕ್‌ ಮಾಡ್ಕೊಂಡು ಕಾಲ್ಕಿತ್ತಿದ್ದರು. ಪ್ರಕರಣ ದಾಖಲಿಸಿಕೊಂಡ ಬೊಮ್ಮನಹಳ್ಳಿ ಪೊಲೀಸರು ಹಂತಕನಿಗೆ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಗಂಡನಿಂದ ದೂರವಾದ ಪ್ರಮೋದಾ ತಾನಾಯ್ತು, ತನ್ನ ಪಾಡಾಯ್ತು ಅಂತ ತನ್ನ ಮಗಳ ಜೊತೆಗೆ ಇದ್ದರೂ ಹೊಡೆದು ಕೊಂದಿದ್ದಾರೆ. ಅಕ್ಕನ ಗಂಡನನ್ನು ಬುಟ್ಟಿಗೆ ಹಾಕೊಂಡು ಅಕ್ಕನ ಹತ್ಯೆಗೆ ಕಾರಣವಾಗಿದೆ ಅನ್ನೋದು ವಿಚಿತ್ರವಾದರೂ ಸತ್ಯ.

Related posts

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ

ಸಿಎಂ ಮನದಾಳದ ಮಾತು ಯತೀಂದ್ರ ಮಾತಲ್ಲಿ ಹೊರ ಬೀಳ್ತಿದ್ಯಾ..?

Publicspot

TVK Party Vijay Stamped; 41 ಜನರ ಸಾವು ಮತ್ತು ತಮಿಳುನಾಡು ರಾಜಕೀಯ.. ಎಲ್ಲಿದೆ ದೋಷ..?

Publicspot

Legends talks about S.L Byarappa; ಬಾನು ಮುಷ್ತಾಕ್‌ ಮನೆಯಲ್ಲಿ ವಾರ ಕಳೆದಿದ್ರಂತೆ S.L ಭೈರಪ್ಪ..

Publicspot

Cricket and Politics; ಕ್ರೀಡೆ ಮತ್ತು ಸ್ನೇಹ.. ಕ್ರಿಕೆಟ್​ ಮತ್ತು ರಾಜಕೀಯ.. ಭಾರತ ತಪ್ಪು ಮಾಡಿದ್ದೆಲ್ಲಿ..?

Publicspot

ಗ್ಯಾರಂಟಿ ಕೊಡಲು ಸಾಧ್ಯವಾಗ್ತಿಲ್ವಾ..? ಇನ್ಮುಂದೆ ಗ್ಯಾರಂಟಿ ನಿಂತೇ ಹೋಗುತ್ತಾ..?

Publicspot