The Public Spot
ಅಂಕಣ

ಕೋಗಿಲು ಕ್ರಾಸ್​ ಡೆಮಾಲಿಷನ್​.. ಮಾನವೀಯತೆಯೋ..? ಮುಸ್ಲಿಂ ಅನ್ನೋ ಕಾರಣಕ್ಕೋ..?

ಕೋಗಿಲು ಕ್ರಾಸ್​ನಲ್ಲಿ 150ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದ ಗುಡಿಸಲು ಮನೆಗಳನ್ನು ತೆರವು ಮಾಡಿ GBA ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು. ಯಲಹಂಕ ಕೋಗಿಲು ಲೇ ಔಟ್​ನಲ್ಲಿ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿದ್ದರೂ ಒತ್ತುವರಿ ಮಾಡಿದ್ದಾರೆ ಅನ್ನೋ ಕಾರಣಕ್ಕೆ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಜನರು ಎರಡ್ಮೂರು ದಿನಗಳು ಆದರೂ ಅವರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಮಹಿಳೆಯರು ಹಾಗೂ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯೂ ಇರಲಿಲ್ಲ. ಈ ಬಗ್ಗೆ ಮೊದಲು ದನಿ ಎತ್ತಿದ್ದೇ ನಿಮ್ಮ Public Spot. ಪ್ರವಾಹ ಬಂದು ಮನೆ ಕಳೆದುಕೊಂಡಾಗ ಅಥವಾ ಬೇರ್ಯಾವುದೋ ಸಮಯದಲ್ಲಿ ಮಾನವಹಕ್ಕುಗಳ ಆಯೋಗ ಎಂಟ್ರಿ ಆಗುತ್ತದೆ. ಈಗಲೂ ಮಕ್ಕಳು ಚಳಿಯಲ್ಲಿ ಒದ್ದಾಡ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಆಗಬೇಕು ಎಂದು ಆಗ್ರಹ ಮಾಡಿದ್ದೆವು.

ಈ ಬಗ್ಗೆ ರಾಜ್ಯ ಸರ್ಕಾರ ಇವತ್ತು ನಿರ್ಧಾರ ಮಾಡಲಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನಿರಾಶ್ರಿತರಿಗೆ ಸೂರು ಒದಗಿಸುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. ನಿನ್ನೆ ಅಷ್ಟೆ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಭಾನುವಾರ ಕೋಗಿಲು ಬಡಾವಣೆಗೆ ತೆರಳಿದ್ದ ಸಚಿವ ಜಮೀರ್​​ ಅಹ್ಮದ್​ ಪರಿಶೀಲನೆ ಮಾಡಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಕೂಡ ಮಾಹಿತಿ ಪಡೆದುಕೊಳ್ಳುವ ಕೆಲಸ ಮಾಡಿದ್ದರು. ಮಾನವೀಯತೆ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸಿಎಂಗೆ ಸಲಹೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಸದ್ಯ ಮನೆ ಕಳೆದು ಕೊಂಡವರಿಗೆ ಎಲ್ಲಿ ಜಾಗ ಒದಗಿಸಬೇಕು ಎಂಬುವುದರ ಬಗ್ಗೆ ನಿರ್ಧಾರ ಮಾಡಲು ಸಭೆ ಕರೆದಿದ್ದಾರೆ. ಇದು ಪಬ್ಲಿಕ್​ ಸ್ಪಾಟ್​​ ವರದಿಯಿಂದಲೇ ಆಗಿದ್ದು ಎನ್ನದಿದ್ದರೂ ನಾವೂ ಪ್ರಶ್ನೆ ಮಾಡಿದ್ದೆವು ಎನ್ನಬಹುದು.

ಡೆಮಾಲಿಷನ್ ಆಗಿರುವ ಜಾಗದಲ್ಲಿ ಮತ್ತೆ ಶೆಡ್ ನಿರ್ಮಾಣ ಮಾಡ್ತಾರಾ..? ಅಥವಾ ಹತ್ತಿರದಲ್ಲಿರುವ ಸರ್ಕಾರಿ ಜಮೀನಿನಲ್ಲಿ ವಾಸ್ತವ್ಯ ಮಾಡಲು ಅವಕಾಶ ಕೊಡ್ತಾರಾ..? ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ ನಿರ್ಮಿಸಿರುವ ಮನೆ ಕೊಡ್ತಾರ..? ಎಲ್ಲಿ ವ್ಯವಸ್ಥೆ ಮಾಡಬಹುದು ಅನ್ನೋ ಬಗ್ಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡಲಿದ್ದಾರೆ. ಈಗಾಗಲೇ ನಿರಾಶ್ರಿತರಿಗೆ ಸಿಹಿ ಸುದ್ದಿ ಕೊಡ್ತಾರೆ ಅಂತ ವಸತಿ ಸಚಿವ ಜಮೀರ್ ಸುಳಿವು ಕೊಟ್ಟಿದ್ದಾರೆ. ಕಳೆದ 10 ದಿನದಿಂದ ಜಾಗ ಬಿಟ್ಟು ಕದಲದೆ ಕುಳಿತ ನಿವಾಸಿಗಳು ಮನೆ ಕೆಡವಿದ ಜಾಗದ ಬಳಿಯೇ ಟಾರ್ಪಲ್ ಹಾಕಿ ಜೀವನ ಮಾಡುತ್ತಿದ್ದಾರೆ. ಸರ್ಕಾರ ಕೂಡ ಈಗ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಆದರೆ ಮುಸ್ಲಿಮರು ಅನ್ನೋ ಕಾರಣಕ್ಕೆ ಈ ನಿರ್ಧಾರ ಮಾಡಿದ್ಯಾ..? ಅನ್ನೋ ಅನುಮಾನ ಮೂಡುತ್ತಿದೆ.

ಯಲಹಂಕದ ಕೋಗಿಲು ಬಳಿ ಮನೆ ಕೆಡವಿದ ವಿಚಾರ ಕೇರಳದಲ್ಲಿ ಸದ್ದು ಮಾಡಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್​ ಅವರು ಕಾಂಗ್ರೆಸ್​ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. 150ಕ್ಕೂ ಹೆಚ್ಚು ಕುಟುಂಬಗಳ ಮನೆಯನ್ನು ಕೆಡವಿ ನಿರಾಶ್ರಿತರನ್ನಾಗಿ ಮಾಡಿದೆ ಎಂದು ವಾಗ್ದಾಳಿ ಮಾಡಿದ್ದರು. ಮುಸ್ಲಿಮರ ಮತಗಳನ್ನು ಪಡೆಯುವ ಉದ್ದೇಶದಿಂದ ಕರ್ನಾಟಕದ ವಿಚಾರಗಳನ್ನು ಎತ್ತಿಕೊಂಡಿದ್ದರು. ಕೂಡಲೇ ಅಲರ್ಟ್​ ಆದ ಕೇರಳದ ಕೆ.ಸಿ ವೇಣುಗೋಪಾಲ್​, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಸೂಚನೆ ಕೊಟ್ಟಿದ್ದು, ಪುನರ್ವಸತಿ ಕಲ್ಪಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇದೀಗ ರಾಜ್ಯ ಸರ್ಕಾರ ಕೂಡ ಮನಸ್ಸು ಮಾಡಿದೆ. ಇದು ಮಾನವೀಯತೆ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರವೋ..? ಮುಸ್ಲಿಮರು ಅನ್ನೋ ಕಾರಣಕ್ಕೆ ಎದುರಾದ ಅನಿವಾರ್ಯತೆಯೋ..? ಕೇರಳ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶವೋ ಅನ್ನೋದನ್ನು ಜನರೇ ಅರ್ಥ ಮಾಡಿಕೊಳ್ಳಬೇಕಿದೆ. ಬೇರೆ ಕಡೆಯಲ್ಲೂ ಇದೇ ರೀತಿ ತೆರವು ಮಾಡಿ ಸಂಕಷ್ಟಕ್ಕೆ ಒಳಗಾದವರಿಗೂ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

Related posts

Banu Musthaq Not So Great: ಬಾನು ಮುಷ್ತಾಕ್​ ದೊಡ್ಡವರಾಗಲು ಹೀಗೆ ಮಾಡಬೇಕಿತ್ತು..

Publicspot

TVK Party Vijay Stamped; 41 ಜನರ ಸಾವು ಮತ್ತು ತಮಿಳುನಾಡು ರಾಜಕೀಯ.. ಎಲ್ಲಿದೆ ದೋಷ..?

Publicspot

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ

ಎರಡೂವರೆ ವರ್ಷ ಆಯ್ತು.. ಊಟಕ್ಕೆ ಕರೆದಿರೋ ಸಿಎಂ.. ಬದಲಾವಣೆ ಫಿಕ್ಸಾ..?

Publicspot

ಜಮೀರ್​​ ಅಖಾಡಕ್ಕೆ ಬಾರದಿದ್ದರೆ ಕಾಂಗ್ರೆಸ್​​ಗೆ ಸಂಕಷ್ಟ ಫಿಕ್ಸ್​..!

Publicspot

Cm Change Talks; ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಸತೀಶ್‌ ಜಾರಕಿಹೊಳಿ ಸಿಎಂ ಆಗ್ತಾರಾ..?

Publicspot