The Public Spot
ರಾಜ್ಯ

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಮನೆ ಕಟ್ಟುವುದಕ್ಕೆ ಭೂಮಿ ಅಗೆಯುವಾಗ ಕಂಚಿನ ಗಡಿಗೆಯಲ್ಲಿ ಬಂಗಾರ ಸಿಕ್ಕಿದೆ. ಸಾಮಾನ್ಯವಾಗಿ ಭೂಮಿಯೊಳಗೆ ಅಡಗಿದ್ದು, ಯಾರಿಗೂ ಗೊತ್ತಿಲ್ಲದೆ ಇರುವ ಬಂಗಾರದ ಖಜಾನೆಗೆ ನಿಧಿ ಎನ್ನುತ್ತೇವೆ. ಭೂಮಿಯ ಗರ್ಭದ ಒಳಗೆ ಬೆಚ್ಚಗೆ ಅಡಗಿ ಕೂತಿದ್ದ ಬಂಗಾರ ಶೋಧಕ್ಕೆ ಕೆಲವು ಕಡೆ ಮೂಢ ನಂಬಿಕೆಯಂತೆ ಬಲಿಗಳನ್ನು ಕೊಟ್ಟು ನಿಧಿ ಶೋಧನೆ ಮಾಡುವ ಕೆಲಸವೂ ನಡೆಯುತ್ತದೆ. ನಿಧಿ ಶೋಧಕ್ಕಾಗಿ ದೇವಸ್ಥಾನಗಳ ಲೂಟಿಯೇ ನಡೆದಿರುವುದು ಇತಿಹಾಸ. ಇಷ್ಟೆಲ್ಲಾ ಇದ್ದರೂ ಗದಗದಲ್ಲಿ ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಬಂಗಾರದ ಖಜಾನೆ ಪತ್ತೆಯಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವಾಗ ಬಂಗಾರ ತುಂಬಿದ ಮಡಿಕೆಯೇ ಸಿಕ್ಕಿದೆ.

ಬಂಗಾರದ ಬೆಲೆ ಗಗನಕ್ಕೇರಿರುವ ಈ ಹೊತ್ತಿನಲ್ಲಿ ಮಡಿಕೆ ತುಂಬಾ ಬಂಗಾರ ಅಂದ್ರೆ ಯಾರಿಗೆ ತಾನೆ ಬೇಡ. ಒಂದು ತೊಲೆ ಬಂಗಾರ ಒಂದೂವರೆ ಲಕ್ಷದ ಹತ್ತಿರದಲ್ಲಿದೆ. 1 ಗ್ರಾಂ ಬಂಗಾರ ಕೊಳ್ಳೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಅಂತದ್ರಲ್ಲಿ ಅರ್ಧ ಕೆಜಿ ಬಂಗಾರ ಭೂಮಿಯಲ್ಲಿ ಪತ್ತೆಯಾಗಿದೆ.. ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಬಂಗಾರ ತುಂಬಿದ ಮಡಿಕೆಯೇ ಸಿಕ್ಕಿದೆ. ಕಸ್ತೂರವ್ವ ರಿತ್ತಿ ಎಂಬುವರ ಕುಟುಂಬ ಹೊಸ ಮನೆ ಕಟ್ಟಿಸಲು ನಿರ್ಧಾರ ಮಾಡಿದ್ದರು. ಹೀಗಾಗಿ ಹಳೇ ಮನೆಯ ಜಾಗದಲ್ಲಿ ಮನೆಗೆ ಅಡಿಪಾಯ ತೋಡುತ್ತಿದ್ದರು. ಫೌಂಡೇಷನ್‌ ಮಾಡಲು ಅದಿಪಾಯ ತೆಗೆಯುವ ಹೊತ್ತಲ್ಲಿ ಮಡಿಕೆಯೊಂದು ಪತ್ತೆಯಾಗಿತ್ತು. ಆಶ್ಚರ್ಯಚಕಿತರಾದ ಮನೆಯವರು ಕುತೂಹಲದಿಂದ ಹೊರಕ್ಕೆ ತೆಗೆದು ನೋಡಿದಾಗ ಬಂಗಾರ ತುಂಬಿತ್ತು.

ಮಡಿಕೆಯನ್ನು ತೆರದು ನೋಡಿದಾಗ ಕಣ್ಕುಕ್ಕುವಂತಾ ಬಂಗಾರದ ಸರ, ಕಿವಿಯೋಲೆ, ಕೈ ಕಡಗ ಸೇರಿದಂತೆ ಹಲವಾರು ಬಂಗಾರದ ಆಭರಣಗಳು ಪತ್ತೆಯಾಗಿದೆ. 100 ಗ್ರಾಂ, ಇನ್ನೂರು ಗ್ರಾಂ ಬಂಗಾರ ಸಿಕ್ಕಿತ್ತು. ಬಂಗಾರ ತುಂಬಿದ ಮಡಿಕೆ ಸಿಕ್ಕಿದೆ ಅನ್ನೋ ವಿಚಾರ ಇಡೀ ಊರಿಗೆಲ್ಲಾ ತಿಳಿಯುತ್ತಿದ್ದಂತೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ಹೋಗಿತ್ತು. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಹಾಗೂ ಪುರಾತತ್ವ ಇಲಾಖೆ ಸಿಬ್ಬಂದಿ ಜೊತೆ ಎಂಟ್ರಿ ಕೊಟ್ಟ ಪೊಲೀಸ್ರು, ಜಿಲ್ಲಾಧಿಕಾರಿ, ತಹಶೀಲ್ದಾರ್​​ ಎಲ್ಲರೂ ಬಂದು ಬಂಗಾರವನ್ನು ಜಪ್ತಿ ಮಾಡಿದ್ದರು. ಅಕ್ಕಸಾಲಿಗರನ್ನು ಸ್ಥಳಕ್ಕೆ ಕರೆಸಿದ ಅಧಿಕಾರಿಗಳು, 466 ಗ್ರಾಂ ಚಿನ್ನ ಸಿಕ್ಕಿದೆ ಅನ್ನೋದನ್ನು ಖಚಿತಪಡಿಸಿಕೊಂಡು ವಶಕ್ಕೆ ಪಡೆದು ಕೊಂಡೊಯ್ದರು.

ನಿಧಿ ಅಷ್ಟೇ ಅಲ್ಲ ಭೂಮಿಯ ಒಳಗೆ ಏನಾದರೂ ಸಿಕ್ಕರೆ, ಅದು 10 ರೂಪಾಯಿ ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ ಅದು ನಿಸ್ಸಂದೇಹವಾಗಿ ಸರ್ಕಾರದ ಸ್ವತ್ತು. 10 ರೂಪಾಯಿ ಬೆಲೆಯ ಮೇಲ್ಪಟ್ಟ ನಿಧಿ ಸಿಕ್ಕರೂ ಕೂಡಾ ಅಲ್ಲಿನ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಸಿಕ್ಕ ಬಂಗಾರ 100 ವರ್ಷಕ್ಕಿಂತ ಮೇಲ್ಪಟ್ಟಿದ್ದು ಆದರೆ ಅದು ಸರ್ಕಾರದ ಸ್ವತ್ತಾಗುತ್ತದೆ. ಆ nಇಧಿಯಲ್ಲಿ 5ನೇ 1 ಭಾಗವನ್ನ ಜಾಗದ ಮಾಲೀಕರಿಗೆ ನೀಡುವ ಅವಕಾಶವಿದ್ದು, ಆ ನಿರ್ಧಾರವನ್ನ ಡಿಸಿಗೆ ನೀಡಲಾಗಿದೆ. ಒಂದು ವೇಳೆ ನಿಧಿ ಸಿಕ್ಕ ಮಾಹಿತಿಯನ್ನು ಡಿಸಿಗೆ ತಿಳಿಸದೆ ಮುಚ್ಚಿಟ್ಟರೆ 1 ವರ್ಷದ ವರೆಗೆ ಜೈಲು ಶಿಕ್ಷೆಯಾಗಲಿದೆ.. ಸಿಕ್ಕ ನಿಧಿ 100 ವರ್ಷದ ಒಳಗಿನ ಸ್ವತ್ತು ಆಗಿದ್ರೆ, ಕರ್ನಾಟಕ ನಿಧಿ ಕಾಯಿದೆ 1962ರ ಪ್ರಕಾರ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಮುಂದಿನ ನಿರ್ಧಾರ ಮಾಡಲಾಗುತ್ತದೆ.

Related posts

Mysore Dassara Supreme Court direction; ದಸರಾ ಸಿದ್ದತೆ ನಡುವೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ.. ಬಾನು ಬರ್ತಾರಾ..? ಇಲ್ವಾ..?

Publicspot

ಶಿಕ್ಷಕರ ನೇಮಕಾತಿ & ಕಡ್ಡಾಯ ನಿಯಮಗಳು.. BE, BSc, BCA ಗೂ ಚಾನ್ಸ್​​

Publicspot

ಬಗೆಹರಿಯಿತೇ ಬಾನು ಆಯ್ಕೆ ವಿವಾದ..? ಅರಮನೆ ಸಂದೇಶ ಏನು..?

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

Publicspot

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ಯಶವಂತಿ