The Public Spot
ರಾಜ್ಯ

No Namma Metro, Basava Metro; ನಮ್ಮ ಮೆಟ್ರೋ ಬದಲಿಸ್ತೇನೆ.. ಲಿಂಗಾಯತ ಸಮಾವೇಶದಲ್ಲಿ ಸಿಎಂ ದಾಳ..

ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಬಸವೇಶ್ವರರ ಅಭಿಮಾನಿ. ಅವರ ತತ್ವ ಸಿದ್ದಾಂತಗಳಲ್ಲಿ ನಂಬಿಕೆ‌ ಬದ್ಧತೆ ಇಟ್ಟುಕೊಂಡವನು. ಆ ಕಾರಣಕ್ಕಾಗಿ ವಿಶ್ವ ಗುರು ಬಸವಣ್ಣನನ್ನ ಸಾಂಸ್ಕೃತಿಕ ನಾಯಕ ಅಂತ ನಮ್ಮ ಸರ್ಕಾರ ಘೋಷಣೆ ಮಾಡಿದೆ. ನಾಮಕರಣದ ಮೂಲಕ‌ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸುವ ಕೆಲಸ ಮಾಡಿದೆ. ಬಸವಣ್ಣನವರ ತತ್ವ ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿ ಎಲ್ಲಿವರೆಗೂ ಮೇಲು ಕೀಳು, ಚಾತುರ್ವರ್ಣ ವ್ಯವಸ್ಥೆ ಇರುತ್ತದೆಯೋ ಅಲ್ಲಿವರೆಗೂ ಬಸವಣ್ಣನ ತತ್ವ ಪ್ರಸ್ತುತ. ಜಾತಿ ರಹಿತ, ವರ್ಗರಹಿತ ಮಾನವ ಸಮಾಜ ನಿರ್ಮಾಣದ ಕನಸು ಕಂಡಿದ್ದನ್ನ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದ್ದಾರೆ.

ನಾವೆಲ್ಲರೂ ಮೂಲತಃ ಮಾನವರು, ಬಳಿಕ ಭಾರತೀಯರು. ನಾವೆಲ್ಲರೂ ಮಾನವರಂತೆ ಬದುಕುವ ಸಮಾಜ ನಿರ್ಮಾಣ ಮಾಡಬೇಕು. ಅಸಮಾನತೆ, ತಾರತಮ್ಯ ಹೋಗಲಾಡಿಸಿ ನವ ಸಮಾಜ ನಿರ್ಮಾಣ ಬಸವಣ್ಣನವರ ಆಶಯ. ನಾನು ಕಾನೂನು ವಿದ್ಯಾರ್ಥಿ ಆದಾಗಿನಿಂದ‌ ಇಲ್ಲಿಯವರೆಗೆ ಬಸವಾದಿ ಶರಣರ ಅನುಯಾಯಿ. ಅಂಬೇಡ್ಕರ್ ಸಂವಿಧಾನದಲ್ಲಿ ಬಸವಣ್ಣನವರ ವಿಚಾರಗಳನ್ನೇ ಅಳವಡಿಸಿದ್ದಾರೆ. ಬಸವಣ್ಣನವರ ವಿಚಾರಗಳು, ಸಂವಿಧಾನದ ಆಶಯಗಳು ಎರಡೂ ಒಂದೇ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಬಸವಣ್ಣ ನುಡಿದಂತೆ ನಡೆದರು, ನಾವು ಕೂಡ ನುಡಿದಂತೆ ನಡೆಯಬೇಕು. ನಾವು ಬಸವಣ್ಣನ ಅನುಯಾಯಿಗಳು ನುಡಿದಂತೆ ನಡೆಯುವ ಕೆಲಸ ಮೊದಲು ಮಾಡಬೇಕು. ಆಗ ಮಾತ್ರ ಬಸವಾದಿ ಶರಣ ಹೆಸರೇಳಲು ಅರ್ಹರಾಗುತ್ತೇವೆ. ಇಲ್ಲದಿದ್ದರೆ ಅರ್ಹರಾಗುವುದು ಇಲ್ಲ ಎಂದಿದ್ದಾರೆ.

ನಾನು ಜಾಸ್ತಿ ಭಾಷಣ ಮಾಡಲು ಹೋಗಲ್ಲ. ಏನೇನೊ ಹೇಳೋಕೆ ಹೋಗಿ ವಿವಾದ ಆಗಬಹುದು. ನಾವೆಲ್ಲಾ ಶೂದ್ರರು, ಚಾತುರ್ವರ್ಣ ವ್ಯವಸ್ಥೆಯಲ್ಲಿ ‌ನಾಲ್ಕನೇ ಸ್ಥಾನಗಳಿವೆ. ಬ್ರಾಹ್ಮಣ ಮೇಲ್ಗಡೆ, ವೈಷ್ಣವ, ಈಗ ಪಂಚಮರು ಅಂತ ಬೇರೆ ಸೇರಿಸಿದ್ದಾರೆ ಎಂದಿದ್ದಾರೆ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಜಡತ್ವ ಇದೆ. ಜಾತಿ ವ್ಯವಸ್ಥೆಗೆ ಚಲನೆ ಇರಬೇಕು, ಆದರೆ ಇಲ್ಲ. ಅದಕ್ಕಾಗಿ ಬಸವಣ್ಣ ಒಂದು ಧರ್ಮವನ್ನೇ ಹುಟ್ಟು ಹಾಕಿದ್ರು. ಬಾವಿಯಲ್ಲಿ ಬಿಂದಿಗೆ ಮೇಲೆ ‌ಕೆಳಗೆ ಆಗುವಂತೆ ಜಾತಿ ವ್ಯವಸ್ಥೆಯೂ ಮೇಲೆ ‌ಕೆಳಗೆ ಆಗ್ತಿದೆ. ಸಮಾಜ ಸುಧಾರಕರು ಜಾತಿ ವ್ಯವಸ್ಥೆ ಹೋಗಲಾಡಿಸಲು ಹೋಗ್ತಾರೆ. ಅವರ ಬಳಿಕ‌ ಮೇಲೆ ಕೆಳಗೆ ಆಗುತ್ತದೆ. ಮುಂದಿನ ವರ್ಷದೊಳಗೆ ಅನುಭವ ಮಂಟಪ ಪೂರ್ಣಗೊಳಿಸುವ ಕೆಲಸ ಮಾಡ್ತೇವೆ. ಮುಂದಿನ ವರ್ಷದಿಂದ ವಚನ ವಿವಿ ಸ್ಥಾಪನೆ ಮಾಡುತ್ತೇವೆ. ನಾನು ರಾಜಕೀಯದಲ್ಲಿ ಏನು ಮಾತು ಕೊಡ್ತೇನೆ ಅದನ್ನ ನಡೆಸಿಕೊಡ್ತೇನೆ ಎಂದು ಬಸವ ಸಂಸ್ಕೃತಿ ಅಭಿಯಾನ ಸಮಾರೋಪದಲ್ಲಿ ಸಿಎಂ ಭರವಸೆ ನೀಡಿದ್ದಾರೆ.

ಬೆಂಗಳುರಿನ ನಮ್ಮ ಮೆಟ್ರೋಗೆ ಬಸವಣ್ಣನ ಹೆಸರಿಡುವಂತೆ ಒತ್ತಡ ಬಂದಿದ್ದು, ಕೇಂದ್ರ, ರಾಜ್ಯ ಸರ್ಕಾರ ಎರಡೂ ಈ‌ ಕೆಲಸ ಮಾಡಬೇಕು. ನಾನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವ ಇಡುವ ಕೆಲಸ ಮಾಡ್ತೇನೆ ಎಂದಿದ್ದಾರೆ. ಕೇಂದ್ರ ಸರ್ಕಾರ ಒಪ್ಪಿದ್ರೆ ನಾನು ಘೋಷಣೆ ಮಾಡ್ತೇನೆ. ನಮ್ಮ ಸರ್ಕಾರದ ನಿರ್ಧಾರ ಆಗಿದ್ರೆ ಸ್ಥಳದಲ್ಲೇ ಒಪ್ಪಿಗೆ ನೀಡುತ್ತಿದ್ದೆ. ಆದರೆ ಕೇಂದ್ರ ಸರ್ಕಾರದ ಅನುಮತಿಯೂ ಬೇಕು ಎಂದಿದ್ದಾರೆ ಸಿದ್ದರಾಮಯ್ಯ. ಬಸವ ಸಂಸ್ಕೃತಿ ಅಭಿಯಾನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯಗೆ ಶರಣರು ಸನ್ಮಾನ ಮಾಡಿದ್ದಾರೆ. ಸಿಎಂ ಹಣೆಗೆ ವಿಭೂತಿ ಹಚ್ಚಿ ಸನ್ಮಾನ ಮಾಡಿದ್ದಾರೆ. ಸಿಎಂಗೆ ರುದ್ರಾಕ್ಷಿ ಮಾಲೆ ಹಾಕಿದ್ದಾರೆ ಶಾಸಕ ಬಿ.ಆರ್ ಪಾಟೀಲ್. ತಮ್ಮ ಕತ್ತಿನಲ್ಲಿದ್ದ ರುದ್ರಾಕ್ಷಿ ಮಾಲೆಯನ್ನು ಸಿಎಂಗೆ ಹಾಕಿದ್ದಾರೆ ಬಿ.ಆರ್ ಪಾಟೀಲ್.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸಿದ್ದರಾಮಯ್ಯ ಬಸವಣ್ಣನ ಅಪ್ಪಟ ಅನುಯಾಯಿ, ಸಿದ್ದರಾಮಯ್ಯನವರನ್ನ ಯಾಕೆ ಗೌರವಿಸುತ್ತಿದ್ದೇವೆ..! ಅಂದರೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಕಡ್ಡಾಯ ಮಾಡಿದ್ರು, ಬಸವಣ್ಣನ ಜನ್ಮಭೂಮಿಯಲ್ಲಿ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟವರು ಸಿದ್ದರಾಮಯ್ಯ. ಬಸವಣ್ಣನನ್ನ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದವರು ಸಿದ್ದರಾಮಯ್ಯ ಎಂದಿದ್ದಾರೆ. ಬಸವಣ್ಣನವರ ಬಗ್ಗೆ ಅವರಲ್ಲಿರುವ ಬಸವಣ್ಣನ ಬಗೆಗಿನ ಗೌರವ, ತತ್ವ ಸಿದ್ದಾಂತಗಳು ಅನೇಕ ಜನ ಲಿಂಗಾಯತ ನಾಯಕರಲ್ಲಿ ಕಾಣಲು ಸಾಧ್ಯವಿಲ್ಲ. ಅದನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಕಾಣ್ತೇವೆ. ಎಲ್ಲ ಕಾಯಕ ವರ್ಗದವರನ್ನ ಜೊತೆಗಿಟ್ಟುಕೊಂಡು ಅನುಭವ ಮಂಟಪ ಕಟ್ಟಿದ್ರು. 12 ನೇ ಶತಮಾನದಲ್ಲಿ ಅಸ್ಪೃಶ್ಯತೆ ಹೋಗಬೇಕೆಂದು ಹೋರಾಡಿ ಬಸವ ಧರ್ಮ ಸ್ಥಾಪಿಸಿದ್ರು. ಇಂದು ಬಸವ ಧರ್ಮ ಹರಿದು ಹಂಚಿ ಹೋಗಿದೆ. ಹೀಗಾಗಿ ಶರಣರ ನೇತೃತ್ವದಲ್ಲಿ ಬಸವ ಜಾಗೃತಿ ಆಗಬೇಕು. ನಾವು ಯಾರ ವಿರುದ್ದವೂ ಇಲ್ಲ, ಸಕಾರಾತ್ಮಕವಾಗಿದ್ದೇವೆ. ನಮ್ಮ ಬಸವ ಧರ್ಮ, ಲಿಂಗಾಯತ ಧರ್ಮವನ್ನ ಪ್ರತಿಪಾದಿಸೋಣ ಎಂದಿದ್ದಾರೆ.

Related posts

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot

CM ಕೆಲಸ ವರ್ಗಾವಣೆ ಮಾಡೋದಲ್ಲ.. ಹೈಕೋರ್ಟ್​ ಗರಂ ಆಗಿದ್ಯಾಕೆ..?

Publicspot

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

Publicspot

ಬೆಂಗಳೂರಲ್ಲಿ ಗಣತಿಗೆ ಡಿಸಿಎಂ ಡಿಕೆಶಿ ಚಾಲನೆ.. ಪ್ರಶ್ನೆಗಳಿಗೆ ಉತ್ತರಿಸಲು ಗರಂ..

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot