The Public Spot
ರಾಜಕೀಯ

ಅಬಕಾರಿ ಇಲಾಖೆಯಲ್ಲಿ ಗೋಲ್ಮಾಲ್‌.. ಅಹೋರಾತ್ರಿ BJP – JDS ಧರಣಿ..

ಬಿಜೆಪಿ – ಜೆಡಿಎಸ್ ಸದಸ್ಯರು ಅಹೊರಾತ್ರಿ ಧರಣಿ ಮಾಡುತ್ತಿದ್ದಾರೆ. ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರಾಜಿನಾಮೆಗೆ ಆಗ್ರಹಿಸಿ ಧರಣಿ ಮಾಡಲಾಗ್ತಿದೆ. ವಿಧಾನಸಭಾ ಕಲಾಪ ಮುಂದೂಡಿದ್ರೂ ಬಿಜೆಪಿ – ಜೆಡಿಎಸ್‌‌ ಶಾಸಕರ ಪ್ರತಿಭಟನೆ ನಡೆದಿದೆ. ಅಹೋರಾತ್ರಿ ಧರಣಿ ಮಾಡ್ತಿರೋ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಭ್ರಷ್ಟ ಸಚಿವ, ಆರು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. 200 – 300 ಕೋಟಿ ಕಲೆಕ್ಟ್ ಮಾಡಿದ್ದಾರೆ. ಡಿಸಿಗೆ 2-3 ಕೋಟಿ ಕಲೆಕ್ಟ್ ಮಾಡ್ತಾರೆ. ಅಬಕಾರಿ ಡಿಸಿ ಹೇಳಿದ್ದಾರೆ ಹಣ ನೀಡಬೇಕು ಎಂದು ಹೇಳಿರುವುದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಲೋಕಾಯುಕ್ತ ಪೊಲೀಸ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದಕ್ಕಿಂತ ಸಾಕ್ಷಿ ಏನು ಬೇಕು. ಸಿಎಂ ಅವರು ಮಂತ್ರಿಗೆ ಬೆಂಬಲವಾಗಿ ‌ನಿಂತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜೆಡಿಎಸ್‌ ನಾಯಕ ಸುರೇಶ್‌ ಬಾಬು, ವಿಜಯೇಂದ್ರ ಕೂಡ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಅಬಕಾರಿ ಇಲಾಖೆಯ ಕಲೆಕ್ಷನ್‌ ಹಣ ಕಾಂಗ್ರೆಸ್ ಹೈಕಮಾಂಡ್‌ಗೆ ಹೋಗಲೇಬೇಕು. ಕೇರಳ ಚುನಾವಣೆಗೆ ಈ ಹಣ ನೀಡಬೇಕು. ಕೆ.ಸಿ ವೇಣುಗೋಪಾಲ್ ಇದ್ದಾರಲ್ಲ ಅವರಿಗೆ ಕಳುಹಿಸಬೇಕು. ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ 700 ಕೋಟಿ ‌ಕಳುಹಿಸುತ್ತಿದ್ರು. ಈ ಬಗ್ಗೆ ಪ್ರಧಾನಿ ಮೋದಿಯೇ ಆರೋಪ ಮಾಡಿದ್ದಾರೆ. ಆರ್‌.ಬಿ ತಿಮ್ಮಾಪುರ ಮಂತ್ಲಿ ಕಲೆಕ್ಷನ್‌ ಮಂತ್ರಿ. ರಾಜ್ಯದ ಹಣ ಲೂಟಿ ಮಾಡ್ತಿದ್ದಾರೆ. ರಾಜ್ಯದ ಜನರ ಹಣ ಇದು, ಶಾಸಕರು ಅನುದಾನ ಇಲ್ಲ ಅಂತಿದ್ದಾರೆ. ಆದ್ರೆ ಕಾಂಗ್ರೆಸ್ ಹೆಡ್ ಆಫೀಸ್‌ಗೆ ಈ ಹಣ ಹೋಗುತ್ತಿದೆ. ರಾತ್ರಿ ಪೂರ್ತಿ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದಿದ್ದಾರೆ ಆರ್‌. ಅಶೋಕ್‌. ಜೆಡಿಎಸ್ ನಾಯಕ ಸುರೇಶ್ ಬಾಬು ಮಾತನಾಡಿ, ಅಬಕಾರಿ ಇಲಾಖೆಯಿಂದ ಸಾವಿರಾರು ಕೋಟಿ‌ ಹಗರಣ ಆಗಿದೆ. ಇದನ್ನು ನಾವು ಖಂಡಿಸುತ್ತೇವೆ. ಮಹಿಳೆಯರಿಗೆ 2000 ರೂಪಾಯಿ ನೀಡುತ್ತಿದ್ದಾರೆ. ಗಂಡನಿಂದ ದುಡ್ಡು ಕಿತ್ತು ಹೆಂಡತಿಗೆ ನೀಡುತ್ತಿದ್ದಾರೆ. ಪಾಪದ ಹಣದಿಂದ ಸರ್ಕಾರ ನಡೆಸಬೇಕಾ..? ನಿಮ್ಮ ವರಿಷ್ಠರಿಗೆ ಈ ಪಾಪದ ಹಣ ಕಳುಹಿಸಬೇಕಾ..? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಅಬಕಾರಿ ಸಚಿವರ ಮೇಲೆ ನೇರ ಆರೋಪ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರೇ ಸಚಿವರ ಬೆನ್ನಿಗೆ ನಿಂತಿದ್ದಾರೆ. ಹೈಕಮಾಂಡ್‌ಗೆ ಹಣ ಹೋಗುತ್ತಿರುವುದರಲ್ಲಿ ಸಂದೇಹ ಇಲ್ಲ. ಈ ಭ್ರಷ್ಟಾಚಾರ ಕಡೆಗಣಿಸಲು ಬಿಜೆಪಿ – ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಲಿದೆ ಎಂದಿದ್ದಾರೆ. ಅಶ್ವತ್ಥ ನಾರಾಯಣ್ ಮಾತನಾಡಿ, ಡೆತ್ ನೋಟ್ ಬರೆದಿದ್ದಕ್ಕೆ ಈಶ್ವರಪ್ಪ ರಾಜೀನಾಮೆ ಪಡೆದರು. ಇಷ್ಟು ದೊಡ್ಡ ಆಡಿಯೋ ಸಾಕ್ಷ್ಯ ಎಲ್ಲಾ ಇದೆ ಆದರೂ ಕ್ರಮ ಯಾಕಿಲ್ಲ..? ತಿಮ್ಮಾಪುರ ರಾಜಿನಾಮೆ ಕೊಡುವರೆಗೂ ಧರಣಿ ನಿಲ್ಲಿಸಲ್ಲ ಎಂದಿದ್ದಾರೆ. ಈ ಮೂರು ವರ್ಷದಲ್ಲಿ ಪ್ರತಿನಿತ್ಯ ಭ್ರಷ್ಟಾಚಾರ ನಡೆದಿದೆ. ಅಬಕಾರಿ ಇಲಾಖೆ ಬಗ್ಗೆ ಬಹಳಷ್ಟು ಬಾರಿ ವರ್ತಕರ ಸಂಘ ಬಹಿರಂಗವಾಗಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಹಲವಾರು ಬಾರಿ ಚರ್ಚೆ ಆಗಿದೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಮಾತುಕತೆ ಮಾಡಿದ್ರು. ಸಮಸ್ಯೆ ಬಗೆ ಹರಿಸುತ್ತೇನೆ ಅಂತ ಹೇಳಿದ್ರು. ಸದನದಲ್ಲಿ ಸಾಕ್ಷಿ ಸಮೇತ ಮಂಡನೆ ಮಾಡಿದ್ರೂ ಸಾಕ್ಷಿಗೆ ಲೆಕ್ಕ ಕೊಡುತ್ತಾ ಇಲ್ಲ. ಆಡಿಯೋ ಹೌದಾ ಅಲ್ವಾ ಅಂತ ಸ್ಪಷ್ಟ ಪಡಿಸಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಕ್ಕೆ ಯಾವುದು ತಲೆ ಕೆಡಿಸಿಕೊಳ್ಳುತ್ತಾ ಇಲ್ಲ.6,500 ಕೋಟಿ ಪ್ರತೀ ವರ್ಷ ಭ್ರಷ್ಟಾಚಾರ ಆಗ್ತಿರೋ ಅಪಾಧನೆ ಇದೆ ಎಂದಿದ್ದಾರೆ.

ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಮಾತನಾಡಿದ ಅಬಕಾರಿ ಸಚಿವ ತಿಮ್ಮಪೂರ, ಗೋಪಾಲಯ್ಯನ ಮೇಲೆ ಲಂಚದ ಆರೋಪ ಬಂತು, ಅವರೇನು ರಾಜೀನಾಮೆ ಕೊಟ್ಟಿದ್ರಾ? ಶಶಿಕಲಾ ಜೊಲ್ಲೆ ಮೇಲೆ ಮೊಟ್ಟೆ ಹಗರಣ ಬಂತು, ಅವರನ್ನ ಸಂಪುಟದಲ್ಲಿ ಹೇಗೆ ಇಟ್ಕೊಂಡಿದ್ರಿ..? ನೌಕರರಿಂದ ಸಿಸಿ ಪಾಟೀಲ್ ಹಣ ವಸೂಲಿ ಆರೋಪ ಬಂದಾಗ ಏನು ಕ್ರಮ‌ಕೈಗೊಂಡ್ರಿ..? ಬಿಜೆಪಿ ಅವಧಿಯಲ್ಲಿ ದೊಡ್ಡ ಪಟ್ಟಿಯೇ ಇದೆ. ಎಪಿಎಂಸಿ ಹಗರಣ, ಅರಸು ಟ್ರಕ್ ಟರ್ಮಿನಲ್ ಹಗರಣ, ಗಂಗಾ ಕಲ್ಯಾಣ ಹಗರಣ, ಪಿಎಸ್‌ಐ ಹಗರಣ, ಬಿಎಸ್‌ವೈ ಅಕ್ರಮ ಆಸ್ತಿ, ವಿಜಯೇಂದ್ರ ಕುಟುಂಬದ ಆಸ್ತಿ, ಈ ಎಲ್ಲಾ ಹಗರಣಗಳು ಬಂದ್ವಲ್ಲ, ಆಗ ಯಾರ್ಯಾರು ರಾಜೀನಾಮೆ ಕೊಟ್ರು..? ಇದರಲ್ಲಿ ನನ್ನ ಪಾತ್ರವೇನಿದೆ..? ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ಆ ಬಳಿಕ ಅಹೋರಾತ್ರಿ ಧರಣಿ ಮಾಡುವ ನಿರ್ಧಾರ ಮಾಡಲಾಯ್ತು ಎಂದು ಪ್ರಶ್ನಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಾನು ಸಾಕಷ್ಟು ಬದಲಾವಣೆಗಳನ್ನ ತಂದಿದ್ದೇನೆ. ಇದನ್ನು ಮಾಡಿದ್ದು ತಪ್ಪೇ..? ನಾನು ಯಾವುದೇ ಶೆಲ್ಟರ್ ತೆಗೆದುಕೊಳ್ಳಲ್ಲ. ದಲಿತ ಅನ್ನೋ ಕ್ರೆಡಿಟ್ ನಾನು ತೆಗೆದುಕೊಳ್ಳಲ್ಲ. ರಾಜ್ಯಪಾಲರು ಬಂದು ಭಾಷಣ ಮಾಡಿ ಹೋದ್ರು. ದಲಿತರಿಗೆ ಅನ್ಯಾಯ ಅಂತ ತೆಗೆದ್ರಿ. ನಾನು ಆ ರೀತಿ ಯಾವುದನ್ನೂ ತೆಗೆದುಕೊಳ್ಳಲ್ಲ. ವ್ಯಕ್ತಿಯ ಮೇಲೆ ತೇಜೋವಧೇ ಮಾಡಬೇಕಾದರೆ ಆಧಾರ ಬೇಡವೇ..? ನಿಮ್ಮ ಅವಧಿಯಲ್ಲಿ ಎಂಟು ಕಡೆ ‌ಲೋಕಾಯುಕ್ತ ಟ್ರ್ಯಾಪ್ ಆಯ್ತು. ಆಗ ನೀವು ಏನು ಕ್ರಮ‌ಕೈಗೊಂಡ್ರಿ..? ಹಾಗಾಗಿ ನಾನು ಯಾವ ರಾಜೀನಾಮೆ ಕೊಡಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪೂರ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಸದನದಲ್ಲೇ ಅಹೋರಾತ್ರಿ ಹೋರಾಟ ಮಾಡ್ತಿರೋ ಮೈತ್ರಿ ಪಕ್ಷದ ಶಾಸಕರಿಗೆ ಸ್ಪೀಕರ್‌ ಊಟ ಹಾಗೂ ಮಲಗಲು ಅವಶ್ಯಕ ಇರುವ ಹಾಸಿಗೆ ವ್ಯವಸ್ಥೆ ಮಾಡಿಸಿದ್ದಾರೆ.

Related posts

ಮಣಿಪಾಲ್​ ಆಸ್ಪತ್ರೆಯಲ್ಲಿ ದೇವೇಗೌಡರನ್ನು ಭೇಟಿಯಾದ ಜಮೀರ್.. ಸ್ಪಷ್ಟನೆ..

Publicspot

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

INTERNAL CASTE RESERVATION: ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡೆಲೆ ಆದ ಒಳಮೀಸಲಾತಿ..

Publicspot

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot