The Public Spot
ಅಪರಾಧ

ಬಂಗಾರ ಮನೆಯಲ್ಲಿ ಇದ್ದರೆ ಸಂಪತ್ತು.. ಮೈಮೇಲಿದ್ದರೆ ಆಪತ್ತು..

ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಲ್ಲಿ ನಿನ್ನೆ ಬೆಳಗ್ಗೆ 5 ರಿಂದ 6 ಗಂಟೆ ಸಮಯದಲ್ಲಿ ಚಿನ್ನದ ಸರ, ಕಿವಿಯೋಲೆ ಕಳ್ಳತನ ನಡೆದಿದೆ. ಬೆಳ್ಳಂ ಬೆಳಗ್ಗೆಯೇ ಎದ್ದು ಬಾಗಿಲಿಗೆ ನೀರನ್ನು ಹಾಕಿದ ಮಹಿಳೆ, ಮನೆ ಮುಂದೆ ರಂಗೋಲಿ ಹಾಕುತ್ತಿದ್ದರು. ಈ ವೇಳೆ ಮನೆ ಮುಂದೆ ಬಂದ ಕಳ್ಳರು, ಏಕಾಏಕಿ ಮಹಿಳೆಯ ಮುಖಕ್ಕೆ ಸ್ಪ್ರೇ ಹೊಡೆದ ಸರಗಳ್ಳರು, ನೀರಿನ ಸಂಪಿನ ಮೇಲೆ ತಳ್ಳಿದ್ರು. ಈ ವೇಳೆ ಮಹಿಳೆ ಪ್ರಜ್ಞೆತಪ್ತಿದ್ದಂತೆ ಚಿನ್ನದ ಸರ, ಕಿಯಲ್ಲಿದ್ದ ಬಂಗಾರದ ಓಲೆಯನ್ನು ಕದ್ದು ಎಸ್ಕೇಪ್‌ ಆಗಿದ್ದಾರೆ. ಆ ಗಲಾಟೆಯಲ್ಲಿ ನೆಲಕ್ಕೆ ಬಿದ್ದಾಗ ತಲೆಗೆ ತೀವ್ರವಾದ ಪೆಟ್ಟು ಆಗಿದ್ರಿಂದ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಚಿನ್ನದ ದರ ಏರಿಕೆ ಆಗುತ್ತಿದ್ದ ಹಾಗೆ ಬೆಂಗಳೂರು ಕ್ರೈಂ ಸಿಟಿಯಾಗಿ ಬದಲಾಗ್ತಿದೆ. ಕಳ್ಳ ಕಾಕರ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರಿ ಹೋಗ್ತಿದೆ. ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರಲ್ಲಿ ಕಳ್ಳತನದ ಜೊತೆಗೆ ಕೊಲೆಯನ್ನೂ ಮಾಡಿ ಹೋಗಿದ್ದಾರೆ. ಪಕ್ಕಾ ಪ್ಲ್ಯಾನ್‌ ಮಾಡ್ಕೊಂಡು ಬಂದಿದ್ದ ಖದೀಮರು, ಈ ಮಹಿಳೆಯನ್ನು ಟಾರ್ಗೆಟ್‌ ಮಾಡಿದ್ದಾರೆ. ಮುಖಕ್ಕೆ ಸ್ಪ್ರೇ ಹಾಕಿ ತಳ್ಳಿದ್ದಾರೆ. ಕಿವಿಯಲ್ಲಿದ್ದ ಓಲೆ ಜೊತೆಗೆ ಬಂಗಾರದ ಸರವನ್ನ ಕಿತ್ಕೊಂಡು ಹೋಗಿದ್ದಾರೆ. ಮಹಿಳೆ ಜ್ಯೋತಿ ಬಿದ್ದಲ್ಲೇ ಪ್ರಾಣ ಬಿಟ್ಟಿದ್ದು, ಗಂಡ ಎದ್ದು ಬಂದು ನೋಡಲೂ ಆಗದೆ ಪಕ್ಕದ ಮನೆಯವರನ್ನು ಕರೆಯುವಂತಾಗಿದೆ.

45 ವರ್ಷದ ಗೃಹಿಣಿ ಜ್ಯೋತಿ ಮನೆಯಿಂದ ಹೊರಬರುವುದನ್ನೇ ಕಾದು ಕುಳಿತ ಖದೀಮರು, ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದರು. 65 ಗ್ರಾಂ ಮಾಂಗಲ್ಯ ಸರ ಹಾಗೂ ಕಿವಿಯೋಲೆ ಕಸಿದು ಪರಾರಿ ಆಗಿದ್ದಾರೆ. ಈ ವೇಳೆ ಮನೆ ಬಾಗಿಲಿಗೆ ಚಿಲಕ ಹಾಕಿದ್ರಿಂದ ಮನೆಯವರು ಹೊರಕ್ಕೆ ಬರಲು ಸಾಧ್ಯವಾಗಿಲ್ಲ. ಕೊನೆಗೆ ಹೆಂಡತಿ ಜ್ಯೋತಿ ಒಳಕ್ಕೆ ಬರಲೇ ಇಲ್ವಲ್ಲ ಎಂದು ನೋಡಿದಾಗ, ಬಾಗಿಲು ಬಂದ್‌ ಆಗಿದೆ. ಆಗ ಪಕ್ಕದ ಮನೆಯರವನ್ನು ಕೂಗಿಕೊಂಡಿದ್ದಾರೆ. ಅವರು ಬಂದು ನೋಡವಷ್ಟರಲ್ಲಿ ತಲೆ ಗಂಭೀರ ಪೆಟ್ಟಾಗ ಸಾವಿಗೀಡಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸರು, ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಮತ್ತು ಸೋಕೋ ಟೀಮ್ ಸ್ಥಳಕ್ಕೆ ತೆರಳಿ ಮಹಜರ್ ನಡೆಸಿದೆ. ಪೆಪ್ಪರ್ ಸ್ಪ್ರೇ ಹೊಡೆದಿರೋದು ಗೊತ್ತಾಗಿದೆ. ಸರಗಳ್ಳರು ಬಂದು ಹೋಗಿರೋ ಬಗ್ಗೆ ತನಿಖೆ ಮಾಡಲಾಗ್ತಿದೆ. ಆದರೆ ಚಿನ್ನದ ದರ ಹೆಚ್ಚಾಗಿದೆ. ಚಿನ್ನದ ದರ ಗಗನಕ್ಕೇರುತ್ತಿದ್ದಂತೆ ಬಂಗಾರ ಕಳವು ಮಾಡುವ ಖದೀಮರ ಸಂಖ್ಯೆ ಹೆಚ್ಚಾಗಿದೆ. ಕನಿಷ್ಟ 10 ಗ್ರಾಂ ಚಿನ್ನ ಹಾಕೊಂಡು ಹೋದಾಗ ಕಳವು ಆದರೂ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತಿದೆ. ಖದೀಮರಿಗೆ ಖಾಕಿಪಡೆ ಬ್ರೇಕ್‌ ಹಾಕುವುದು ದೂರದ ಮಾತು. ಚಿನ್ನ ಹೋದರೆ ಹೋಗಲಿ, ಪ್ರಾಣವೇ ಹೋಗುತ್ತಿರುವುದು ಆತಂಕದ ವಿಚಾರ. ಚಿನ್ನ ಮನೆಯಲ್ಲಿದ್ದರೆ ಚೆನ್ನ. ಮೈಮೇಲಿದ್ದರೆ ಆಪತ್ತು. ವಿಚಾರ ಮಾಡಿ ನೋಡಿ.

Related posts

Drunk Drive; ಪೊಲೀಸರ ದಂಡ ದಾಹಕ್ಕೆ ಆಟೋ ಡ್ರೈವರ್​ ಆತ್ಮಹತ್ಯೆ ಯತ್ನ..

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

ಮದುವೆ ಆಗಿ 15 ದಿನ ಕಳೆದರೂ ಮಂಚಕ್ಕೆ ಬರಲಿಲ್ಲ.. ಕೊಂದೇ ಬಿಟ್ಟ ಗಂಡ..!!

Publicspot

ಬಡ್ಡಿ ಕೊಡೋಕೆ ಆಗದೆ ಕೊಲೆ ಮಾಡೋಕೆ ಸ್ಕೆಚ್​.. ಆರೋಪಿಗಳು ಸಿಕ್ಕಿ ಬಿದ್ದಿದ್ಹೇಗೆ..?

Publicspot

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

Publicspot