The Public Spot
ಅಪರಾಧ

ಲಿವ್‌ ಇನ್‌ ರಿಲೇಷನ್‌ಶಿಪ್‌‌‌ನಲ್ಲಿ ಯುವತಿಯನ್ನು ಕೊಂದನಾ ಅಂಕಲ್‌..?

ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿ ಜೋಡಿ ನಡುವೆ ಜಗಳ ಉಂಟಾಗಿದ್ದು, ಯುವತಿಯನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 23 ವರ್ಷದ ರಂಜಿತಾ ಕೊಲೆಯಾದ ಯುವತಿ. ಅಯ್ಯಪ್ಪ ಎಂಬಾತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಬ್ಬರೂ ಕೂಡ ಕೊಡಗು ಮೂಲದವರಾಗಿದ್ದು, ಮದುವೆಯಾಗಿ ಪತ್ನಿ ಜೊತೆ ಜಗಳವಾಡಿಕೊಂಡಿದ್ದ ಅಯ್ಯಪ್ಪ ಪತ್ನಿಯಿಂದ ದೂರ ಇದ್ದನು. ಪತ್ನಿಯಿಂದ ದೂರವಾದ ಬಳಿಕ ಅದೇ ಊರಿನ ರಂಜಿತಾಳನ್ನು ಪ್ರೀತಿ ಮಾಡಿದ್ದನು. ಬೇರೆ ಜಾತಿ ಆಗಿದ್ರೂ ಆಕೆಯನ್ನ ಮದುವೆ ಆಗುವುದಾಗಿ ಕೇಳಿದ್ದ ಅಯ್ಯಪ್ಪ, ಯುವತಿ ಮನೆಯವರಿಗೂ ಒಪ್ಪಿಸಿ ಆಕೆಯನ್ನ ಬೆಂಗಳೂರಿಗೆ ಕರೆ ತಂದಿದ್ದ ಎನ್ನಲಾಗಿದೆ.

ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್‌ವೈಸರ್‌ ಆಗಿದ್ದ ಅಯ್ಯಪ್ಪ, ವರ್ತೂರು ಠಾಣಾ ವ್ಯಾಪ್ತಿಯಲ್ಲಿ ರಂಜಿತಾಳ ಜೊತೆಗೆ ಜೀವನ ಮಾಡ್ತಿದ್ದ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾಗಿ ರಂಜಿತಾ ಪೋಷಕರ ಬಳಿ ಹೇಳಿಕೊಂಡಿದ್ದಳಂತೆ. ಅದಾದ ಎರಡ್ಮೂರು ದಿನದ ಬಳಿಕ ರಂಜಿತಾ ನೇಣಿಗೆ ಶರಣಾಗಿದ್ದಾಳೆ ಎಂದು ಅಯ್ಯಪ್ಪ ಕರೆ ಮಾಡಿ ಹೇಳಿದ್ನಂತೆ. ಕೊಲೆ ಆಗಿರುವ ಬಗ್ಗೆ ಅನುಮಾನಗೊಂಡ ರಂಜಿತಾ ಕುಟುಂಬಸ್ಥರು ದೂರು ನೀಡಿದ್ದಾರೆ. ತನಿಖೆ ವೇಳೆ ಕೇಬಲ್ ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರೋದು ಪತ್ತೆಯಾಗಿದ್ದು, ಸದ್ಯ ಆರೋಪಿಯನ್ನ ಬಂಧಿಸಿರುವ ವರ್ತೂರು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ರಂಜಿತಾ ಮೃತದೇಹವನ್ನು ಕೊಡಗಿನ ಪೊನ್ನಂಪೇಟೆಗೆ ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ.

ಯುವತಿ ರಂಜಿತಾ ಸಾವಿನ ಬಗ್ಗೆ ವೈಟ್ ಫಿಲ್ಡ್ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಪ್ರಕರಣ ನಡೆದಿದೆ. ಪ್ರಜ್ಞೆ ತಪ್ಪಿದ್ದ ಮಹಿಳೆಯನ್ನ ಆಸ್ಪತ್ರೆಗೆ ಸೇರಿಸಿದ್ದಾಗ ಮೃತಪಟ್ಟಿರೋದು ಗೊತ್ತಾಗಿತ್ತು. ನಂತರ ಮಹಿಳೆ ತಾಯಿ ವರ್ತೂರು ಠಾಣೆಗೆ ದೂರು ನೀಡಿದ್ದಾರೆ.. ಮದುವೆ ಆಗೋದಾಗಿ ವ್ಯಕ್ತಿ ಜೊತೆ ವಾಸ ಇದ್ರು. ಜಗಳ ಮಾಡಿ ಕೊಲೆ ಮಾಡಿದ್ರು, ನಂತರ ಆತ್ಮಹತ್ಯೆ ಅಂತಾ ಕಥೆ ಕಟ್ಟಿದ್ರು ಅಂತಾ ದೂರು ನೀಡಿದ್ದಾರೆ.. ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಆರೋಪಿತ ವ್ಯಕ್ತಿ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡ್ತಿದ್ದ. ಮದುವೆ ಮಾಡ್ಕೋತೀನಿ ಅಂತಾ ಆಕೆಯನ್ನ ಕರೆತಂದಿದ್ದ.. ಆತನಿಗೆ ಮದುವೆ ಆಗಿ ಹೆಂಡತಿ ದೂರ ಆಗಿದ್ರು. ಆ ನಂತರ ಈಕೆಯ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದ. ಒಂದು ಎಲೆಕ್ಟ್ರಿಕ್ ವೈಯರ್‌ನಿಂದ ಕುತ್ತಿಗೆ ಸುತ್ತಿ ಕೊಲೆ ಮಾಡಿದ್ದ. ಆ ನಂತರ ಅದೇ ವೈಯರ್‌ನಿಂದ ಆತ್ಮಹತ್ಯೆ ಮಾಡ್ಕೊಂಡಿರೋ ಥರ ಹೇಳಿದ್ದ ಎಂದಿದ್ದಾರೆ.

ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಜೊತೆಗೆ ಜಗಳವಾಡಿ ಕೊಲೆ ಮಾಡಿದ ಪ್ರಕರಣದ ಬಗ್ಗೆ ಮನೆ ಮಾಲೀಕ ಗೋಪಾಲ್ ಮಾತನಾಡಿ, 2 ತಿಂಗಳ ಹಿಂದೆ ಇಬ್ಬರು ಬಂದಿದ್ರು. ಮದುವೆ ಆಗಿರೋದಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ. ಆತ ಡ್ರೈ ಫ್ರೂಟ್ಸ್ ಅಂಗಡಿ, ಈಕೆ ಡಿ ಮಾರ್ಟ್‌ನಲ್ಲಿ ಕೆಲಸ ಮಾಡ್ತಿದ್ರು. ಆಗಾಗ ಇಬ್ಬರ ಮಧ್ಯೆ ಜಗಳ ಇತ್ತು‌. ಆಕೆ ಒಮ್ಮೆ ಓಡಿ ಹೋಗ್ತಿದ್ದಾಗ ಈತ ವಾಪಸ್‌ ಕರ್ಕೊಂಡ ಬಂದಿದ್ದ. ಮೊನ್ನೆ ಮಧ್ಯರಾತ್ರಿ ಬಂದು ಮನೆ ಬಾಗಿಲು ತಟ್ಟಿ ಮನೆಗೆ ಕರ್ಕೊಂಡು ಹೋದ. ಮನೆಯಲ್ಲಿ ಆಕೆ ಹಾಸಿಗೆ ಮೇಲೆ ಬಿದ್ದಿದ್ದಳು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನೇಣು ಹಾಕಿಕೊಂಡಿದ್ದಾಳೆ ಅಂತ ಹೇಳಿದ್ದನು. ಆದ್ರೆ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಅಂತ ಹೇಳಿದ್ರು. ಸೂಸೈಡ್ ಮಾಡ್ಕೊಂಡಿದ್ದಾಳೆ ಅಂತ ನಾಟಕ ಮಾಡಿದ್ದಾನೆ. ಫ್ಯಾನ್‌ಗೆ ನೇಣು ಬಿಗಿದುಕೊಂಡಿರೋ ರೀತಿ ಸೃಷ್ಡಿ ಮಾಡಿದ್ದ. ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಆತನ ನಾಟಕ ಗೊತ್ತಾಗಿದೆ ಎಂದಿದ್ದಾರೆ.

Related posts

Second Marriage; ಮದುವೆ ಆದ್ಮೇಲೆ ಗಂಡನೇ ಪರದೈವ ಅನ್ನೋ ನಂಬಿಕೆ ಕಳೆದುಕೊಂಡಿದ್ಯಾ..?

Publicspot

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

Darshan Bail Cancel, What Next: ಜಾಮೀನು ರದ್ದಾದ ಬಳಿಕ ಮುಂದೇನು..? ಅರೆಸ್ಟ್​ ಆಗ್ತಾರಾ ದರ್ಶನ್​..?

ಯಶವಂತಿ

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot

Lover Good Husband Bad; ಆನೇಕಲ್​ ಆಂಟಿ ವಾಪಸ್​ ಬಂದು ಗೊಳೋ ಅಂತಿರೋದ್ಯಾಕೆ..?

Publicspot