The Public Spot
Uncategorizedಸಿನಿಮಾ

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

ಸ್ಯಾಂಡಲ್‌ವುಡ್‌ನಲ್ಲಿ ಟೀಸರ್‌ನಿಂದಲೇ ವಿವಾದ ಸೃಷ್ಟಿಸಿದ್ದ ಬಾಸ್ ಸಿನಿಮಾಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ರೇಣುಕಾಸ್ವಾಮಿ ಕೊಲೆ‌ ಕೇಸ್ ಆಧರಿತ ಚಿತ್ರ ಎನ್ನುವ ರೀತಿಯಲ್ಲಿ ಬಿಂಬಿತವಾಗಿದೆ. ಹೀಗಾಗಿ ಬಾಸ್‌‌ ಚಿತ್ರದ ರಿಲೀಸ್‌ಗೆ ತಡೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 17ನೇ ಸಿಟಿ ಸಿವಿಲ್ ಕೋರ್ಟ್‌ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ವಾದವನ್ನು ಸದ್ಯಕ್ಕೆ ಮಾನ್ಯ ಮಾಡಿದೆ. ಹೀಗಾಗಿ ಅರ್ಜಿಯಲ್ಲಿ ಕೇಳಿಕೊಂಡಿದ್ದ ಪ್ರಾಥನೆಗೆ ಅಸ್ತು ಎಂದಿದೆ.

ದರ್ಶನ್ ಹಾಗೂ ತಮ್ಮ ಜೀವನದ ಖಾಸಗಿ ಜೀವನವನ್ನು ಆಧರಿಸಿ ಬಾಸ್‌ ಚಿತ್ರ ನಿರ್ಮಾಣ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಬಾಸ್‌ ಸಿನಿಮಾ ಚಿತ್ರೀಕರಿಸಲಾಗಿದೆ.. ಪರೋಕ್ಷವಾಗಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನ ಪ್ರಸ್ತಾಪಿಸಿ ಸಿನಿಮಾ ಶೂಟಿಂಗ್‌ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ಯ ಕೋರ್ಟ್‌ನಲ್ಲಿ ಟ್ರಯಲ್ ಆರಂಭ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆದರೆ ದರ್ಶನ್ ಕುಟುಂಬದ ಗೌರವಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ ಎಂದು ವಕೀಲರು ವಾದಿಸಿದ್ದಾರೆ.

ಸಿನಿಮಾ ಪ್ರಚಾರ, ಬಿಡುಗಡೆ, ಹಂಚಿಕೆ, ಓಟಿಟಿ ಸ್ಟ್ರೀಮಿಂಗ್ ಸೇರಿದಂತೆ ಮಾಧ್ಯಮಗೋಷ್ಠಿ, ಸಂದರ್ಶನ, ಪೋಸ್ಟರ್, ಟೀಸರ್ ಯಾವುದನ್ನೂ ಬಿಡುಗಡೆ ಮಾಡುವಂತಿಲ್ಲ ಎಂದು ಕೋರ್ಟ್‌ ಕಟ್ಟಪ್ಪಣೆ ವಿಧಿಸಿದೆ. ಮುಂದಿನ ವಿಚಾರಣೆ ವರೆಗೂ ಯಾವುದನ್ನೂ ಮಾಡುವಂತಿಲ್ಲ ಎಂದು ಆದೇಶ ಮಾಡಿರುವ ಕೋರ್ಟ್‌, ಪ್ರೊಡಕ್ಷನ್ ಕಂಪನಿಗೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ, ಸೋಷಿಯಲ್ ಮೀಡಿಯಾ ಕಂಪನಿಗಳು, ಖಾಸಗಿ ಚಾನೆಲ್‌ಗಳಿಗೂ ಸಮನ್ಸ್ ಮತ್ತು ನೋಟಿಸ್ ಜಾರಿ ಮಾಡಿದೆ.

ಏಪ್ರಿಲ್ 14ರಂದು ಬಾಸ್‌ ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ. ಹೀಗಾಗಿ ಚಿತ್ರತಂಡ ಸಿನಿಮಾ ಬಿಡುಗಡೆ ಬಗ್ಗೆ ಯಾವ ನಿರ್ಧಾರ ಮಾಡ್ತಾರೆ ಅನ್ನೋ ಕೌತುಕ ಸೃಷ್ಟಿಯಾಗಿದೆ. ಇದೀಗ ನ್ಯಾಯಮೂರ್ತಿ ಎಂ ಅನಿತಾ, ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಸಿನಿಮಾ ತೆಗೆದಿರುವ ಚಿತ್ರತಂಡದ ವಾದವನ್ನು ಆಲಿಸಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತೆರವು ಮಾಡಿಸ್ತಾರಾ..? ಅನ್ನೋದನ್ನು ಕಾದು ನೋಡ್ಬೇಕು.

Related posts

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

Publicspot