The Public Spot
ರಾಜ್ಯ

ರಾಜಕೀಯ ಬಿಟ್ಟು ಅಭಿವೃದ್ಧಿಗೆ ಆದ್ಯತೆ ಕೊಡುತ್ತಾ ರಾಜ್ಯ ಸರ್ಕಾರ..?

ಮಂಡ್ಯ ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ವಿಚಾರವಾಗಿ ಇಂದು ಮಹತ್ವದ ಸಭೆ ನಿಗದಿಯಾಗಿದೆ. ಕೇಂದ್ರ ಕೈಗಾರಿಕಾ ಸಚಿವರಾಗಿರುವ H.D ಕುಮಾರಸ್ವಾಮಿ, ತಾವು ಲೋಕಸಭೆಗೆ ಆಯ್ಕೆ ಆಗಿರುವ ಮಂಡ್ಯ ಜಿಲ್ಲೆಗೆ ಬೃಹತ್‌‌ ಹೈಗಾರಿಕೆಗಳನ್ನು ತರುವ ಮೂಲಕ ಜಿಲ್ಲೆಯ ಜನರ ಋಣ ತೀರಿಸಬೇಕು. ಆದರೆ ಇಲ್ಲಿನ ಕಾಂಗ್ರೆಸ್‌ ಸರ್ಕಾರ ಸಹಕಾರ ನೀಡ್ತಿಲ್ಲ. ಸೂಕ್ತ ಭೂಮಿಯನ್ನೂ ಕೊಡ್ತಿಲ್ಲ ಎಂದು ಆರೋಪ ಮಾಡಿದ್ದರು. ಇದೀಗ ರಾಜ್ಯ ಕೈಗಾರಿಕ ಸಚಿವರು ಸಭೆ ಕರೆದಿದ್ದು, ಎಲ್ಲಾ ಗೊಂದಲಗಳಿಗೂ ಇತಿಶ್ರೀ ಹಾಡುವ ಸಾಧ್ಯತೆಯಿದೆ.

ತಮ್ಮನು ಗೆಲ್ಲಿಸುವ ಮೂಲಕ ಮಂಡ್ಯದ ಜನರು ಕೇಂದ್ರ ಸಚಿವನಾಗುವ ಅವಕಾಶ ಮಾಡಿಕೊಟ್ಟಿದ್ದಾರೆ. ಜಿಲ್ಲೆಯ ಯುವ ಜನತೆ ಉದ್ಯೋಗ ಹರಸಿ ಬೆಂಗಳೂರಿಗೆ ಹೋಗುವ ಬದಲು ಜಿಲ್ಲೆಯಲ್ಲೇ ಕೆಲಸ ಸಿಗುವಂತೆ ಮಾಡಬೇಕು. ಹೀಗಾಗಿ ನಾಗಮಂಗಲದ ಬೆಳ್ಳೂರು ಬಳಿ ಸರ್ಕಾರ ಭೂಮಿ ಕೊಡಬೇಕು. ಇಂಡಸ್ಟ್ರಿಯಲ್‌ ಏರಿಯಾ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹ ಮಾಡಿದ್ದರು. ಇಂದು ವಿಧಾನಸೌಧದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕೈಗಾರಿಕಾ ಸಚಿವರು ಸಭೆ ನಡೆಸಲಿದ್ದು, ಈ ಸಭೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಮಂಡ್ಯ ಶಾಸಕ ಗಣಿಗ ರವಿಕುಮಾರ್‌, ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಹಕಾರ ಕೊಡ್ತಿಲ್ಲ ಅನ್ನೋ ಆರೋಪವಿದೆ. ಸೋಮವಾರ ಕರ್ನಾಟಕದ ಕೈಗಾರಿಕಾ ಸಚಿವರಾದ‌‌‌ ಎಂ.ಬಿ.ಪಾಟೀಲ್ ಅವರು ಸಭೆ ಕರೆದಿದ್ದು, ಕೇಂದ್ರ ಸರ್ಕಾರದ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದೇವೆ. ಇಷ್ಟು ದಿನ ರಾಜ್ಯ ಸರ್ಕಾರ ಸಹಕಾರ ಕೊಡ್ತಿಲ್ಲ ಅನ್ನೋ ಆರೋಪಕ್ಕೆ ಇಂದು ಫುಲ್‌ ಸ್ಟಾಪ್‌ ಬೀಳಲಿದೆ ಎಂದಿದ್ದಾರೆ. ಜೊತೆಗೆ ನಾವು ಕೈಗಾರಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದಿದ್ದಾರೆ.

ರಾಜಕೀಯ ಕಾರಣಕ್ಕಾಗಿ ಅದರಲ್ಲೂ ಮಂಡ್ಯದಲ್ಲಿ ಅಭಿವೃದ್ಧಿ ಆದರೆ ಜನ ಸಂಪೂರ್ಣವಾಗಿ ಜೆಡಿಎಸ್‌ ಬೆಂಬಲಿಸುವ ಸಾಧ್ಯತೆ ಇದೆ ಅನ್ನೋ ಕಾರಣಕ್ಕಾಗಿ ಸಹಕಾರ ಕೊಡ್ತಿಲ್ಲ ಅನ್ನೋ ಮಾತಿದೆ. ಆದರೆ ನಾಗಮಂಗಲದ ಬೆಳ್ಳೂರು ಕ್ರಾಸ್‌ ಬಳಿ ಕೈಗಾರಿಕಾ ವಲಯ ಸ್ಥಾಪನೆ ಆದರೆ ಸುತ್ತಮುತ್ತಲ ನಾಲ್ಕಾರು ಜಿಲ್ಲೆಯ ಯುವ ಜನತೆಗೆ ಸಹಾಯ ಆಗಲಿದೆ ಎನ್ನಬಹುದು. ಬಿ.ಜಿ.ನಗರದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ಆದರೆ ಮಂಡ್ಯ ಜಿಲ್ಲೆ ಜೊತೆಗೆ ಹಾಸನ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ. ಈ ಮೂಲಕ ಇಲ್ಲಿನ ಮೂಲಭೂತ ಸೌಕರ್ಯಗಳೂ ಹೆಚ್ಚಾಗಲಿವೆ. ಜೊತೆಗೆ ಇಷ್ಟೂ ಜಿಲ್ಲೆಯ ಜನರು ಬೆಂಗಳೂರಿಗೆ ಬರುವುದು ತಪ್ಪಲಿದೆ ಎನ್ನಬಹುದು.

Related posts

ಬಗೆಹರಿಯಿತೇ ಬಾನು ಆಯ್ಕೆ ವಿವಾದ..? ಅರಮನೆ ಸಂದೇಶ ಏನು..?

Publicspot

ಆಣೆ ಪ್ರಮಾಣವೋ.. ಕಾಂಗ್ರೆಸ್‌ ಪಾಲಿಗೆ ಬಿಡದಿ ಅನ್ನೋದು ಶಾಪವೋ..?

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot

No Rain Only Flood; ಉತ್ತರ ಕರ್ನಾಟಕದಲ್ಲಿ ಮಳೆಯಿಲ್ಲ.. ಪ್ರವಾಹ ಮಾತ್ರ.. ಕಾರಣ ನಮ್ಮದೇ ಸರ್ಕಾರ..!!

Publicspot

GBA ನಿರ್ಲಕ್ಷ್ಯ.. ಮರ ಬಿದ್ದು ಯುವತಿ ಸಾವು.. ಮೂವರ ಸ್ಥಿತಿ ಗಂಭೀರ..

Publicspot

ರಾಜ್ಯದಲ್ಲಿ ವರುಣಾರ್ಭಟ ಹೆಚ್ಚಾಗುತ್ತೆ.. ಅಪಾಯವೂ ಕಾದಿದೆ..

Publicspot