The Public Spot
ಅಪರಾಧ

ದುಷ್ಚಟಕ್ಕೆ ದಾಸರಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿದ್ದ ಗೆಳೆಯರು ಅಂದರ್!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿರುವ ಘಟನೆ ನಡೆದಿದೆ. ಅದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕಿಡ್ನ್ಯಾಪ್​ ಮಾಡಿದ ಆರೋಪಿಗಳು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿದ ಎರಡು ಗಂಟೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳ ಬಳಿ ನಕಲಿ ಮೆಟಲ್ ಗನ್, ಚಾಕು ಜಪ್ತಿ ಮಾಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಒಂದು ಕಾರನ್ನೂ ವಶಕ್ಕೆ ಪಡೆದಿದ್ದಾರೆ.

ಬಿಹಾರ, ಜೇಮ್ ಶೆಡ್ ಪುರ, ಕೇರಳಂ, ಬೆಂಗಳೂರು ಮೂಲದ ವಿದ್ಯಾರ್ಥಿಗಳನ್ನು ಬಂಧನ ಮಾಡಲಾಗಿದೆ. ಐಷಾರಾಮಿ ಜೀವನ ನಡೆಸಲು ಹಣದ ಮೂಲ ಹುಡುಕುತ್ತಿದ್ದ ವಿದ್ಯಾರ್ಥಿ ಗ್ಯಾಂಗ್. ಹಣ ಮಾಡಲು ಜೊತೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನೇ ಕಿಡ್ನ್ಯಾಪ್​ ಮಾಡಲು ಈ ವಿದ್ಯಾರ್ಥಿಗಳ ಗ್ಯಾಂಗ್​​ ಪ್ಲ್ಯಾನ್ ಮಾಡಿತ್ತು. ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಒಡಿಶಾ ಮೂಲದ ವಿದ್ಯಾರ್ಥಿಯನ್ನು ಅಪಹರಿಸಿದ್ದ ನಾಲ್ವರು ಹುಡುಗರು, ಹಣಕ್ಕೆ ಒತ್ತಾಯ ಮಾಡಿದ್ದರು.

ಹಾಸ್ಟೆಲ್​ನಿಂದ ಹೊರಗೆ ಕರೆಸಿ ಕಾರಿನಲ್ಲಿ ಕೂರಿಸಿಕೊಂಡು ಕಿಡ್ನ್ಯಾಪ್​ ಮಾಡಿದ್ದರು. ಆರೋಪಿಗಳಲ್ಲಿ ಒಬ್ಬನಾದ ವಿದ್ಯಾರ್ಥಿಯ ರೂಮ್​ಗೆ ಕರೆದುಕೊಂಡು ಹೋಗಿದ್ದ ಗ್ಯಾಂಗ್, ಕಿಡ್ನ್ಯಾಪ್​ ಆದವನ ಸ್ನೇಹಿತರಿಗೆ ಫೋನ್ ಮಾಡಿ 50 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಆತಂಕಕ್ಕೆ ಒಳಗಾಗಿದ್ದ ಸ್ನೇಹಿತರು, 10 ಸಾವಿರ ಹಣ ಕಳಿಸಿದ್ದರು. ಆಗ ಪೊಲೀಸರು ಲೊಕೇಶನ್ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದರು. 112 ಕಾಲ್​ ಸೆಂಟರ್​​ಗೆ ಬಂದ ದೂರನ್ನು ಪಡೆದು ಕಿಡ್ನ್ಯಾಪ್ ಆದವನನ್ನು ಪತ್ತೆ ಮಾಡಲಾಗಿದೆ.

ಕಿಡ್ನ್ಯಾಪ್​ ಮಾಡಿ ಹಣಕ್ಕೆ ಡಿಮ್ಯಾಂಡ್​ ಮಾಡಿದ ದೂರು ಪೊಲೀಸರಿಗೆ ತಲುಪುತ್ತಿದ್ದ ಹಾಗೆ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದ ಮಡಿವಾಳ ಪೊಲೀಸರು, ಕೇವಲ ಎರಡು ಗಂಟೆಯಲ್ಲಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಆರೋಪಿಗಳ ಮಾಹಿತಿ ತಿಳಿಯುತ್ತಿದ್ದಂತೆ ಲೊಕೇಷನ್ ಆಧರಿಸಿ ಪೊಲೀಸರು ಬಂಧನ ಮಾಡಿದ್ದಾರೆ. ಒಂದು ಸಾವಿರ, ಎರಡು ಸಾವಿರ ಹೀಗೆ ಹಣವನ್ನ ಸ್ನೇಹಿತರ ಕಡೆಯಿಂದ ಹಾಕಿಸ್ತಿದ್ದರು. ಈ ಮೂಲಕ ಆರೋಪಿಗಳ ಮೊಬೈಲ್ ಆಕ್ಟೀವ್ ಇರುವಂತೆ ನೋಡಿಕೊಂಡಿದ್ದರು. ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿ ವಿದ್ಯಾರ್ಥಿಯನ್ನು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Related posts

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

Dharmasthala SIT: ಶೀಘ್ರವೇ ಮಹೇಶ್​ ಶೆಟ್ಟಿ ತಿಮರೋಡಿ ಬಂಧನ ಆಗುತ್ತಾ..?

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

Publicspot

ಗಿಳಿ ಹಿಡಿಯಲು ಹೋದ ಯುವಕ, ಕರೆಂಟ್​ ಶಾಕ್​ನಿಂದ ಸಾವು..!

Publicspot

ಬೀದರ್​ನಲ್ಲಿ ಕರ್ನಾಟಕ ಪೊಲೀಸ್​ ಮೇಲೆ ಹಲ್ಲೆ.. ಕಾರಣ ಏನು..?

Publicspot