The Public Spot
ರಾಜಕೀಯ

ಮಧ್ಯರಾತ್ರಿ ಮೀಟಿಂಗ್ ಮಾಡಿದ ಸಿದ್ದರಾಮಯ್ಯ ನಾಳೆ ರಾಜೀನಾಮೆ ಕೊಡ್ತಾರಾ..?

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ದೆಹಲಿ ಅಂಗಳದಿಂದ ಹೊರಬಿದ್ದಿದೆ. ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ರಾಜೀನಾಮೆ ನೀಡಲು ಸಿಎಂ ಸಿದ್ದರಾಮಯ್ಯ ಮೊದಲು ನಿರಾಕರಿಸಿದರೂ ಆ ಬಳಿಕ ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್​ ಗಾಂಧಿ ಬಳಿ 2-3 ದಿನಗಳ ಟೈಮ್​ ಕೇಳಿದ್ದು, ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ಯಾವುದೇ ಕಾರ್ಯಕ್ರಮ ಇಟ್ಟುಕೊಳ್ಳದ ಸಿಎಂ, ತಮ್ಮ ಬಳಿ ಇರುವ ಫೈಲ್‌ಗಳನ್ನು ಕ್ಲಿಯರ್‌ ಮಾಡಲಿದ್ದಾರೆ ಎನ್ನಲಾಗ್ತಿದೆ..

ತನ್ನ ಆಪ್ತರೊಂದಿಗೆ ಚರ್ಚಿಸಲಿರುವ ಸಿಎಂ ಸಿದ್ದರಾಮಯ್ಯ, ನಾಳೆ ಬೆಳಗ್ಗೆ ಸಚಿವರುಗಳಿಗೆ ಬ್ರೇಕ್‌ಫಾಸ್ಟ್‌ ಆಯೋಜಿಸಿದ್ದಾರೆ. ಆ ಬಳಿಕ ವಿಧಾನಸೌಧದಲ್ಲಿ ಕ್ಯಾಬಿನೆಟ್‌‌ ಸಭೆ ನಡೆಸಲಿದ್ದು, ಕಟ್ಟ ಕಡೆಯ ಕ್ಯಾಬಿನೆಟ್‌ ಬಳಿಕ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೊನೆಗೂ ಡಿ.ಕೆ ಶಿವಕುಮಾರ್​, ಸಿಎಂ ಆಗುವ ಕನಸು ನನಸು ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ಜೋರಾಗಿ ಚರ್ಚೆ ಆಗ್ತಿದೆ. ಮೊದಲಿಗೆ ರಾಹುಲ್‌ ಗಾಂಧಿ ಬಳಿ ರಾಜೀನಾಮೆಗೆ ನಿರಾಕರಿಸಿದ್ದ ಸಿದ್ದರಾಮಯ್ಯ, ಅವರನ್ನು ಪ್ರಿಯಾಂಕಾ ಗಾಂಧಿ ಮೂಲಕ ಮನವೊಲಿಸಲಾಯ್ತು ಎನ್ನಲಾಗಿದೆ.

ಒಂದು ವೇಳೆ ಡಿ.ಕೆ. ಶಿವಕುಮಾರ್‌ ಸಿಎಂ ಆಗುವುದೇ ಆದರೆ ಸಚಿವ ಸಂಪುಟದಲ್ಲಿ ನಾನು ಹೇಳಿದ 20 ಜನರು ಸಚಿವರಾಗಬೇಕು. ಅದರಲ್ಲಿ ನಾಲ್ವರನ್ನು ಡಿಸಿಎಂಗಳಾಗಿ ಮಾಡಬೇಕು ಎಂದು ಷರತ್ತು ಹಾಕಿದ ಸಿದ್ದರಾಮಯ್ಯ, ಹೈಕಮಾಂಡ್‌ನಿಂದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಯತೀಂದ್ರ ಸಿದ್ದರಾಮಯ್ಯಗೆ ಪ್ರಮುಖ ಖಾತೆ ಜೊತೆಗೆ ಡಿಸಿಎಂ ಪೋಸ್ಟ್‌ ಕೂಡ ನೀಡಲು ಮಾತುಕತೆ ಆಗಿದೆ. ಇದರ ಜೊತೆಗೆ ರಾಜ್ಯಸಭೆಗೆ ಸ್ಪರ್ಧೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಆಫರ್‌ ನೀಡಿದ್ದು, ರಾಜ್ಯಸಭೆಗೆ ಆಯ್ಕೆ ಆಗಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವ ಮೊದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ನೂತನ ಕೆಪಿಸಿಸಿ ಸಾರತಿಯಾಗಿ ಸತೀಶ್ ಜಾರಕಿಹೊಳಿಗೆ ಪಟ್ಟ ಕಟ್ಟುವ ಸಾಧ್ಯತೆಯಿದೆ. ಈಗಿರುವ ಸಚಿವ ಸ್ಥಾನದ ಜೊತೆ ಜೊತೆಗೆ ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಒಲಿಯಲಿದ್ದು, ವಾಲ್ಮೀಕಿ ನಾಯಕ ಸತೀಶ್‌ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಶುಕ್ರವಾರದ ವೇಳೆ ಮಹತ್ವದ ಘಟ್ಟ ತಲುಪಲಿದ್ದು, ರಾಜ್ಯ ಕಾಂಗ್ರೆಸ್‌‌ ಉಸ್ತುವಾರಿ ನಾಯಕರು ಇಂದು ಅಥವಾ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಒಟ್ಟಾರೆ ಡಿ.ಕೆ ಶಿವಕುಮಾರ್‌ ಸಿಎಂ ಆಗುವುದು ಬಹುತೇಕ ನಿಶ್ಚಯ ಆಗಿದ್ದು, ದಿನಾಂಕ ನಿಗದಿ ಆಗಬೇಕಿದೆ.

ನಿನ್ನೆ ದೆಹಲಿಯಿಂದ ವಾಪಸ್ ಆದ ಸಿದ್ದರಾಮಯ್ಯ ಆಪ್ತರ ಸಭೆ ನಡೆಸಿದ್ದು ದೆಹಲಿಯಲ್ಲಿ ಇರುವ ಡಿ.ಕೆ ಶಿವಕುಮಾರ್ ಕಂಗೆಡುವಂತೆ ಮಾಡಿದೆ. ಇವತ್ತು ಬೆಂಗಳೂರಿಗೆ ವಾಪಸ್ ಆಗಿ GBA ಸಭೆ ನಡೆಸಬೇಕಿದ್ದ ಡಿಸಿಎಂ ಇಂದು ದೆಹಲಿಯಲ್ಲೇ ಉಳಿದು ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾಂಗ್ರೆಸ್‌ನ ಹೈಕಮಾಂಡ್ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂದರೂ ಸಿದ್ದರಾಮಯ್ಯ ಒಪ್ಪಿಗೆ ಕೊಡ್ತಾರಾ..? ಒಪ್ಪಿಗೆ ಕೊಟ್ಟರೂ ಆಡಳಿತ ಪೂರೈಸಲು ಬಿಡ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.

Related posts

ಚಿಕ್ಕಮಗಳೂರಿನ ಶೃಂಗೇರಿ ಶಾಸಕರು ಯಾರು..? ಮರ ಮತ ಎಣಿಕೆ ಏನಾಯ್ತು..?

Publicspot

ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಸೋಲಿಸಿ ಅಂದ್ರಾ ಸಿಎಂ ಸಿದ್ದರಾಮಯ್ಯ ..?

Publicspot

ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಒತ್ತಡ.. ಹೈಕಮಾಂಡ್​ ಹಾದಿ ಏನು..?

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

ಇಂಧನ ಉಳಿಸುವ ಬಗ್ಗೆ ಬಿಜೆಪಿ ನಾಟಕ.. ಕಾಂಗ್ರೆಸ್ ಕಟು ಟೀಕೆ..

Publicspot

Congress and Kannadigas; ಕನ್ನಡಿಗರ ಮೇಲಿನ ಪ್ರೀತಿಗಿಂತಾ ಅನ್ಯರೇ ಕಾಂಗ್ರೆಸ್ಗೆ ಮುಖ್ಯನಾ..?

Publicspot