September 14, 2026
The Public Spot
ರಾಜಕೀಯ

RSS ನೋಂದಣಿ ಮಾಡಿಸುವ ವಿಚಾರ.. ಹೋಂ ಮಿನಿಸ್ಟರ್‌ ಮಾತಿಗೆ ಆಕ್ರೋಶ..

ರಾಜ್ಯದಲ್ಲಿ RSS ರಿಜಿಸ್ಟ್ರೇಷನ್ ಮಾಡುವ ವಿಚಾರ ಪರ ವಿರೋಧ ವಾಕ್ಸಮರಕ್ಕೆ ಕಾರಣವಾಗಿದೆ. ಬೃಹತ್‌ ಕೈಗಾರಿಕಾ‌ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಒಂದು ಸಣ್ಣ ಕಿರಾಣಿ ಅಂಗಡಿ ಮಾಡಿದರೂ ರಿಜಿಸ್ಟ್ರೇಷನ್ ಮಾಡಿ ಅಂತಿರಾ, ಒಂದು ಸೈಕಲ್ ಪಂಕ್ಚರ್ ಅಂಗಡಿ ಮಾಡಿದ್ರೂ ರಿಜಿಸ್ಟ್ರೇಷನ್ ಮಾಡಿ ಅಂತಿರಾ, ಅಷ್ಟು ದೊಡ್ಡ ಸಂಸ್ಥೆ ರಿಜಿಸ್ಟರ್ ಮಾಡಬೇಕು ಅಲ್ವ..? ಅಂತಾ ಪ್ರಶ್ನಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಅಲ್ವ..? ಅದು ಯಾಕೆ ನೀವು ಬೇರೆ ತರ ನೋಡ್ತೀರಾ..? ಇವರಿಗೆ ರಿಜಿಸ್ಟ್ರೇಷನ್‌ ಬೇಡ ಅನ್ನೋದಾದರೆ ಸಂವಿಧಾನ, ಕಾನೂನು, ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

RSS ದಾಖಲೆಗಳನ್ನು ಸಿದ್ದ ಮಾಡಿಕೊಳ್ಳಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ನೆಹರು ಈಗ ಇಲ್ಲ. RSS ಆಗಿನಿಂದ ಈಗಿನವರೆಗೂ‌ ಇದೆ. ಭಾರತ, RSS ಈಗಲೂ ಇದೆ. ನಿಮ್ಮ ತಂದೆ ಕೈಯಲ್ಲೇ ಏನೂ ಆಗಲಿಲ್ಲ. ನಿಮ್ಮ ಕೈಯಲ್ಲಿ ಏನಾಗುತ್ತದೆ ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ. ನಿಮ್ಮ ಅಪ್ಪನ ಆಣೆ ಮತ್ತೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ನೀವು ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದವರು. ನೀವು ಗೃಹ ಸಚಿವರು. ಬಾಂಗ್ಲಾ ವಲಸಿಗರ ಬಗ್ಗೆ, ಅತ್ಯಾಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಿ. ಇಲ್ಲೇ ಇದ್ದು ಬಾಂಬ್ ತಯಾರಿ ಮಾಡುವವರ ಬಗ್ಗೆ ಎಚ್ಚರ ವಹಿಸಿ. ನೀವು ಹೋಂ ಮಿನಿಸ್ಟರ್, ಗೂಂಡಾಗಳ ತರಹ ಯೋಚನೆ ಮಾಡಬೇಡಿ. ಕಾಲ ಹೀಗೇ ಇರಲ್ಲ, ಅಧಿಕಾರ ಶಾಶ್ವತ ಅಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪರಿಷತ್‌ ಸದಸ್ಯ ಸಿ.ಟಿ ರವಿಗೆ ತಿರುಗೇಟು ಕೊಟ್ಟಿದ್ದಾರೆ. ಸಿ.ಟಿ ರವಿಗೆ ಆರ್‌ಎಸ್‌ಎಸ್ ಅವರ ಇತಿಹಾಸ ಗೊತ್ತಿಲ್ಲ ಅನ್ಸುತ್ತೆ. ನೆಹರೂ ಅವರು RSS ಬ್ಯಾನ್ ಮಾಡಿದಾಗ ಸರ್ದಾರ್ ಪಟೇಲ್ ಕಾಲಿಲಿ ಬಿದ್ದಿದ್ರು. ಇಂದಿರಾ ಗಾಂಧಿ RSS ಬ್ಯಾನ್ ಮಾಡಿದಾಗಲೂ ಸರ ಸಂಚಾಲಕರು ಉದ್ದುದ್ದ ಲೆಟರ್ ಬರೆದಿದ್ದರು. ಈ ಇತಿಹಾಸವನ್ನು ಮೊದಲು ಓದಲು ಹೇಳಿ. ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಅಂತ ಹೇಳಿದ್ರೆ, ಯಾಕೆ ಇಷ್ಟು ಭಯ..? ಅಂತಾ ಪ್ರಶ್ನಿಸಿದ್ದು, RSS ರಿಜಿಸ್ಟರ್ ಮಾಡ್ಕೊಳ್ಳಿ ಅಂದ್ರೆ ಬಿಜೆಪಿಯವರು ಯಾಕ್ ಉತ್ತರ ಕೊಡ್ತಿದ್ದಾರೆ ಎಂದಿದ್ದಾರೆ.

ನನ್ನನ್ನು ಜಗನಾಥ್ ಭವನ ಅಥವಾ ಕೇಶವ ಕೃಪಾಗೆ ಕರೆಸಿ, ಈ ಕಾನೂನು ಅಡಿಯಲ್ಲಿ ನಮಗೆ ರಿಜಿಸ್ಟ್ರೇಷನ್‌ ಮಾಡಿಸದೆ ಇರಲು ಸ್ವತಂತ್ರ ಇದೆ ಅಂತ ಹೇಳಲಿ. ಯಾವುದೇ ಸರ್ಕಾರಿ ಸಂಸ್ಥೆಗೆ ನಾವು ಉತ್ತರ ಕೊಡೋ ಹಾಗಿಲ್ಲ ಅಂತ ಅವರು ನನಗೆ ಹೇಳಲಿ. ನಮಗೆ ಯಾವುದೇ ಸಂವಿಧಾನ ಯಾವುದೇ ಕಾನೂನು ಆಗಲ್ಲ ಅಂತ ಹೇಳಲಿ. ಇಲ್ಲಾಂದ್ರೆ ಅವರೇ ತಿದ್ದುಕೊಳ್ಳಲಿ. ಒಬ್ಬರು ಬೀದಿ ವ್ಯಾಪಾರಿ ಕೂಡ ರಿಜಿಸ್ಟ್ರೇಷನ್ ಮಾಡ್ಕೋತಾರೆ. ದೇವಸ್ಥಾನದಲ್ಲಿ ಎಷ್ಟು ದೇಣಿಗೆ ಬರುತ್ತೆ ಅಂತ ದೇವರು ಸಹ ಲೆಕ್ಕ ಕೊಡಬೇಕು. RSS ಅವರು ಮಾತ್ರ ಮನಸಿಗೆ ಬಂದ ಹಾಗೆ ಮಾಡಬಹುದಾ..? ಐಟಿಗೆ ಲೆಕ್ಕ ಕೊಡಬಾರದಾ..? ಎಂದು ಪ್ರಶ್ನಿಸಿದ್ದಾರೆ.

RSS ಬಗ್ಗೆ ಮಾತಾಡುವ ಗೌರವವನ್ನು ಪ್ರಿಯಾಂಕ್ ಖರ್ಗೆ ಉಳಿಸಿಕೊಂಡಿಲ್ಲ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ಪದೇ ಪದೇ RSS ಬಗ್ಗೆ ಆರೋಪ ಮಾಡುತ್ತಾರೆ. ಅವರ ವಿಚಾರ ಅವರಿಗೆ, ನಮ್ಮ ವಿಚಾರ ನಮಗೆ. ನಮ್ಮ ವಿಚಾರವನ್ನ ದೇಶದ ಜನ ಒಪ್ಪಿಕೊಂಡಿದ್ದಾರೆ. ಆ ವಿಚಾರದಲ್ಲೇ ದೇಶ ನಡೆಯುತ್ತಿದೆ. ಸ್ಥಾನ, ಖಾತೆ ಭದ್ರ ಪಡಿಸಿಕೊಳ್ಳಲು ಹೈಕಮಾಂಡ್ ಒಪ್ಪಿಸಲು ಈ ರೀತಿಯ ಹೇಳಿಕೆ ನೀಡ್ತಾರೆ. ಅವರ ಹೇಳಿಕೆಗಳನ್ನ ನಾವು ಗಂಭೀರವಾಗಿ ಪರಿಗಣಿಸಲ್ಲ ಎಂದಿದ್ದಾರೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ.

Related posts

BJP ಯಲ್ಲಿ ಅಡ್ಡ ಮತದಾನ.. ಯಾರ ಮೇಲಿದೆ ಅನುಮಾನ..? ಶಿಸ್ತು ಕ್ರಮ ಏನು..?

Publicspot

ನೀಟ್‌ ಅಕ್ರಮದ ಬಗ್ಗೆ ಕಾಂಗ್ರೆಸ್‌ ಪ್ರತಿಭಟನೆ ಖಂಡಿಸಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ

Publicspot

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

Publicspot