The Public Spot
ಅಪರಾಧ

PU ಫಲಿತಾಂಶ ನೆಪದಲ್ಲಿ ಮಗಳನ್ನು ಕೊಂದಳಾ ಹೆತ್ತಮ್ಮ..? ತನುಶ್ರೀ ಸಾವಿಗೆ ಕಾರಣ ಏನು..?

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 17 ವರ್ಷದ ಅಪ್ರಾಪ್ತೆ ತನುಶ್ರೀ ಶವ ಅನುಮಾನಾಸ್ಪವಾಗಿ ಪತ್ತೆಯಾಗಿದೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ಘಟನೆ ನಡೆದಿದೆ. ಮಾರ್ಚ್ 9 ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದರೆ ತಾಯಿಯ ಅನೈತಿಕ ಸಂಬಂಧವೇ ಮಗಳ ಸಾವಿಗೆ ಕಾರಣ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಮಧ್ಯಾಹ್ನ 3 ಗಂಟೆಗೆ ನೆಡೆದರೂ ಸುಮಾರು 8 ತಾಸಿನ ಬಳಿಕ ಅಂದರೆ ಸುಮಾರು ರಾತ್ರಿ 10 ಗಂಟೆಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಮೃತದೇಹವನ್ನು ಹಾಸ್ಪಿಟಲ್‌ಗೆ ಶಿಫ್ಟ್ ಮಾಡಿದ ಬಳಿಕ ಹಾಸ್ಪಿಟಲ್ ಕಡೆಯಿಂದ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ಹೀಗಾಗಿ ತಾಯಿ ಆಶಾ ಮೇಲೆ ಅನುಮಾನ ಹೆಚ್ಚಾಗಿದ್ದು, ಕುಟುಂಬಸ್ಥರ ಆರೋಪಕ್ಕೆ ಪುಷ್ಟಿ ಕೊಟ್ಟಂತಾಗಿದೆ.

ಆತ್ಮಹತ್ಯೆ ಆದರೂ ಪೊಲೀಸರಿಗೆ ಮಾಹಿತಿ ನೀಡದೇ ನಾಲ್ಕೈದು ಯುವಕರ ಸಹಾಯದಿಂದ ಮೃತದೇಹವನ್ನ ಇಳಿಸಿದ್ದ ತಾಯಿ ಆಶಾ ಮೇಲೆಯೇ ಕೊಲೆ ಆರೋಪ ಕೇಳಿಬಂದಿದೆ. ಸದ್ಯ ತಾಯಿಯೇ ಕೊಲೆ ಮಾಡಿ ನೇಣು ಹಾಕಿದ್ದಾಳೆ ಅನ್ನೋ ಅನುಮಾನವಿದೆ. ಮೃತ ತನುಶ್ರೀ ಸೋದರ ಸಂಬಂಧಿ ಧನುಷ್ ಮಾತನಾಡಿ, ಫಲಿತಾಂಶಕ್ಕೆ ಬೇಸರಗೊಂಡು ಸೂಸೈಡ್ ಮಾಡಿಕೊಳ್ಳುವ ಹುಡುಗಿ ಅಲ್ಲ. ತನುಶ್ರೀ ಮೆಂಟಲಿ ಬಹಳ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದ ನಾವು ನಂಬಲ್ಲ. ನಮಗೆಲ್ಲಾ ಆಕೆ ತಾಯಿ ಆಶಾ ಅವರ ಮೇಲೆ ಅನುಮಾನವಿದೆ. ಆಶಾ ಗಂಡ ಸತ್ತು 2 ವರ್ಷವಾಗಿದೆ. ಆಗಿನಿಂದಲೂ ಅನೈತಿಕ ಸಂಬಂಧ ಬಗ್ಗೆ ಮನೆಯಲ್ಲಿ ಗಲಾಟೆ ಆಗಿದೆ. ಅದೇ ಕಾರಣಕ್ಕೆ ತನುಶ್ರೀ ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ನಮ್ಮದು .ನಮ್ಮ ತಂಗಿಗೆ ಏನಾಯ್ತು ಅನ್ನೋದರ ಸತ್ಯಾಂಶ ನಮಗೆ ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯ ಕೆ.ಜಿ ಹಳ್ಳಿಯಲ್ಲಿರುವ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತನುಶ್ರೀ ಮೃತ ದೇಹ ಇರಿಸಲಾಗಿದೆ. ತಾಯಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿದ 17 ವರ್ಷದ ಮಗಳ ಜೊತೆ ಪ್ರತಿ ದಿನ ತಾಯಿ ಆಶಾ ಗಲಾಟೆ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಇನ್ನು ರಾತ್ರಿ 10 ಗಂಟೆಗೆ ಪೊಲೀಸರಿಗೆ ಮಾಹಿತಿ ಹೋದರೂ ಇಲ್ಲೀವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೆಬ್ಬಾಳ ಪೊಲೀಸರು ಸೈಲೆಂಟ್ ಆಗಿ ಇದ್ದಾರೆ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ.

ಆತ್ಮಹತ್ಯೆ ಅಥವಾ ಕೊಲೆ ವಿಷಯ ಗೊತ್ತಿದ್ದರೂ ಹೆಬ್ಬಾಳ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಹಾಗೂ ಘಟನಾ ಸ್ಥಳಕ್ಕೂ ಭೇಟಿ ಕೊಟ್ಟಿಲ್ಲ. ಶವ ಇರಿಸಿರುವ ಆಸ್ಪತ್ರೆಗೂ ಬಂದಿಲ್ಲ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮೃತ ತನುಶ್ರೀ ತಾಯಿ ಆಶಾಳನ್ನು ವಿಚಾರಣೆಗೆ ಒಳಪಡಿಸಿ, ತನಿಖೆ ನಡೆಸಿ ಮೃತ ತನುಶ್ರೀಗೆ ನ್ಯಾಯ ಕೊಡಿಸುವಂತೆ ಸಂಬಂಧಿಕರು ಒತ್ತಾಯ ಮಾಡಿದ್ದಾರೆ. ತನುಶ್ರೀ ಸಾವು ಆತ್ಮಹತ್ಯೆ ಅಲ್ಲ ಎನ್ನುವುದು ತನುಶ್ರೀ ತಂದೆ ಸಂಬಂಧಿಕರ ಆರೋಪ. ಆದರೆ ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರಬೀಳಬೇಕಿದೆ. ದ್ವಿತೀಯ ಪಿಯು ಫಲಿತಾಂಶದ ದಿನವೇ ಕೊಲೆ ಮಾಡಿ ನೇಣು ಹಾಕಿದ್ರಾ..? ಫಲಿತಾಂಶದ ಕಾರಣವನ್ನೇ ಕೊಲೆಗೆ ಬಳಸಿದ್ರಾ ಅನ್ನೋದು ತನಿಖೆ ಬಳಿಕ ಪತ್ತೆಯಾಗಬೇಕಿದೆ.

Related posts

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

Publicspot

ನಟ ದರ್ಶನ್​ಗೆ ಅನುಕೂಲ ಆಗುವಂತೆ ಸಾಕ್ಷಿ ಹೇಳಿದ್ರಾ ರೇಣುಕಾಸ್ವಾಮಿ ತಾಯಿ..!?

Publicspot

Mother Murder ; ಪ್ರೀತಿಗಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಹುಡುಗಿ..!

Publicspot

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಪರ ವಕೀಲರ ಪ್ಲಾನ್ ಏನು..? ​

Publicspot