The Public Spot
ದೇಶ-ವಿದೇಶ

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಪಕ್ಷದ ನಾಯಕ, ನಟ ದಳಪತಿ ವಿಜಯ್ ಭರ್ಜರಿ ಜಯ ದಾಖಲಿಸಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆಯನ್ನ ಧೂಳಿಪಟ ಮಾಡಿರುವ ಟಿವಿಕೆ ಪಾರ್ಟಿ, ದಳಪತಿ ವಿಜಯ್ ನೇತೃತ್ವದ 234 ಕ್ಷೇತ್ರಗಳ ಪೈಕಿ 107 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲ ಪ್ರಯತ್ನದಲ್ಲೇ ವಿಜಯ್ ಅಧಿಕಾರದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿ ಆಗಲು ಸಜ್ಜಾಗಿದ್ದಾರೆ. ಮಹಿಳೆಯರು, ಯುವಕರು, ಸಿನಿಮಾ ಅಭಿಮಾನಿಗಳು, ವಿಜಯ್ ಕೈ ಹಿಡಿದಿದ್ದಾರೆ. ಪಕ್ಷ, ಸಿದ್ಧಾಂತ, ಧರ್ಮ-ಜಾತಿ ಮೀರಿ ತಮಿಳುನಾಡಿನಲ್ಲಿ ಮತದಾನ ಹಾಕಿದ್ದು, ವಿಜಯೋತ್ಸವ ಮುಗಿಲು ಮುಟ್ಟುತ್ತಿದೆ.

ತಮಿಳುನಾಡಿನಲ್ಲಿ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಾರ್ಟಿ ಗೆಲುವು ಸಾಧಿಸ್ತಿದ್ದಂತೆ ವಿಜಯ್ ಕುಟುಂಬಸ್ಥರು ಕುಣಿದು ಕುಪ್ಪಳಿಸಿದ್ದಾರೆ. ನಟ ವಿಜಯ್ ತಂದೆ ಹಾಗೂ ತಾಯಿ ಸೇರಿದಂತೆ ಕುಟುಂಬಸ್ಥರು ವಿಜಯ್ ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಟಿವಿಕೆ ಪಕ್ಷದ ಕಾರ್ಯಕರ್ತರು, ವಿಜಯ್‌ ಅಭಿಮಾನಿಗಳು ರಾಜ್ಯಾದ್ಯಂತ ಸಿಹಿ ಹಂಚಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಸಿಎಂ ಮಾಡಿದ ಸಂಭ್ರಮ ಮಾಡಿದ್ದಾರೆ.

ದಳಪತಿ ವಿಜಯ್‌‌‌ ಎಲೆಕ್ಷನ್‌ಗೆ ನಿಂತಾಗಲೇ ಕುಟುಂಬದಲ್ಲಿ ಬಿರುಕು ಮೂಡಿತ್ತು. ವಿಜಯ್ ಪತ್ನಿ ವಿಚ್ಛೇದನ ಪಡೆದುಕೊಂಡಿದ್ದರು. ನಟಿ ತ್ರಿಶಾ ಕೃಷ್ಣನ್‌ ಜೊತೆ ವಿಜಯ್‌‌ಗೆ ಸಂಬಂಧವಿದೆ ಅನ್ನೋ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಿದ್ದವು. ಯಾವುದಕ್ಕೂ ಕಿವಿ ಕೊಡದ ತಮಿಳುನಾಡು ಜನರು ವಿಜಯ್‌ಗೆ ಪಟ್ಟಾಭಿಷೇಕ ಮಾಡಿದ್ದಾರೆ. ಟಿವಿಕೆ ಪಕ್ಷ ಭರ್ಜರಿ ಗೆಲುವು ಸಾಧಿಸ್ತಿದ್ದಂತೆ ನಟಿ ತ್ರಿಶಾ ಕೃಷ್ಣನ್, ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಆಗಮಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ನಟಿ ತ್ರಿಶಾ ಕೃಷ್ಣನ್‌ ಜನ್ಮದಿನದ ದಿನವೇ ವಿಜಯ್‌‌ ಜಯಭೇರಿ ಬಾರಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ತ್ರಿಶಾ, ಚೆನ್ನೈನ ವಿಜಯ್ ನಿವಾಸಕ್ಕೆ ತೆರಳಿ ತಿರುಪತಿ ಲಡ್ಡು ಕೊಟ್ಟು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯ್‌ಗೆ ವಿಜಯ ಸಿಕ್ಕಿದ್ದರ ಹಿಂದೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಭರಪೂರ ಕೊಡುಗೆ ಘೋಷಿಸಿರುವ ನಟ ವಿಜಯ್‌, ಗೃಹಿಣಿಯರಿಗೆ ತಿಂಗಳಿಗೆ 2,500 ರೂಪಾಯಿ, ವೃದ್ಧರಿಗೆ ಪ್ರತೀ ತಿಂಗಳು ₹3 ಸಾವಿರ. ವರ್ಷಕ್ಕೆ 6 ಉಚಿತ LPG ಸಿಲಿಂಡರ್‌, ಎಲ್ಲಾ ಮಹಿಳೆಯರಿಗೆ ಫ್ರೀ ಬಸ್‌, ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತೀ ಕುಟುಂಬಕ್ಕೆ ₹25 ಲಕ್ಷ ಆರೋಗ್ಯ ವಿಮೆ. ಮದುವೆ ಆಗುವ ಹೆಣ್ಣಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ. ಬಡ ಮಕ್ಕಳ ಶಿಕ್ಷಣಕ್ಕೆ ₹15,00 ಸಹಾಯಧನ, ಎಲ್ಲಾ ಹೆಣ್ಮಕ್ಕಳಿಗೆ ಫ್ರೀ ಸ್ಯಾನಿಟರಿ ಪ್ಯಾಡ್‌, ಬಡವರಿಗೆ 200 ಯುನಿಟ್‌‌ ವಿದ್ಯುತ್‌ ಉಚಿತ, ಸಣ್ಣ ರೈತರ ಸಾಲ ಶೇಕಡ 50ರಷ್ಟು ಸಾಲ ಮನ್ನ, 5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ, 20 ಲಕ್ಷದವರೆಗೆ ಬಡ್ಡಿರಹಿತ ಶಿಕ್ಷಣ ಸಾಲ, ಡ್ರಗ್ಸ್‌ ಮುಕ್ತ ತಮಿಳುನಾಡು ಹಾಗೂ ಮೀನುಗಾರರಿಗೆ ವಸತಿ ಮತ್ತು 27 ಸಾವಿರ ಸಹಾಯಧನ ಘೋಷಿಸಿದ್ದಾರೆ. ಇಷ್ಟೆಲ್ಲವನ್ನು ಕೊಡುವುದಕ್ಕೆ ಸಾಧ್ಯನಾ..? ಅನ್ನೋ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

Related posts

Supreme Court on Waqf; ಕೇಂದ್ರದ ವಕ್ಫ್‌ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್‌ನಲ್ಲಿ ಸಿಹಿ ಕಹಿ..

Publicspot

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

Publicspot

Central Budget; ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಏನಿದೆ ವಿಶೇಷತೆ..?

Publicspot

Election Commission Deadline: ರಾಹುಲ್‌ ಗಾಂಧಿ ಈಗ ಏನ್‌ ಮಾಡ್ತಾರೆ..? ಉತ್ತರ ಏನು..?

Publicspot

ಅಮೆರಿಕ ಬೆನ್ನುಮೂಳೆ ಮುರಿದ ಇರಾನ್​.. F-35 ಫೈಟರ್​ ಜೆಟ್​ ಫಿನಿಷ್​​..!!

Publicspot

NEET ಪ್ರಶ್ನೆ ಪತ್ರಿಕೆ ಲೀಕ್‌ ಕೇಸ್‌ನಲ್ಲಿ BJP, RSS ಕೈವಾಡ ಇದೆಯಾ..?

Publicspot