The Public Spot
ಅಪರಾಧ

ಧರ್ಮಸ್ಥಳಕ್ಕೆ ಇಂದು Car Rally : ಜೈನರನ್ನು ಟೀಕಿಸಿದ್ದಕ್ಕೆ ಅರೆಸ್ಟ್…!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದಿದ್ದ ಅನಾಮಿಕ ಮಾತಿನಂತೆ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಧರ್ಮಸ್ಥಳ ವಿಚಾರವಾಗಿ ರಾಜಕೀಯ ಗರಿಗೆದರಿದೆ. ಇಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ 200 ಕಾರುಗಳು (CAR RALLY) ಹೋಗಲು ನಿರ್ಧಾರ. ಅನಾಮಿಕನ ತಾಳಕ್ಕೆ ಸರ್ಕಾರ ಕುಣಿಯುತ್ತಿದೆ ಅನ್ನೋದು ಹಿಂದೂ ಹಾಗೂ ಬಿಜೆಪಿ ನಾಯಕರ ಆರೋಪ. ಆದರೆ ವಿಚಾರಣೆಗೆ SIT ರಚನೆ ಮಾಡಲಾಗಿದೆ. ಪಕ್ಷಾತೀತವಾಗಿ ನಡೆಯಲಿ ಅನ್ನೋದು ಕಾಂಗ್ರೆಸ್ ವಾದ ಆಗಿದೆ.

ಧರ್ಮಸ್ಥಳ ಉಳಿಸಿ ಹೆಸರಿನಲ್ಲಿ ನಡೆಯಲಿರುವ ರ‌್ಯಾಲಿ ಬಳಿಕ ಭಾನುವಾರ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸಲು ಬೃಹತ್ ವೇದಿಕೆ ರೆಡಿ ಮಾಡಲಾಗಿದೆ. ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ನಡೆಸ್ತಿರೋ ಹುನ್ನಾರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಪಾಕಿಸ್ತಾನದ ಐಎಸ್‌ಐ, ಎಡಪಂಥಿಯರು, ನಕ್ಸಲರ ಕೈವಾಡವಿದೆ ಅಂತ ಬಸನಗೌಡ ಯತ್ನಾಳ್‌ ಆರೋಪಿಸಿದ್ದಾರೆ. ಧರ್ಮಸ್ಥಳ ಚಲೋ ಹಮ್ಮಿಕೊಂಡಿರುವ ಬಿಜೆಪಿ ಇಲ್ಲಿಯವರೆಗೆ ಎಸ್‌ಐಟಿ ನಡೆಸುತ್ತಿರುವ ತನಿಖಾ ವರದಿಯನ್ನು ಬಹಿರಂಗಗೊಳಿಸಲು ಒತ್ತಾಯಿಸಿದೆ.

ಗೃಹ ಸಚಿವ ಪರಮೇಶ್ವರ್‌ ಎಸ್‌ಐಟಿಯಿಂದ ಮಾಹಿತಿ ನೀಡಲಾಗಿದೆ, ಸೋಮವಾರ ಸದನದಲ್ಲಿ ವರದಿ ಮಂಡಿಸುವ ಸುಳಿವು ನೀಡಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೀನಿ ಎಂದಿದ್ದಾನೆ ಅನಾಮಿಕ. ಹೆಣ ಹೂತಿರೋದು ಸತ್ಯ, ಆದರೆ ಕಾಡು ಬೆಳೆದಿದೆ. ಜಾಗ ಬದಲಾಗಿದ್ದು ಸರಿಯಾಗಿ ಗುರುತು ಸಿಕ್ಕಿಲ್ಲ ಅಂತ ಹೇಳಿಕೊಂಡಿದ್ದಾನೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೇ ಅನಾಮಿಕ ಮಾತಿನಂತೆ ಅಸ್ಥಿಪಂಜರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎಸ್‌ಐಟಿ ತನಿಖೆ ನಿಲ್ಲಿಸಿ ಅಂತ ಬಿಜೆಪಿ ಒತ್ತಡ ಹಾಕಿದೆ.

ಧರ್ಮಸ್ಥಳದಲ್ಲಿ ಶವಗಳನ್ನ ಹೂತಿದ್ದಾಗಿ ಮಾಸ್ಕ್ ಮ್ಯಾನ್ ದೂರು ನೀಡಿದ ಬಳಿಕ ಜೈನ ಸಮಾಜದ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಅವಹೇಳನಕಾರಿ ಕಮೆಂಟ್ ಹಾಕಿದ್ದ ಹೊಸಳ್ಳಿಯ ಉಮೇಶ್ ಎಂಬಾತನನ್ನು ಬಂಧನ ಮಾಡಲಾಗಿದೆ. ಅಜ್ಜಂಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಉಮೇಶ್ ಗೌಡ್ಲರ್ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದನು. ಜೈನ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ್ದನ್ನು ಖಂಡಿಸಿ ಕಳಸ ಮೂಲದ ಪದ್ಮರಾಜಯ್ಯ ಎಂಬುವರು ದೂರು ನೀಡಿದ್ದರು.

Related posts

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot

ATM ವಾಹನದಲ್ಲಿ 7.11 ಕೋಟಿ ಕಳವು.. ಬೆಂಗಳೂರು ಪೊಲೀಸ ಬಲೆಗೆ ಬಿದ್ದ 6 ಜನ..

Publicspot

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ..! 29 ಸ್ಥಳ.. 1909 ಮಂದಿ..

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

Man Stab a Girl for ; ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿತ!!

Publicspot

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot