September 30, 2026
The Public Spot
Uncategorizedದೇಶ-ವಿದೇಶ

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ಗೆ ಯಾರು ಹೊಣೆ..? ಜವಾಬ್ದಾರಿ ಯಾರದ್ದು..?

ದೇಶಾದ್ಯಂತ ಮೇ 3ರಂದು ನೀಟ್‌ ಪರೀಕ್ಷೆ ನಡೆದಿತ್ತು. ವಿಜ್ಞಾನ ವಿಯಷದಲ್ಲಿ ಪಿಯುಸಿ ಓದಿದ ಮಕ್ಕಳು ಮುಂದೆ ವೈದ್ಯರಾಗುವ ಕನಸು ಕಟ್ಟಿಕೊಂಡು ಹಗಲು ರಾತ್ರಿ ಕಷ್ಟಪಟ್ಟು ಓದಿದ ಮಕ್ಕಳು ಆತ್ಮವಿಶ್ವಾಸದಿಂದಲೇ ಪರೀಕ್ಷೆ ಬರೆದಿದಿದ್ದರು. ಆದರೆ NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್‌ ಆಗಿದ್ದು, ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ದೇಶಾದ್ಯಂತ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯನ್ನು ರದ್ದು ಮಾಡಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆದೇಶ ಮಾಡಿದ್ದು, ಮರು ಪರೀಕ್ಷೆಯನ್ನು ಶೀಘ್ರವೇ ಘೋಷಿಸಲಾಗುವುದು ಎಂದು ತಿಳಿಸಿದೆ. ಇದು ಈಗಾಗಲೇ ಫಲಿತಾಂಶ ನಿರೀಕ್ಷೆಯಲ್ಲಿದ್ದ ಮಕ್ಕಳು ಹಾಗೂ ಪೋಷಕರಿಗೆ ಸಿಡಿಲು ಬಡಿದಂತಾಗಿದೆ.

NEET UG ಪರೀಕ್ಷೆಯಲ್ಲಿ ದೇಶದ 22.79 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಪ್ರಶ್ನೆ ಪತ್ರಿಕೆಯನ್ನು ಸುಮಾರು ₹5 ಲಕ್ಷಕ್ಕೆ ಮಾರಾಟ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪ್ರತಿ ಪ್ರಶ್ನೆಗೆ 30 ಸಾವಿರ ರೂಪಾಯಿಗೆ ಆಫರ್ ನೀಡಲಾಗಿತ್ತು ಎನ್ನಲಾಗಿದೆ4. ರಾಜಸ್ಥಾನ ಮೂಲದ PG ಮಾಲೀಕನಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ದೇಶಾದ್ಯಂತ 6 ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್‌‌ನಿಂದ ಸೋರಿಕೆ ಆರಂಭವಾಗಿದ್ದು, ಕೇರಳ ಮೂಲದ MBBS ವಿದ್ಯಾರ್ಥಿಯಿಂದ ಮೇ 1ರಂದೇ ಪ್ರಶ್ನೆಗಳ ಹಂಚಿಕೆ ಮಾಡಲಾಗಿದೆ. ಪರೀಕ್ಷೆಗೂ ಮುನ್ನವೇ 300 ಪ್ರಶ್ನೆಗಳು ಲೀಕ್‌ ಆಗಿದ್ದು, ಅದರಲ್ಲಿ9 120 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು ಎನ್ನೋದು ಸಾಬೀತಾಗಿದೆ.

GUESS PAPER ವಾಟ್ಸಪ್ ಗ್ರೂಪ್‌ನಲ್ಲಿ 410 ಪ್ರಶ್ನೆಗಳು ಲೀಕ್ ಆಗಿದ್ದು, PRIVATE MAFIA ವಾಟ್ಸಪ್​ ಗ್ರೂಪ್‌‌ನಲ್ಲೂ ಪ್ರಶ್ನೆಗಳು ಲೀಕ್‌ ಆಗಿವೆ. ಇನ್ನು TELEGRAM ಆ್ಯಪ್‌ನಲ್ಲೂ ಪ್ರಶ್ನೆಗಳು ಲೀಕ್ ಆಗಿವೆ. NEET ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ದೂರುಗಳು ಬಂದಿದ್ದವು. ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಜಾಲ ಪತ್ತೆ ಹಚ್ಚುವ ಕೆಲಸವೂ ಆಗಿತ್ತು. ಅಕ್ರಮ ಆಗಿರೋದು ಸಾಬೀತಾಗುತ್ತಿದ್ದಂತೆ, ಸಂಪೂರ್ಣ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಇದೀಗ ಮತ್ತೊಮ್ಮೆ ಮರು ಪರೀಕ್ಷೆ ನಡೆಸೋದಕ್ಕೂ ಮುಂದಾಗಿದೆ.

NTA ಮಾಹಿತಿಯಂತೆ ಶೀಘ್ರವೇ ಮರು ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಲಿದೆ. ವಿದ್ಯಾರ್ಥಿಗಳು, ಪೋಷಕರ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲಿದ್ದು, ಮರು ಪರೀಕ್ಷೆಗೆ ಪ್ರತ್ಯೇಕ ನೋಂದಣಿಯ ಅಗತ್ಯವಿಲ್ಲ. ವಿದ್ಯಾರ್ಥಿಗಳು ಶುಲ್ಕವನ್ನೂ ಕಟ್ಟುವಂತಿಲ್ಲ. NTA ಅಧಿಕೃತ ವೆಬ್‌‌ಸೈಟ್‌ನಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡಿ ಪಾರದರ್ಶಕ ಪರೀಕ್ಷೆ ನಡೆಸುವುದಾಗಿ ಭರವಸೆ ನೀಡಲಾಗಿದೆ. NTA ಡಿಜಿ ಅಭಿಷೇಕ್‌ ಸಿಂಗ್‌ ಮಾತನಾಡಿ, ಪ್ರಶ್ನೆ ಪತ್ರಿಕೆ ಲೀಕ್ ಆಗುವುದು ಇಲ್ಲಿಗೇ ನಿಲ್ಲಲಿದೆ. ಪ್ರಶ್ನೆಗಳು ಲೀಕ್‌ ಆಗುವುದು ಎಲ್ಲರಿಗೂ ಮಾರಕ. ಲೀಕ್ ಆಗಿದ್ದು ತಪ್ಪು, ಅದರ ಜವಾಬ್ದಾರಿ ಹೊರುತ್ತೇವೆ. ಮರು ಪರೀಕ್ಷೆ ಮಾಡ್ತೇವೆ, ಯಾವುದೇ ತಪ್ಪುಗಳು ಆಗೋದಿಲ್ಲ ಎಂದಿದ್ದಾರೆ.

Related posts

80ನೇ ಸ್ವಾತಂತ್ರ್ಯ ಸಂಭ್ರಮ.. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

Publicspot

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

Publicspot

ಇರಾನ್​ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುತ್ತಾ..? ಅಮೆರಿಕ ದಾಹಕ್ಕೆ ಮಣಿಯುತ್ತಾ..?

Publicspot

Thirupathi; ಮೂರು ನಾಮದ ಒಡೆಯನಿಗೇ ನಾಮ ಹಾಕಿದ ಅತಿಶಯ ಮನುಷ್ಯ..!

Publicspot