September 30, 2026
The Public Spot
ದೇಶ-ವಿದೇಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ಯಾರು ಗೊತ್ತಾ..? ಶಾಕ್

NEET ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಆ ಬಳಿಕ ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನ ರದ್ದು ಮಾಡಲಾಗಿತ್ತು. ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಾಕಷ್ಟು ಜನರನ್ನು ಬಂಧಿಸಲಾಗಿದೆ. ಇದೀಗ ಜೂನ್ 21ಕ್ಕೆ ನೀಟ್ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ NTA ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಜೂನ್ 21ರಂದು ಮರು ಪರೀಕ್ಷೆ ಮಾಡ್ತೀವಿ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಮರು ಪರಿಕ್ಷೆಗೆ ಯಾವುದೇ ಶುಲ್ಕ ಪಡೆಯಲ್ಲ. ತಮ್ಮ ಪರೀಕ್ಷ ಸೆಂಟರ್ ಆಯ್ಕೆ ಮಾಡಿಕೊಳ್ಳಲು 1 ವಾರದ ಸಮಯಾವಕಾಶ ಸಿಗಲಿದೆ. ಇನ್ನು 15 ನಿಮಿಷ ಹೆಚ್ಚುವರಿ ಸಮಯ ಕೊಡ್ತೀವಿ ಎಂದಿದ್ದಾರೆ.

ಅಷ್ಟೇ ಅಲ್ಲದೆ ಮುಂದಿನ ವರ್ಷದಿಂದ ಆನ್‌ಲೈನ್ ಪರೀಕ್ಷೆ ಮಾಡ್ತೇವೆ ಎಂದು ಧರ್ಮೇಂದ್ರ ಪ್ರಧಾನ್ ಘೋಷಣೆ ಮಾಡಿದ್ದಾರೆ. ಕಂಪ್ಯೂಟರ್ ಆಧಾರಿತ ಪದ್ಧತಿಯಲ್ಲಿ NEET ಪರೀಕ್ಷೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಹಣ ಬಲದಿಂದ ಸೀಟು ಕಸಿದುಕೊಳ್ಳಲು ಬಿಡಲ್ಲ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

NEET ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ NTA ಪರಿಕ್ಷೆಯನ್ನೇ ರದ್ದು ಮಾಡಲಾಯ್ತು.. ಇದೀಗ ಜೂನ್ 21ರಂದು ಮರು ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಆದರೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ತನಿಖೆ ನಡೆಸುತ್ತಿರುವ CBI ಅಧಿಕಾರಿಗಳು, ಮಹಾರಾಷ್ಟ್ರದ ಪುಣೆಯಲ್ಲಿ ಕೆಮಿಸ್ಟ್ರಿ ಪ್ರೊಫೇಸರ್ ಪಿ.ವಿ ಕುಲಕರ್ಣಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಲಾಥೂರ್ನ ದಯಾನಂದ ಮೆಡಿಕಲ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದ ಕುಲಕರ್ಣಿ, ನೀಟ್ ಪ್ರಶ್ನೆ ಪತ್ರಿಕೆ ತಯಾರಿಕಾ ಸಮಿತಿಯಲ್ಲಿದ್ರು ಎನ್ನಲಾಗಿದ್ದು, ಈತನೇ ಪ್ರಮುಖ ಕಿಂಗ್ಪಿನ್ ಅನ್ನೋದು ಗೊತ್ತಾಗಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಸಂಬಂಧ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಗಿದೆ. ಬಾಗಲಕೋಟೆ ನವನಗರದ ಡಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಎಬಿವಿಪಿ ಕಾರ್ಯಕರ್ತರು ವಾಗ್ದಾಳಿ ನಡೆಸಿದ್ರು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಜೊತೆ ಆಟ ಆಡೋದು ಬೇಡ. ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕೇಂದ್ರ ಸರಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದ್ರು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡಲಾಗ್ತಿದೆ ಎಂದು ಯುವ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಅಚ್ಚೇ ದಿನ ಅಂತಾ ಹೇಳಿದವರು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನೀಟ್ ವಿಚಾರದಲ್ಲಿ ಉಡುಪಿ ಸಂಸದರು, ಶಾಸಕರು ಮೌನವಹಿಸಿರೋದ್ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ.

Related posts

Supreme Court on Waqf; ಕೇಂದ್ರದ ವಕ್ಫ್‌ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್‌ನಲ್ಲಿ ಸಿಹಿ ಕಹಿ..

Publicspot

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

ಇರಾನ್‌ ಸರ್ವೋಚ್ಛ ನಾಯಕ, ಇಸ್ರೇಲ್‌ ಪ್ರಧಾನಿ ಇಬ್ಬರೂ ಇಲ್ಲ.. ಏನಾದ್ರು..?

Publicspot

ನಾಳೆಯೇ ನಟ ವಿಜಯ್‌ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!

Publicspot

Election Commission Deadline: ರಾಹುಲ್‌ ಗಾಂಧಿ ಈಗ ಏನ್‌ ಮಾಡ್ತಾರೆ..? ಉತ್ತರ ಏನು..?

Publicspot