The Public Spot
ರಾಜಕೀಯ

ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಸಿಗುತ್ತದೆ..?

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ನಿನ್ನೆಯೇ ಪ್ರಮುಖ 6 ಯೋಜನೆಗಳನ್ನ ಘೋಷಣೆ ಮಾಡಿರುವ ಸಿಎಂ ಡಿಕೆಶಿ. ಇಂದು ಸಹ ಫುಲ್‌ ಆ್ಯಕ್ಟೀವ್ ಆಗಿದ್ದಾರೆ. ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸ್ತಿರೋ ಸಿಎಂ ಡಿಕೆಶಿ, ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ‌ ಭಾಗಿಯಾಗಿದ್ದಾರೆ. ಇನ್ನು ಸಿಎಸ್ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಉಸ್ತುವಾರಿ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಪ್ರಮಾಣವಚನ ಸ್ವೀಕಾರ ಬೆನ್ನಲ್ಲೇ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯ ಟೆನ್ಷನ್​ ಶುರು ಆಗಿದೆ.. ಇಂದೇ 13 ಸಚಿವರಿಗೆ ಖಾತೆ ಹಂಚಿಕೆ ಆಗಲಿದ್ದು, ಪ್ರಬಲ ಖಾತೆಗಳನ್ನ ಪಡೆಯಲು ಭಾರೀ ಪೈಪೋಟಿ ನಡೀತಿದೆ. ಡಾ.ಪರಮೇಶ್ವರ್‌ಗೆ ಕಂದಾಯ, ಪ್ರಿಯಾಂಕ್‌ ಖರ್ಗೆಗೆ ಗೃಹ ಖಾತೆ, ಈಶ್ವರ್ ಖಂಡ್ರೆಗೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಹಾಗೂ ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಖಾತೆ ನೀಡುವ ಸಾಧ್ಯತೆ ಇದೆ. ಇನ್ನು ಯು.ಟಿ ಖಾದರ್‌ಗೆ ಆರೋಗ್ಯ, ಕೆ.ಜೆ ಜಾರ್ಜ್‌ಗೆ ಇಂಧನ ಹಾಗೂ ಎಂ.ಬಿ ಪಾಟೀಲ್‌ಗೆ ಬೃಹತ್-ಮಧ್ಯಮ ಕೈಗಾರಿಕೆ ಖಾತೆ, ರಾಮಲಿಂಗಾರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ, ಕೃಷ್ಣ ಭೈರೇಗೌಡಗೆ ಜಲ ಸಂಪನ್ಮೂಲ ಖಾತೆ, ಭೈರತಿ ಸುರೇಶ್‌ಗೆ ಸಾರಿಗೆ, ಮುನಿಯಪ್ಪಗೆ ಆಹಾರ ಇಲಾಖೆ, ಶರಣ ಪ್ರಕಾಶ್ ಪಾಟೀಲ್‌ಗೆ ವೈದ್ಯಕೀಯ ಶಿಕ್ಷಣ ಹಾಗೂ ಡಾ. ಯತೀಂದ್ರಗೆ ನಗರಾಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಗುವ ಸಾಧ್ಯತೆ ಇದೆ.ಇಂದು ಲೋಕಭವನಕ್ಕೆ ಲಿಸ್ಟ್‌ ಕಳುಹಿಸಿದ್ದು, ಇಂದೇ ಅಂತಿಮವಾಗಲಿದೆ

ನೂತನ ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ 13 ಸಚಿವರ ಸೇರ್ಪಡೆಯಾಗಿದೆ. ಇನ್ನುಳಿದ 20 ಸಚಿವ ಸ್ಥಾನಗಳಿಗೆ 50ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಲಾಬಿ ಮಾಡ್ತಿದ್ದಾರೆ. ಇದೀಗ ಎರಡನೇ ಹಂತದ ಸಂಪುಟ ರಚನೆ ದೊಡ್ಡ ಸವಾಲಾಗಿದ್ದು, ಜಾತಿ, ಸಮುದಾಯ, ಪ್ರಾದೇಶಿಕ ಸಮತೋಲನ, ಪಕ್ಷ ನಿಷ್ಠೆ ಆಧಾರದ ಮೇಲೆ ಆದ್ಯತೆ ನೀಡಲಾಗ್ತಿದೆ. ಎರಡನೇ ಹಂತದ ಸಂಪುಟ ರಚನೆಯ ಪಟ್ಟಿಯಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಜಮೀರ್ ಅಹಮದ್, ಎನ್.ಎ.ಹ್ಯಾರೀಸ್‌, ತನ್ವೀರ್ ಸೇಠ್, ಶಿವಲಿಂಗೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ನಯನ ಮೋಟಮ್ಮ, ಮಂಕಾಳವೈದ್ಯ ಸೇರಿದಂತೆ ಸಾಕಷ್ಟು ಶಾಸಕರು ರೇಸ್‌ನಲ್ಲಿದ್ದಾರೆ.

ಖಾತೆ ಹಂಚಿಕೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟಿದ್ದು, ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಜೊತೆ ಚರ್ಚಿಸಿ, ಸಿಎಂ ಡಿ.ಕೆ ಶಿವಕುಮಾರ್‌ ಇಂದು ಖಾತೆ ಹಂಚಿಕೆ ಮಾಡ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಲಿಂಗಾಯತ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿರುವ ಸಚಿವರು, ಇನ್ನು ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಅವ್ರನ್ನ ಆಯ್ಕೆ ಮಾಡಿದ್ದು, ಖುಷಿ ಇದೆ. ಅವರಿಗೆ ಸಾಕಷ್ಟು ಅನುಭವ ಎಂದಿದ್ದಾರೆ.

Related posts

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot

ಮುಂದಿನ ಮುಖ್ಯಮಂತ್ರಿ ಯಾರು..? ಕಾಂಗ್ರೆಸ್‌ ನಾಯಕರೇ ಕುಮಾರಣ್ಣ ಎಂದಿದ್ಯಾಕೆ..?

Publicspot

ದಿಲ್ಲಿ ತಲುಪಿದ ಖಾತೆ ಕ್ಯಾತೆ.. ನಾಳೆ ದಿಲ್ಲಿಯತ್ತ ಡಿ.ಕೆ ಶಿವಕುಮಾರ್..!

Publicspot

ಇಂಧನ ಉಳಿಸುವ ಬಗ್ಗೆ ಬಿಜೆಪಿ ನಾಟಕ.. ಕಾಂಗ್ರೆಸ್ ಕಟು ಟೀಕೆ..

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಫೋನ್​ ಟ್ಯಾಪಿಂಗ್​ ಅನ್ನೋದು ಸದಾ ಕಾಲ ಸತ್ಯ.. ಸಿದ್ದರಾಮಯ್ಯ ಪತಿವ್ರತೆ ಅಲ್ಲ..

Publicspot