The Public Spot
ಸಿನಿಮಾ

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

ನಟಿ ರುಕ್ಮಿಣಿ ವಸಂತ್ ಸದ್ಯದ ನ್ಯಾಷನಲ್‌ ಕ್ರಶ್‌‌. ಕನ್ನಡದಲ್ಲಿ ಶುರುವಾದ ರುಕ್ಮಿಣಿಯ ವಿಜಯಾತ್ರೆ ತೆಲುಗು, ತಮಿಳಿನಲ್ಲೂ ಆರ್ಭಟಿಸ್ತಿದೆ. ಬ್ಯಾಕ್‌ ಟು ಬ್ಯಾಕ್‌ ಸೂಪರ್‌ ಡೂಪರ್‌ ಸಿನಿಮಾದಲ್ಲಿ ಮಿಂಚುತ್ತಿರುವ ರುಕ್ಮಿಣಿ ವಸಂತ್‌ಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. AIನಲ್ಲಿ ರುಕ್ಮಿಣಿ ವಸಂತ್ ಬಿಕಿನಿ ವಿಡಿಯೋ ಮಾಡಿ ವೈರಲ್‌ ಮಾಡ್ತಿದ್ದಾರೆ. ಈ ವಿಚಾರ ಕನಕವತಿಯ ಕಣ್ಣು ಕೆಂಪಗಾಗುವಂತೆ ಮಾಡಿದೆ.

ನಟಿ ರುಕ್ಮಿಣಿ ವಸಂತ್, ಕನ್ನಡ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್‌ನಲ್ಲೂ ಅವಕಾಶ ಗಿಟ್ಟಿಸಿಕೊಳ್ತಿರೋ ಅಂದಗಾತಿ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲೇ ಕಾಣಿಸಿಕೊಳ್ತಿರೋ ರುಕ್ಮಿಣಿ, ಅತಿಹೆಚ್ಚಾಗಿ ಕಾಣಿಸಿಕೊಂಡಿದ್ದು ಸೈಲೆಂಟ್ ಪಾತ್ರಗಳಲ್ಲಿ. ಒಂದೇ ಒಂದು ಹಾಟ್‌ ಸೀನ್‌ ಇಲ್ಲ.. ಎಲ್ಲೂ ಮುಜುಗರ ಆಗುವಂತಾ ಪಾತ್ರ ಮಾಡಿಲ್ಲ.. ವಿವಾದ ಅನ್ನೋದು ಇವರ ಸುತ್ತ ಸುಳಿದಿಲ್ಲ. ಹೀಗಿರುವಾಗ ಚೆಲುವೆ ರುಕ್ಮಿಣಿ ವಸಂತ್‌ ಮೇಲೆ AI ಕಿಡಿಗೇಡಿಗಳ ಕಣ್ಣು ಬಿದ್ದಿದೆ.

ಜಾಲತಾಣದಲ್ಲಿ ರುಕ್ಮಿಣಿ ವಸಂತ್‌ ಬಿಕಿನಿ ಫೋಟೋ ಶೂಟ್‌ ಹಲ್‌ಚಲ್‌ ಎಬ್ಬಿಸ್ತಿದೆ. ಟು ಪೀಸ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ಪಡ್ಡೆಗಳ ಮೈಚಳಿ ಬಿಡಿಸಿದೆ. ಇದು ಫೋಟೋ ಶೂಟಾ ಅಂತಾ ಒಂದಿಷ್ಟು ಮಂದಿ ಮಾತಾಡಿದ್ದಾರೆ. ಇದೀಗ ಅಸಲಿ ಕಹಾನಿ ಬಯಲಾಗಿದೆ. ಇದು ಅಸಲಿ ವಿಡಿಯೋ ಅಲ್ಲ, ನಕಲಿ ಅನ್ನೋದನ್ನು ಹೇಳಿದ್ದಾರೆ. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಹಾಕಿ, ವಿಡಿಯೋ ಮಾರ್ಫಿಂಗ್ ಮಾಡೋ ಸೈಬರ್ ಕಿಡಿಗೇಡಿಗಳು ಹೀಗೆ ಮಾಡಿದ್ದಾರೆ ಎಂದಿದ್ದಾರೆ.

ನನ್ನ ಫೋಟೋಗಳನ್ನ AI ಮೂಲಕ ಎಡಿಟ್​ ಮಾಡಿ ಹರಿಬಿಡಲಾಗುತ್ತಿದೆ. ಇಂತಹ ಫೋಟೋ, ವಿಡಿಯೋಗಳನ್ನು ರಚಿಸುವುದು ಮತ್ತು ಹರಡುವುದು, ಅತ್ಯಂತ ಅಸಹ್ಯದ ಕೆಲಸ. ಅಲ್ಲದೇ, ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗಿದೆ. ಇದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಚಿತ್ರಗಳನ್ನು ಸೃಷ್ಟಿಸುವ ಮತ್ತು ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತಿದ್ದೇನೆ. ​ಯಾರೂ ಇಂತಹ ಅಸಭ್ಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬಾರದು ಮತ್ತು ಉತ್ತೇಜನ ನೀಡಬಾರದು ಎಂದಿದ್ದಾರೆ.

Related posts

Actors Harish Roy Finale ceremony; ಹುಟ್ಟೂರಲ್ಲಿ ಇವತ್ತು ಹರೀಶ್​ ರಾಯ್ ದೇಹಕ್ಕೆ ಅಗ್ನಿ ಸ್ಪರ್ಶ..​

Publicspot

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

Publicspot

ಕಿರಿಕ್‌ ಹುಡುಗಿಗೆ ಇಂದು ಕಲ್ಯಾಣ.. ಈಗಲಾದ್ರೂ ಸಂಸಾರ ಸರಿಯಾಗಲಿ..

Publicspot

ದರ್ಶನ್​ ಬೆನ್ನು ನೋವಿಗೆ ಆಪರೇಷನ್ ಮಾಡಿಸಲಿಲ್ಲ ಯಾಕೆ..?

Publicspot

ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಬಂಧನದಿಂದ ಸಿಗುತ್ತಾ ರಿಲೀಫ್‌..!?

Publicspot

ಒಡೆಯ ಚಿತ್ರದಲ್ಲಿ ದರ್ಶನ್​ ತಮ್ಮನಾಗಿದ್ದ ನಿರಂಜನ್​ ಮೇಲೆ ಹಲ್ಲೆ..!

Publicspot