ನಟ ದರ್ಶನ್ ಅಭಿನಯದ ಒಡೆಯ ಸಿನಿಮಾದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಮೇಲೆ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿದೆ. ಮಾರ್ಚ್ 28ರಂದು ಸ್ನೇಹಿತ ಯಶಸ್ ಸೂರ್ಯ ಮನೆಗೆ ತೆರಳಿದ್ದ ನಟ ನಿರಂಜನ್, ಮನೆಗೆ ವಾಪಸ್ ಬರುವಾಗ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ದಾಳಿ ನಡೆದಿದೆ ಎಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ನಟ ನಿರಂಜನ್ ನೀಡಿರುವ ಕಾರಣ ಸುಲ್ಳು ಅನ್ನೋದನ್ನು ಸಾರಿ ಸಾರಿ ಹೇಳುವಂತಿದೆ.

ನೀರು ಕುಡಿಯೋಕೆ ಹೋದ ನಟನ ಮೇಲೆ ಹಲ್ಲೆ..!
ನಟ ದರ್ಶನ್ ತಮ್ಮನ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿದ್ದು, ಮಾರ್ಚ್ 28ರಂದು ಯಶಸ್ ಸೂರ್ಯ ಅವರ ಮನೆಯಿಂದ ಉತ್ತರಹಳ್ಳಿ ರಸ್ತೆಯಲ್ಲಿ ಮಂತ್ರಿ ಅಲೆಯನ್ಸ್ ಬಳಿ ಬಂದಾಗ ನೀರು ಕುಡಿಯಬೇಕು ಅನ್ನಿಸಿತ್ತು. ಆಗ ನೀರು ಕುಡಿಯಲು ಕ್ಯಾಂಟನ್ ಬಾರ್ ಅಂಡ್ ಕಿಚನ್ ಬಳಿ ಹೋದಾಗ ಗಲಾಟೆ ಆಯ್ತು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಬಾರ್ ಅನ್ ಕಿಚನ್ ಬಳಿ ನೀರು ಕುಡಿಯಲು ಹೋಗಿದ್ರಾ..? ಅನ್ನೋ ಅನುಮಾನ ಮೂಡುತ್ತಿದೆ.


ದೂರುದಾರ ನಟ ನಿರಂಜನ್ ಬಾರ್ಗೆ ಹೋಗಿದ್ದಾದ ಅಲ್ಲಿ ಯಾರೋ ಒಬ್ಬರು ಹಿಂದಿನಿಂದ ತಳ್ಳಿದ್ರಂತೆ. ಆಗ ಯಾಕೆ ತಳ್ಳುತ್ತಿದ್ದೀರಿ..? ಎಂದಾಗ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ಸಿನಿಮಾ ನಟ ಆಗ್ಬಿಟ್ರೆ, ಇಲ್ಲಿ ನಮ್ಮದೇ ದುನಿಯಾ ನಡೆಯೋದು ಎಂದು ಹೇಳಿದ್ನಂತೆ. ಅಷ್ಟರಲ್ಲಿ ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಜನರ ಗುಂಪು ಏಕಾಏಕಿ ದಾಳಿ ಮಾಡಿತು. ಇಬ್ಬರು ಕೈಗಳಿಂದ ಹಲ್ಲೆ ಮಾಡಿದ್ರೆ ಇನ್ನಿಬ್ಬರು ಬಿಯರ್ ಬಾಟೆಲ್ನಿಂದ ರಕ್ತಗಾಯ ಮಾಡಿದ್ರು ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ ಬಾರ್ನಲ್ಲಿ ನೀರು ಕುಡಿಯಲು ಹೋದವರ ಮೇಲೆ ದಾಳಿ ಆಗಿದ್ಯಾಕೆ..? ನೀರು ಕುಡಿಯುವ ವಿಚಾರಕ್ಕೆ ಗಲಾಟೆ ಆಗುವುದು ಸತ್ಯವಾ..? ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಆದರೆ ಬಿಯರ್ ಬಾಟೆಲ್ ಹಿಡಿದು ಹಲ್ಲೆ ಮಾಡಲು ಮುಂದಾದರು ಎನ್ನುವುದಾದರೆ ನಟ ನಿರಂಜನ್ ಮಾಡಿದ ತಪ್ಪಾದರೂ ಏನು..? ಅನ್ನೋ ಪ್ರಶ್ನೆಯೂ ಮೂಡುತ್ತದೆ. ದೂರು ದಾಖಲು ಮಾಡಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ಕ್ಯಾಂಟನ್ ಬಾರ್ & ಕಿಚನ್ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹ ಮಾಡಿ ವಿಚಾರಣೆ ಮಾಡಿದ ಬಳಿಕ ಸತ್ಯಾಂಶ ಏನು ಅನ್ನೋದು ತಿಳಿಯಬೇಕಿದೆ. ಆದರೆ ನಟನ ಕಡೆಯ ವಾದ ಮಾತ್ರ ಗೊತ್ತಾಗಿದ್ದು, ಮತ್ತೊಂದು ಕಡೆಯ ಆರೋಪವೂ ಗೊತ್ತಾಗಬೇಕಿದೆ.



